ರಿಯಾ, ಅಶ್ಮಿತ್ ಸೆಕ್ಸ್ ವಿಡಿಯೋ ಅಂತರ್ಜಾಲಕ್ಕೆ ಲಗ್ಗೆ
ಅಶ್ಮಿತ್ ಪಟೇಲ್ ಮತ್ತು ರಿಯಾ ಸೇನ್ ಅವರ ಕಾಮಕೇಳಿ ವಿಡಿಯೋ ಒಂದು ಅಂತರ್ಜಾಲದಲ್ಲಿ ಬಿಡುಗಡೆಯಾಗಿ ಪಡ್ಡೆಗಳ ಪಾಲಿಗೆ ಆಂಬೊಡೆಯಾಗಿದೆ. ಈ ವಿಡಿಯೋವನ್ನು ಮೂರು ವರ್ಷಗಳ ಹಿಂದೆಯೇ ಚಿತ್ರೀಕರಿಸಲಾಗಿದ್ದು, ಈಗ ಅಷ್ಮಿತ್ ಪಟೇಲ್ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಪ್ರವೇಶ ಪಡೆದ ಹಿನೆಲೆಯಲ್ಲಿ ಬಿಡುಗಡೆಯಾಗಿದೆ.
ವಿಡಿಯೋದಲ್ಲಿರುವ ಹುಡುಗಿಯನ್ನು ಅಶ್ಮಿತ್ ಪಟೇಲ್ ಗೆಳತಿ ಎನ್ನಲಾಗಿದೆ. ತಾನೊಬ್ಬ ಸಂಭಾವಿತ ಮನುಷ್ಯ ಎಂದು 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಅಶ್ಮಿತ್ ನಿರೂಪಿಸಿಕೊಳ್ಳಲು ಹೊರಟಿದ್ದಾರೆ. ಈಗ ಈತ ಮಾಡಿರುವ ಘನಂದಾರಿ ಕೆಲಸದ ವಿಡಿಯೋ ಅಂತರ್ಜಾಲದಲ್ಲಿಬಿಡುಗಡೆಯಾಗಿ ಆತಬ ಎಲ್ಲಾ ಯೋಜನೆಗಳನ್ನ್ನು ತಲೆಕೆಳಗೆ ಮಾಡಿದೆ.
ಯೂ ಟ್ಯೂಬ್ ಸೇರಿದಂತೆ ಹಲವು ಅಶ್ಲೀಲ ತಾಣಗಳಲ್ಲಿ ಈ ವಿಡಿಯೋ ತುಣುಕು ಇಣುಕಿ ಗುಲ್ಲೆಬ್ಬಿಸಿದೆ. 'ಬಿಗ್ ಬಾಸ್'ನ ಇತರರೊಡನೆ ಈಗ ಈ ವಿಡಿಯೋ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇದರಿಂದ ಅಶ್ಮಿತ್ ಪಟೇಲ್ ಇರುಸು ಮುರುಸು ಅನುಭವಿಸುವಂತಾಗಿದೆ. ಆದರೆ ರಿಯಾ ಸೇನ್ ಮಾತ್ರ ಈ ವಿಡಿಯೋದಲ್ಲಿರುವುದು ನಾನಲ್ಲ ಎಂದಿದ್ದಾರೆ. ಈ ವಿಡಿಯೋಗೆ 'ರಿಯಾ ಅಷ್ಮಿತಾ ಎಂಎಂಎಸ್ ಸ್ಕ್ಯಾಂಡಲ್' ಎಂದು ನಾಮಕರಣ ಮಾಡಲಾಗಿದೆ.


Click it and Unblock the Notifications











