twitter
    For Quick Alerts
    ALLOW NOTIFICATIONS  
    For Daily Alerts

    ಗುರುಕಿರಣ್‌ ಗುರ್‌ಗುರ್‌!

    By Staff
    |

    ‘ಜೋಗಿ’ ಚಿತ್ರದ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ..’ ಹಾಡಿಗೆ ಪ್ರಶಸ್ತಿ ನೀಡದ ಸೀತಾರಾಂಗೆ, ಆರತಿ, ಮಹಾ ಮಂಗಳಾರತಿ!

    ‘ಈ ಸಲ ಅರ್ಹರಿಗೆ ಪ್ರಶಸ್ತಿ ನೀಡಿದ್ದೇವೆ. ಯಾರಲ್ಲೂ ಅಸಮಾಧಾನಗಳಿಲ್ಲ’ ಎಂದು ರಾಜ್ಯ ಪ್ರಶಸ್ತಿಗಳ ಆಯ್ಕೆ ಸಮಿತಿಯ ಟಿ.ಎನ್‌.ಸೀತಾರಾಂ, ‘ಮುಕ್ತ’ ಸೀರಿಯಲ್‌ನ ಸಿಎಸ್ಪಿ ಸ್ಟೈಲ್‌ನಲ್ಲಿ ಪತ್ರಕರ್ತರ ಮುಂದೆ ಮಾತಾಡಿದ್ದರು. ಅಷ್ಟರಲ್ಲಿ ಜಗ್ಗೇಶ್‌ ಪ್ರಶಸ್ತಿ ಬಿಸಾಕಿ, ಕಿಡಿಕಾರಿದ್ದರು. ಈಗ ಗುರುಕಿರಣ್‌ ಸರದಿ.

    ಗುರು ಸಕತ್ತು ಬೇಸರಗೊಂಡಿದ್ದಾರೆ. ಮಕ್ಕಳು ಒಳ್ಳೆ ಕೆಲಸ ಮಾಡಿದಾಗ, ದೊಡ್ಡವರು ಚಾಕಲೇಟ್‌ ಕೊಡದಿದ್ದರೇ, ಎಷ್ಟು ಸಿಟ್ಟು ಬರುತ್ತೋ, ಅದಕ್ಕಿಂತಲೂ ರವಷ್ಟು ಜಾಸ್ತಿಯೇ ಸಿಟ್ಟು ಅವರ ಮೂಗಿನ ಮೇಲಿದೆ.

    ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘‘ಕಳೆದ ಐದಾರು ವರ್ಷಗಳಿಂದ ರಾಜ್ಯ ಪ್ರಶಸ್ತಿ ನಿರೀಕ್ಷೆಯಲ್ಲಿದ್ದೇನೆ. ಅದು ಪ್ರತಿವರ್ಷ ಮಿಸ್‌ ಆಗುತ್ತಲೇ ಇದೆ... ‘ಜೋಗಿ’ಚಿತ್ರಕ್ಕೆ ಪ್ರಶಸ್ತಿ ಬಂದೇ ಬರುತ್ತೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಆಯ್ಕೆ ಸಮಿತಿಗೆ ಅದು ಕಾಣಿಸಲೇ ಇಲ್ಲ.. ’’ ಎಂದು ಮುಖವನ್ನು ಸಣ್ಣದು ಮಾಡಿಕೊಂಡರು.

    ‘‘ಒಳ್ಳೆ ಸಂಗೀತ ನೀಡುವುದನ್ನು, ಸಮಾಜದಲ್ಲಿ ಜನರೊಂದಿಗೆ ಬೆರೆಯುವುದನ್ನು ನಾನು ಕಲಿತಿದ್ದೇನೆ. ಆದರೆ ಪ್ರಶಸ್ತಿ ಪಡೆಯುವುದು ಹೇಗೆಂಬುದನ್ನು ಕಲಿಯಲಿಲ್ಲ. ನಾನೀಗ ಪ್ರಶಸ್ತಿಗಳ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದೇನೆ ’’ ಎನ್ನುವ ಮೂಲಕ ಪ್ರಶಸ್ತಿಗಳಿಂದಿನ ರಾಜಕೀಯದ ಬಗ್ಗೆ ಅಪರೋಕ್ಷವಾಗಿ ಅವರು ದೂರಿದರು.

    ಹಿಂಸೆ ಮತ್ತು ಕ್ರೌರ್ಯದ ಚಿತ್ರಗಳಿಗೆ ಪ್ರಶಸ್ತಿ ನೀಡಿಲ್ಲ ಎಂದು ಸೀತಾರಾಂ ಹೇಳಿದ್ದಾರೆ. ಆದರೆ ಜೋಗಿ ಚಿತ್ರದ ಪಾತ್ರಕ್ಕೆ ಶಿವರಾಜ್‌ ಕುಮಾರ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ. ಈ ಚಿತ್ರದ ಜನಪ್ರಿಯ ಹಾಡು ; ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’. ಈ ಹಾಡಿನಲ್ಲಿ ಮೊದಲ ಸಾಲು ಜಾನಪದ. ಉಳಿದದ್ದು ನನ್ನ ಸೃಷ್ಟಿ. ಇದೇ ರೀತಿ ಜಾನಪದ ಗೀತೆಯ ಸಾಲೊಂದನ್ನು ಬಳಸಿಕೊಳ್ಳಲಾದ ‘ಜನುಮದ ಜೋಡಿ’ ಚಿತ್ರದ ‘ಕೋಲುಮಂಡೆ ಜಂಗಮ ದೇವಾ..’ ಹಾಡು ಬರೆದವರಿಗೆ ಹಿಂದೆ ರಾಜ್ಯಪ್ರಶಸ್ತಿ ಸಿಕ್ಕಿದೆ! ಆವರಿಗೊಂದು ನ್ಯಾಯ. ನನಗೊಂದು ನ್ಯಾಯವೇ ಎಂಬ ತರ್ಕ, ಗುರುಕಿರಣ್‌ ಅವರದು.

    Friday, March 29, 2024, 20:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X