»   » ರಾಜ್‌ಕುಮಾರ್‌ ಮನವೊಲಿಸಲು ನಾಗೇಶ್ವರರಾವ್‌, ಚಿರಂಜೀವಿ ಯತ್ನ

ರಾಜ್‌ಕುಮಾರ್‌ ಮನವೊಲಿಸಲು ನಾಗೇಶ್ವರರಾವ್‌, ಚಿರಂಜೀವಿ ಯತ್ನ

Subscribe to Filmibeat Kannada

ಬೆಂಗಳೂರು : ಚಿತ್ರೋದ್ಯಮದ ಸಮರ ಸವಕಲಾದ ಹಿನ್ನೆಲೆಯಲ್ಲಿ ಪ್ರದರ್ಶಕರಿಗೆ ಮೂರು ವಾರಗಳ ನಿರ್ಬಂಧವನ್ನು ಮುರಿಯಲು ಮತ್ತಷ್ಟು ಧೈರ್ಯ ಬಂದಿದೆ. ಹೊಸ ಪರಭಾಷಾ ಚಿತ್ರಗಳು ರಾಜಧಾನಿಯ ಮತ್ತಷ್ಟು ಚಿತ್ರಮಂದಿರಗಳಲ್ಲಿ ಶುಕ್ರವಾರ(ಡಿ.10) ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಡಿ.10ರ ಶುಕ್ರವಾರ ‘ಹಲ್‌ಚಲ್‌’ ಮತ್ತು ‘ಓಷನ್‌ ಟ್ವೆಲ್ವ್‌’ ಚಿತ್ರಗಳ ಪ್ರದರ್ಶನಕ್ಕೆ ಕೆಲವು ಚಿತ್ರಮಂದಿರಗಳು ನಿರ್ಧರಿಸಿದ್ದು, ಮುಂದಿನ ವಾರ ತೆಲುಗು ಚಿತ್ರ ‘ವಿಜಯೇಂದ್ರ ವರ್ಮ’ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರೋದ್ಯಮದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು, ಉಪಮುಖ್ಯಮಂತ್ರಿ ಸಿದ್ಧರಾಮಯ್ಯಅವರನ್ನು ಭೇಟಿ ಮಾಡಿದ್ದಾರೆ. ಚಿತ್ರರಂಗದ ವಿವಾದಗಳ ನಡುವೆ ನನ್ನನ್ನು ಎಳೆಯಬೇಡಿ ಎನ್ನುವ ಮೂಲಕ ಸಿದ್ದರಾಮಯ್ಯ ಕೈತೊಳೆದು ಕೊಂಡಿದ್ದಾರೆ ಎನ್ನಲಾಗಿದೆ.

ರಾಜ್‌ಗೆ ಮೊರೆ : ತೆಲುಗು ಚಿತ್ರರಂಗದ ಪ್ರಮುಖರಾದ ಅಕ್ಕಿನೇನಿ ನಾಗೇಶ್ವರರಾವ್‌, ಚಿರಂಜೀವಿ ಮತ್ತು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರತಿನಿಧಿ ಎಸ್‌.ಕೆ.ರಾಮರಾವ್‌ ವರನಟ ್ಫಡಾ.ರಾಜ್‌ಕುಮಾರ್‌ರನ್ನು ಭೇಟಿ ಮಾಡಿದ್ದು , ಪರಭಾಷಾ ಚಿತ್ರಗಳ ಮೇಲಿನ ನಿರ್ಬಂಧವನ್ನು ಕೈಬಿಡುವಂತೆ ಕೋರಿದ್ದಾರೆ ಎನ್ನುವ ಸುದ್ದಿಯೂ ವ್ಯಾಪಕವಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada