ವಿಷ್ಣುವರ್ಧನ ಚಿತ್ರ ನೋಡಲು ಭಾರತಿ ಬರಲಿಲ್ಲ ಏಕೆ?
ಸದ್ಯಕ್ಕೆ ಕನ್ನಡದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ಚಿತ್ರ ಸುದೀಪ್ ಅಭಿನಯದ ದ್ವಾರಕೀಶ್ ನಿರ್ಮಾಣದ ವಿಷ್ಣುವರ್ಧನ. ಈ ಚಿತ್ರದ ವಿಶೇಷ ಪ್ರದರ್ಶನವನ್ನು ಭಾರತಿ ವಿಷ್ಣುವರ್ಧನ್ ಅವರಿಗಾಗಿ ದ್ವಾರಕೀಶ್ ಆಯೋಜಿಸಿದ್ದರು. ಚಿತ್ರವನ್ನು ವೀಕ್ಷಿಸಲು ಭಾರತಿ ವಿಷ್ಣುವರ್ಧನ್ ಕೂಡ ಒಪ್ಪಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಭಾರತಿ ಚಿತ್ರ ಪ್ರದರ್ಶಕ್ಕೆ ಹೋಗಿಲ್ಲ. ಕಾರಣ ಏನು?
ಭಾರತಿ ವಿಷ್ಣುವರ್ಧನ್ ಮತ್ತು ಡಾ.ವಿಷ್ಣುವರ್ಧನ್ ಅವರ ಕೆಲವು ಗೆಳೆಯರಿಗಾಗಿಯೇ ದ್ವಾರಕೀಶ್ ವಿಷ್ಣುವರ್ಧನ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಚಿತ್ರ ಬಿಡುಗಡೆಗೂ ಒಂದು ದಿನ ಮುನ್ನ (ಡಿ.7) ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಹೇಳಿ ಭಾರತಿ ವಿಶೇಷ ಪ್ರದರ್ಶನಕ್ಕೆ ಹೋಗಿಲ್ಲ.
ಭಾರತಿ ವಿಷ್ಣುವರ್ಧನ್ ಹೋಗಲಿಲ್ಲ ಎಂಬ ಕಾರಣಕ್ಕೆ ಅವರ ಗೆಳೆಯರು ಚಿತ್ರ ಪ್ರದರ್ಶನಕ್ಕೆ ಹೋಗಿಲ್ಲ. ಆದರೆ ಭಾರತಿ ಅವರು ಹೋಗದೆ ಇರುವುದಕ್ಕೆ ಕಾರಣವೇ ಬೇರೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ಭಾರತಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಡುವೆ ಒಂದು ಒಪ್ಪಂದವಾಗಿತ್ತು.
ವಿಷ್ಣುವರ್ಧನ ಚಿತ್ರ ಬಿಡುಗಡೆಗೂ ಮುನ್ನ ಭಾರತಿ ಮತ್ತು ಟೀಂಗೆ ವಿಶೇಷ ಪ್ರದರ್ಶನ ಏರ್ಪಡಿಸುವುದು. ಚಿತ್ರದ ಬಗ್ಗೆ ಆಕ್ಷೇಪಣೆ ಏನಾದರೂ ಇದ್ದರೆ ಚಲನಚಿತ್ರ ನಿರ್ಮಾಪಕರ ಸಂಘದ ಗಮನಕ್ಕೆ ತರುವುದು ಎಂದು ಮಾತುಕತೆಯಾಗಿತ್ತಂತೆ. ಆದರೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ದ್ವಾರಕೀಶ್ ಯಾರಿಗೂ ಸುಳಿವು ನೀಡದಂತೆ ಮತ್ತೊಂದು ಪ್ಲಾನ್ ಮಾಡಿದ್ದರು.


Click it and Unblock the Notifications











