ವಿಷ್ಣುವರ್ಧನ ಟೈಟಲ್ ನೀಡದಿರಲು ಭಾರತಿ ಯಾರು?
ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ನಿರ್ಮಿಸುತ್ತಿರುವ 'ವಿಷ್ಣುವರ್ಧನ' ಶೀರ್ಷಿಕೆ ವಿವಾದಕಗ್ಗಂಟಾಗಿ ಪರಿಣಮಿಸಿದೆ. ಭಾರತಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಡುವೆ 'ನೀ ಕೊಡೆ ನಾ ಬಿಡೆ' ಎಂಬಂತೆ ಶೀರ್ಷಿಕೆಗಾಗಿ ತಿಕ್ಕಾಟ ನಡೆದಿದೆ.
ವಿಷ್ಣುವರ್ಧನ ಶೀರ್ಷಿಕೆ ವಿವಾದ ದಿನೇದಿನೇ ಬಿಗಡಾಯಿಸುತ್ತಿದ್ದು ಸದ್ಯಕ್ಕೆ ಪರಿಹಾರ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಚಿತ್ರದ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ದ್ವಾರಕೀಶ್ ಬಿಗಿಪಟ್ಟು ಹಿಡಿದ್ದಾರೆ. ಭಾರತಿ ವಿಷ್ಣುವರ್ಧನ್ ವಿರುದ್ಧ ದ್ವಾರಕೀಶ್ ಹರಿಹಾಯ್ದು ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದಾರೆ.
"ವಿಷ್ಣುವರ್ಧನ ಟೈಟಲ್ ನೀಡದಿರಲು ಭಾರತಿ ಯಾರು?" ಎಂದು ದ್ವಾರಕೀಶ್ ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ. "ವಿಷ್ಣುವರ್ಧನ್ ಹೆಸರಿನವರು ಕ್ಯಾಮರಾಮನ್ ಇದ್ದಾರೆ. ಚೆನ್ನೈನಲ್ಲಿ ನಿರ್ದೇಶಕರಿದ್ದಾರೆ. ವಿಷ್ಣುವರ್ಧನ್ ಹೆಸರಿನವರೆಲ್ಲಾ ಭಾರತಿ ಕಡೆಯವರಾ?" ಎಂದು ದ್ವಾರ್ಕಿ ಪ್ರಶ್ನಿಸಿದ್ದಾರೆ.
ವಿಷ್ಣುವರ್ಧನ್ ಹೆಸರಿನ ರಾಜನೂ ಇದ್ದಾನೆ. ರಾಮ, ಕೃಷ್ಣ, ವಿಷ್ಣುವರ್ಧನ ಹೆಸರಿಡಲು ಇವರ ಅನುಮತಿ ಬೇಕಾ? ವಿಷ್ಣುವರ್ಧನ್ ಸಾಮಾನ್ಯವಾದ ಹೆಸರು. ಅದೇ ಹೆಸರಿನಲ್ಲಿ ಚಿತ್ರ ಮಾಡುತ್ತೇನೆ. ಕೊಡಲ್ಲ ಅನ್ನಲು ಇವರ್ಯಾರು? ಹೀಗೆ ಪ್ರಶ್ನೆಗಳ ಸರಮಾಲೆಯನ್ನೇ ಎಸೆದಿದ್ದಾರೆ. ಆದರೆ ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











