»   » ಬೆಳ್ಳಿತೆರೆಗೆ ಡಿ.22ರಿಂದ ಕಪ್ಪು !

ಬೆಳ್ಳಿತೆರೆಗೆ ಡಿ.22ರಿಂದ ಕಪ್ಪು !

Subscribe to Filmibeat Kannada

ಬೆಂಗಳೂರು : ಸೇವಾ ಶುಲ್ಕ ರದ್ದುಪಡಿಸಿರುವ ಸರ್ಕಾರದ ಆದೇಶವನ್ನು ಪ್ರತಿಭಟಿಸಿ ಡಿಸೆಂಬರ್‌ 22ರಿಂದ ಚಲನಚಿತ್ರ ಪ್ರದರ್ಶವನ್ನು ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ನಿಲ್ಲಿಸಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾ ಮಂಡಳ ನಿರ್ಧರಿಸಿದೆ.

ಸೇವಾ ಶುಲ್ಕ ರದ್ದಿನಿಂದ ಪ್ರದರ್ಶಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಸೇವಾಶುಲ್ಕ ರದ್ಧತಿಯ ನಿರ್ಧಾರವನ್ನು ಸರ್ಕಾರ ಒಮ್ಮುಖವಾಗಿ ಕೈಗೊಂಡಿದೆ ಎಂದು ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌.ಓದುಗೌಡರ್‌ ಭಾನುವಾರ (ಡಿ.7) ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಸೇವಾ ಶುಲ್ಕವನ್ನು ರದ್ದುಪಡಿಸುವ ಸುಗ್ರೀವಾಜ್ಞೆ ವಾಪಸ್ಸು ಪಡೆಯುವುದು ಸೇರಿದಂತೆ ಪ್ರದರ್ಶಕರು ತಮ್ಮ 12 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕನ್ನಡ ಚಿತ್ರೋದ್ಯಮವನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಓದುಗೌಡರ್‌ ಮನವಿ ಮಾಡಿದರು.

(ಇನ್ಫೋ ವಾರ್ತೆ)

Post your views

ಪೂರಕ ಕಿರಿಕಿರಿ
ತಾತ್ಕಾಲಿಕ ಕದನ ವಿರಾಮ ; ಹೊಸ ಕನ್ನಡ ಚಿತ್ರಗಳಿಗೆ ಸ್ವಾತಂತ್ರ್ಯ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada