»   » ನಿರ್ಮಾಪಕರಿಗೆ ಮುನ್ನಡೆ : ಕಾರ್ಮಿಕರ ಬಳಗಕ್ಕೆ ಹಿನ್ನಡೆ

ನಿರ್ಮಾಪಕರಿಗೆ ಮುನ್ನಡೆ : ಕಾರ್ಮಿಕರ ಬಳಗಕ್ಕೆ ಹಿನ್ನಡೆ

Subscribe to Filmibeat Kannada


ಬೆಂಗಳೂರು : ಹತ್ತು ನಿರ್ಮಾಪಕರ ಸಿನಿಮಾಗಳಿಗೆ ಬಹಿಷ್ಕಾರ ಹಾಕಿದ್ದ, ಚಲನಚಿತ್ರ ಕಾರ್ಮಿಕ ಒಕ್ಕೂಟದ ಮಾನ್ಯತೆ ರದ್ದಾಗಿದೆ. ಸಿನಿಮಾ ಬಿಕ್ಕಟ್ಟು ಆ ಮೂಲಕ ಮತ್ತಷ್ಟು ಕಗ್ಗಂಟಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್‌, ಮನಬಂದಂತೆ ವರ್ತಿಸುತ್ತಿದ್ದಾರೆ. ಅವರಿಂದಾಗಿ ತಮ್ಮ ಚಿತ್ರಗಳಿಗೆ ಸಾಕಷ್ಟು ನಷ್ಟವಾಗಿದೆ. ಸರ್ವಾಧಿಕಾರಿಯಂತೆ, ಒಕ್ಕೂಟವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಿರ್ಮಾಪಕರು ಸಭೆಯಲ್ಲಿ ತಮ್ಮ ಅಸಮಾಧಾನ ಮಂಡಿಸಿದರು.

ಇನ್ನು ಮುಂದೆ ಕಾರ್ಮಿಕ ಒಕ್ಕೂಟಕ್ಕೂ, ನಿರ್ಮಾಪಕರಿಗೂ ಯಾವುದೇ ಸಂಬಂಧವಿಲ್ಲ. ತಮಗೆ ಬೇಕಾದ ಕಾರ್ಮಿಕರನ್ನು ನಿರ್ಮಾಪಕರು ಬಳಸಿಕೊಳ್ಳಬಹುದು ಎಂದು ಮಂಡಳಿ ಸೂಚನೆ ನೀಡಿದೆ. ಮಂಡಳಿ ತೀರ್ಮಾನದಿಂದ ನಿರ್ಮಾಪಕರ ಸಂಘಕ್ಕೆ ಗೆಲುವಿನ ಹರ್ಷ.

ಮಂಡಳಿ ನಿರ್ಧಾರವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಸಂದೇಶ್‌ ನಾಗರಾಜ್‌ ಸ್ವಾಗತಿಸಿದ್ದಾರೆ. ಮತ್ತೊಂದು ಕಡೆ ಅಶೋಕ್‌, ಮಂಡಳಿ ಧೋರಣೆಯಿಂದ ಕಾರ್ಮಿಕರಿಗೆ ಅಸಮಾಧಾನವಾಗಿದೆ. ನಿರ್ಮಾಪಕರ ದೌರ್ಜನ್ಯ ಮತ್ತು ಕನ್ನಡ ವಿರೋಧಿ ನೀತಿಗೆ ಅದು ಕುಮ್ಮಕ್ಕು ನೀಡಿದೆ ಎಂದು ದೂರಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada