ರಮ್ಯಾ, ರೂಪಾ ಅಯ್ಯರ್ ಮಧ್ಯೆ ಆಗಿಲ್ಲ ಜಟಾಪಟಿ

<ul id="pagination-digg"><li class="previous"><a href="/gossips/08-actress-ramya-out-movie-chandra-roopa-iyer-direction-aid0172.html">« Previous</a>

Prem Ramya
ಎಲ್ಲರಿಗೂ ತಿಳಿದಿರುವಂತೆ ನಿರ್ದೇಶಕಿ ರೂಪಾ ಅಯ್ಯರ್ ಮತ್ತು ನಾಯಕಿ ರಮ್ಯಾ ಪರಸ್ಪರ ಆಪ್ತರು. ಆದರೆ ಸಿನಿಮಾ ವಿಚಾರದಲ್ಲಿ ಇಬ್ಬರೂ ರಾಜಿಯಾಗಿಲ್ಲ. ರೂಪಾ ಅಯ್ಯರ್ ನಿರ್ಮಾಪಕರ ಕಡೆ ನಿಂತು, ರಾಧಿಕಾ ಪಂಡಿತ್ ಅಥವಾ ಪ್ರಿಯಾಮಣಿ ಕರೆಸಲು ಸಿದ್ಧವಾಗಿದ್ದಾರೆ. "ರಮ್ಯಾ ಸಂಭಾವನೆಯೂ ಜಾಸ್ತಿಯಲ್ವೇ" ಎಂದು ನೇರವಾಗಿಯೇ ನಿರ್ಮಾಪಕರನ್ನು ಪ್ರಶ್ನಿಸಿದ್ದಾರೆ.

ತನ್ನ ಪಾತ್ರ ಮುಖ್ಯವಾಗಿರಬೇಕು, ತನಗೆ ಅಭಿನಯಸಿಲು ಹೆಚ್ಚು ಅವಕಾಶವಿರಬೇಕು. ನಾಯಕರು ಅಥವಾ ನಿರ್ದೇಶಕರು ಮುಖ್ಯವಲ್ಲ ಎಂಬುದು ರಮ್ಯಾ ನಿಲುವು. ಅದೇ ನಿಲುವನ್ನು ಅನುಸರಿಸಿಯೇ ರಮ್ಯಾ ನಂ ಒನ್ ನಟಿಯಾಗಿ ಬೆಳೆದಿದ್ದಾರೆ ಕೂಡ. ಆದರೆ ರಮ್ಯಾ, ನೈಜ ಕಥೆಯಾಧಾರಿತ ಚಿತ್ರಕ್ಕೆ ಬದಲಾವಣೆ ಬಯಸುವುದು ಎಷ್ಟರಮಟ್ಟಿಗೆ ಸರಿ? ಉತ್ತಮ ಸಿನಿಮಾವೊಂದನ್ನು ರಮ್ಯಾ ಮಿಸ್ ಮಾಡಿಕೊಂಡರೇ ಎಂಬುದು ರಮ್ಯಾ ಅಭಿಮಾನಿಗಳ ಅಳಲು.

ಆದರೆ ರಮ್ಯಾ ಮನಸ್ಸಿನಲ್ಲಿ ಏನಿದೆಯೋ. ಅವರು ಎಷ್ಟು ಬೆಳೆಯಬೇಕು, ಅವರೆಷ್ಟು ದಿನ ಉಳಿಯಬೇಕು ಎಂಬುದನ್ನು ನಿರ್ಧರಿಸಬೇಕಾದವರೂ ಅವರೇ. ಚಂದ್ರ ಚಿತ್ರದಲ್ಲಿ ಅವರ ಪಾತ್ರ ಹೇಗಿದೆ, ಏನು ಕಥೆ ಎಂಬುದು ರಮ್ಯಾಗೆ ಮಾತ್ರ ಗೊತ್ತಿದೆ. ಆದರೆ ಒಳ್ಳೆಯ ಪಾತ್ರ ಕಳೆದುಕೊಳ್ಳುವುದು ಸರಿಯಲ್ಲ, ಹಠಮಾರಿಯಾಗಿ ಇತ್ತೀಚೆಗಷ್ಟೇ ತಮಿಳಿನಲ್ಲೂ ಎರಡು ಚಿತ್ರಗಳನ್ನು ಕಳೆದುಕೊಂಡಿದ್ದಾರೆ ಎಂಬುದು ರಮ್ಯಾ ಮೇಲೆ ಅಭಿಮಾನಿಗಳ ಆರೋಪ.

ಒಟ್ಟಿನಲ್ಲಿ ನೈಜಕಥೆಯ ರಾಣಿ ಪಾತ್ರವನ್ನು ಕಳೆದುಕೊಂಡಿದ್ದಾರೆ ಸುರಸುಂದರಾಗಿ, ಸ್ಯಾಂಡಲ್ ವುಡ್ ರಾಣಿ ರಮ್ಯಾ. ರಮ್ಯಾರನ್ನು ಚಂದ್ರನ ಪ್ರೇಯಸಿಯಾಗಿ ಲವ್ಲಿ ಸ್ಟಾರ್ ಪ್ರೇಮ್ ಜೊತೆ ನೋಡುವ ಭಾಗ್ಯವನ್ನು ಕನ್ನಡ ಪ್ರೇಕ್ಷಕರು ಕಳೆದುಕೊಂಡಿದ್ದಾರೆ. ಮುಂದೇನಾಗುತ್ತೋ ಯಾರಿಗೆ ಗೊತ್ತು? (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/08-actress-ramya-out-movie-chandra-roopa-iyer-direction-aid0172.html">« Previous</a>

More from Filmibeat

English summary
Actress Ramya went out from Kannada Movie Chandra, which is directing by her friend, director Roopa Iyer, The reason is revealed. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X