»   » ಏನಿಲ್ಲ ಏನಿಲ್ಲ..ನನ್ನ ವಿಜಿ ನಡುವೆ ಅಂಥದ್ದೇನಿಲ್ಲ : ಶುಭಾ

ಏನಿಲ್ಲ ಏನಿಲ್ಲ..ನನ್ನ ವಿಜಿ ನಡುವೆ ಅಂಥದ್ದೇನಿಲ್ಲ : ಶುಭಾ

Subscribe to Filmibeat Kannada

ದುನಿಯಾ ವಿಜಯ್ ಯಾಕೋ ಪದೇಪದೇ ವಿವಾದಗಳಿಗೆ ಸಿಲುಕುತ್ತಿದ್ದಾರೆ. 'ಚಂಡ' ವಿವಾದ ಮುಗಿದ ಬೆನ್ನಲ್ಲಿಯೇ, 'ಚಂಡ' ನಾಯಕಿ ಶುಭಾ ಪೂಂಜಾ ಜೊತೆ ಅವರ ಹೆಸರು ಅಂಟಿಕೊಂಡಿದೆ. ಎಲ್ಲೆಡೆ ಇದೇ ಚರ್ಚೆ. ಶುಭಾ ಜೊತೆ ವಿಜಯ್ ಚಕ್ಕಂದ ಮುಂದುವರೆದಿದೆ.. ಇಬ್ಬರು ಮದುವೆಯಾದರು ಅನ್ನುವ ತನಕ ಟ್ಯಾಬ್ಲಾಯ್ಡು ಪತ್ರಿಕೆಗಳು ಗಾಸಿಪ್ ಬರೆದು ಪುಳಕಗೊಂಡಿವೆ!

ಈ ಕಿರಿಕಿರಿಯಿಂದ ಬೇಸತ್ತಿರುವ ನಾಯಕಿ ಶುಭಾ ಪೂಂಜಾ, ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ನಾನು ಮತ್ತು ವಿಜಿ ಒಳ್ಳೆ ಸ್ನೇಹಿತರು. ಸ್ನೇಹವನ್ನು ಪ್ರೇಮವೆಂದರೆ ಹೇಗೆ? ಈ ಗಾಸಿಪ್ ನಿಂದ ನನಗೆ ಸಕತ್ತು ಬೇಸರವಾಗಿದೆ. ಗಾಸಿಪ್ ಗಳನ್ನು ನಾನು ಕೇರ್ ಮಾಡುವುದಿಲ್ಲ. ಇವೆಲ್ಲ ಈ ರಂಗದಲ್ಲಿ ಇದ್ದಿದ್ದೇ. ಆದರೆ ಈ ಮಟ್ಟಕ್ಕೆ ಸುಳ್ಳು ಸುದ್ದಿಗಳು ಹರಡುತ್ತವೆ ಎಂಬುದು ನನಗೆ ಗೊತ್ತಿರಲಿಲ್ಲ. ಸಿನಿಮಾದಲ್ಲಿ ಅಭಿನಯಿಸಿದಾಗ ಪರಿಚಯವಾಯಿತು. ಸಲುಗೆಯಿಂದ ನಾನು ವಿಜಯ್ ಮಾತನಾಡಿದ್ದೇ ಇವರ ದೃಷ್ಟಿಯಲ್ಲಿ ಪ್ರೀತಿಯಂತೆ ಕಂಡಿದೆ ಎಂದು ಶುಭಾ ಅಸಮಾಧಾನಗೊಂಡರು.

ನಾನು ಈಗತಾನೇ ಬಣ್ಣದ ಬದುಕಿಗೆ ಕಾಲಿಡುತ್ತಿದ್ದೇನೆ. ನಾನು ನಾನಾಗಿ ಬೆಳೆಯಬೇಕು. ನನ್ನ ಮದುವೆಗೆ ಇನ್ನೂ ನಾಲ್ಕೈದು ವರ್ಷ ಸಮಯವಿದೆ. ಸುಮ್ಮನೇ ಅನಗತ್ಯ ಗಾಸಿಪ್ ಗಳನ್ನು ಸೃಷ್ಟಿಸ ಬೇಡಿ ಎಂದು ಪತ್ರಕರ್ತರನ್ನು ಶುಭಾ ಕೈಮುಗಿದು ಕೋರಿದರು.

ಅಂದ ಹಾಗೇ, ವಿಜಯ್ ಗೆ ಈಗಾಗಲೇ ಮದುವೆಯಾಗಿದ್ದು, ಅವರು ಇಬ್ಬರು ಮಕ್ಕಳ ತಂದೆ. ಈ ಬಣ್ಣದ ಬದುಕಿನಲ್ಲಿ ಅವರಿವರಿಗೆ ಸಂಬಂಧ ಕಲ್ಪಿಸುವ ಕಾಯಿಲೆ ಇದ್ದದ್ದೇ. ಕೆಲವು ಸಲ ಕಣ್ಣಿಗೆ ರಾಚುವಂತೆ ನಟನಟಿಯರು ವರ್ತಿಸುವುದೂ ಉಂಟು!

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...