ಮತ್ತೆ ಡಬ್ಬಿಂಗ್ ಕಿಡಿ : ವಿಜಯಶಾಂತಿಯ ‘ಗೌಡ್ತಿ’ಗೆ ಅಡ್ಡಿ
ಚಿತ್ರ ಪ್ರದರ್ಶಿಸಿದರೆ ಗಂಭೀರ ಪರಿಣಾಮ : ಕನ್ನಡ ಸಂಘಟನೆಗಳ ಎಚ್ಚರಿಕೆ.
ಚಿತ್ರೋದ್ಯಮದ ಹಿತದೃಷ್ಟಿಯಿಂದ ಗೌಡ್ತಿ ಚಿತ್ರವನ್ನು ನರ್ತಕಿ ಸೇರಿದಂತೆ ರಾಜ್ಯದ ಇನ್ನಿತರ ಚಿತ್ರಮಂದಿರಗಳು ಪ್ರದರ್ಶಿಸಬಾರದು. ಕನ್ನಡ ಚಿತ್ರೋದ್ಯಮ ಮತ್ತು ಕಲಾವಿದರ ಹಿತದೃಷ್ಟಿಯಿಂದ ಡಬ್ಬಿಂಗ್ ಚಿತ್ರಗಳಿಗೆ 1970ರಿಂದ ನಿಷೇಧ ಏರಲಾಗಿದೆ. ಈ ನಿಯಮ ಇಂದಿಗೂ ಪ್ರಸ್ತುತವಾಗಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಚಿತ್ರ ಪ್ರದರ್ಶನಕ್ಕೆ ಮುಂದಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ.
ಬಹುವರ್ಷಗಳ ನಂತರ ವಿಜಯಶಾಂತಿ ಅಭಿನಯದ ‘ನಾಯುಡಮ್ಮ’ ಆಂಧ್ರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕನ್ನಡದ ಡಬ್ಬಿಂಗ್ ಆವೃತ್ತಿ ‘ಗೌಡ್ತಿ’.
(ದಟ್ಸ್ ಕನ್ನಡ ವಾರ್ತೆ)
Post your views


Click it and Unblock the Notifications











