For Quick Alerts
  ALLOW NOTIFICATIONS  
  For Daily Alerts

  10 ವರ್ಷದಿಂದ ರಾಣಾ ನಂಗೆ ಗೊತ್ತು, ಲವ್ ಇಲ್ಲ

  By Mahesh
  |

  ಬಹುಶಃ ಈ ರೀತಿ ಸುದ್ದಿ ಹಬ್ಬುತ್ತದೆ ಎಂದು ತ್ರಿಷಾ ಕೂಡಾ ನಿರೀಕ್ಷಿಸಿರಲಿಲ್ಲ ಎಂದೆನಿಸುತ್ತದೆ. ತ್ರಿಷಾ ಕೃಷ್ಣನ್ ಹಾಗೂ ರಾಣಾ ದಗ್ಗುಬಾತಿ ನಡುವೆ ಏನೋ ನಡೆಯುತ್ತಿದೆ. ತ್ರಿಷಾ ವಿಷಯವಾಗಿ ರಾಣಾ ಹಾಗೂ ಬಿಪಾಶಾ ನಡುವೆ ವೈಮನಸ್ಯ ಏರ್ಪಟ್ಟಿದೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

  'ಆದರೆ, ಮಾಧ್ಯಮ ವರದಿ ಅರ್ಧಸತ್ಯ ಮಾತ್ರ ಹೇಳುತ್ತಿದೆ. ನಾನು ಹೊಸವರ್ಷಾಚರಣೆಗೆ ಗೋವಾಗೆ ಹೋಗಿದ್ದ ಸಂದರ್ಭದಲ್ಲಿ ರಾಣಾನನ್ನು ಭೇಟಿ ಮಾಡಿದ್ದು ನಿಜ. ರಾಣಾ ಜೊತೆ ಬಿಪಾಶಾ ಸೇರಿದಂತೆ ಹಲವು ಗೆಳೆಯ, ಗೆಳತಿಯರ ಸಮೂಹವಿತ್ತು.

  ಬಿಪಾಶಾ ಜೊತೆ ರಾಣಾ ಸಂಬಂಧದ ಬಗ್ಗೆ ನಾನೇನು ಹೇಳಲಾರೆ. ಅದರೆ, ನನ್ನ ಜೊತೆ ರಾಣಾನಿಗೆ ಇರುವುದು ಬರೀ ಸ್ನೇಹ ಸಂಬಂಧ ಮಾತ್ರ ಎಂದು ತ್ರಿಷಾ ಸ್ಪಷ್ಟಪಡಿಸಿದ್ದಾರೆ.

  ಟಾಲಿವುಡ್, ಕಾಲಿವುಡ್ ನ ತಾರೆ 28 ವರ್ಷದ ತ್ರಿಷಾ ಹೇಳುವಂತೆ ರಾಣಾ ಹಾಗೂ ಆಕೆ ಸುಮಾರು 10 ವರ್ಷದಿಂದ ಸ್ನೇಹಿತರಾಗಿದ್ದಾರೆ. ಚಿತ್ರರಂಗದಲ್ಲಿರುವ ಸಮಾನ ಮನಸ್ಕರ ಗುಂಪನ್ನು ಕಟ್ಟಿಕೊಂಡು ಆಗಾಗ್ಗೆ ಈ ರೀತಿ ಸಂಭ್ರಮಾಚರಣೆಯಲ್ಲಿ ತೊಡಗುತ್ತೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ತ್ರಿಷಾ ಹೇಳಿದ್ದಾಳೆ.

  ಆದರೆ, ಮಾಧ್ಯಮಗಳ ವರದಿಯಂತೆ ಬಿಪಾಶಾಳನ್ನು ಬಿಟ್ಟು ತ್ರಿಷಾ ಬಳಿಕ ಬಂದ ರಾಣಾ, ಬಿಪಾಶಾಳನ್ನು ಸಂಪೂರ್ಣ ಮರೆತುಬಿಟ್ಟನಂತೆ. ಇದರಿಂದ ನೊಂದ ಬಿಪಾಶಾ ಸಾಮಾಜಿಕ ಜಾಲ ತಾಣಗಳಲ್ಲಿ ರಾಣಾನನ್ನು ಹಿಂಬಾಳಿಸುವುದನ್ನು ಬಿಟ್ಟುಬಿಟ್ಟಳಂತೆ ಎನ್ನಲಾಗಿತ್ತು. ಈ ಪ್ರಕರಣದ ಬಗ್ಗೆ ಬಿಪಾಶಾ ಇನ್ನೂ ತುಟಿಪಿಟ್ಟಕ್ ಎಂದಿಲ್ಲ.

  English summary
  Irked by the speculations, Trisha Krishnan has come forward to clarify the issue. The actress claims that she was with Rana Daggubati's gang on the New Year's bash. But denies the reports that claimed Rana-Trisha getting cosy. The 28-year-old adds that she knows him from the past 10 years and they share common group of friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X