ದರ್ಶನ್ ಲವ್ವಿ ಡವ್ವಿ ಸ್ಟೋರಿ ಬಗ್ಗೆ ಮೌನ ಮುರಿದ ವಿಜಯಲಕ್ಷ್ಮಿ

'ಸಂಗೊಳ್ಳಿ ರಾಯಣ್ಣ' ಚಿತ್ರೀಕರಣದ ವೇಳೆ ಆ ಚಿತ್ರದ ನಾಯಕಿ ನಿಖಿತಾ ಜೊತೆ ಸಲುಗೆಯಿಂದ ಇರುತ್ತಿದ್ದ. ಅಷ್ಟೇ ಅಲ್ಲ ವಿದೇಶಿ ಸಹ ನರ್ತಕಿಯರ ಜೊತೆಯೂ ಇದೇ ರೀತಿ ವ್ಯವಹಾರ ಇತ್ತು. ಇದನ್ನು ಪ್ರಶ್ನಿಸಿದಾಗ ಮನಬಂದಂತೆ ಥಳಿಸುತ್ತಿದ್ದ. ಕಳೆದ ಒಂದು ತಿಂಗಳಿಂದ ಅತಿಯಾದ ಹಿಂಸೆ ನೀಡಿದ್ದಾನೆ.
ಬಸವನಗುಡಿಯಲ್ಲಿದ್ದಾಗ ಪಕ್ಕದ ಮನೆಯವಳ ಜೊತೆ ದರ್ಶನ್‌ಗೆ ಒಡನಾಡವಿತ್ತು. ಆಕೆಯೊಂದಿಗೆ ಹೆಚ್ಚಾಗಿ ಓಡಾಡುತ್ತಿದ್ದ ದರ್ಶನ್. ಆ ಸಂದರ್ಭದಲ್ಲಿ ಆಕ್ಷೇಪಿಸಿದಾಗ 9 ತಿಂಗಳ ಮಗುವನ್ನು ಎಸೆಯುವುದಾಗಿ ಹೆದರಿಸಿದ್ದ. ಕತ್ತು ಹಿಸುಕಿ ಸಾಯಿಸುವುದಾಗಿಯೂ ಬೆದರಿಕೆ ಒಡ್ಡಿದ್ದ. ರಾಜರಾಜೇಶ್ವರಿ ನಗರಕ್ಕೆ ಬಂದಾಗಲೂ ಅದೇ ಹೆಂಗಸಿನ ಜೊತೆ ಹೋಗುತ್ತಿದ್ದ ಎಂದಿದ್ದಾರೆ ವಿಜಯಲಕ್ಷ್ಮಿ.
ತಾಯಿ ಮನೆಗೆ ಹೋದಾಗ ಅಲ್ಲಿಗೂ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಒಂದೂವರೆ ತಿಂಗಳಿಂದ ತಾಯಿ ಮನೆಯಲ್ಲಿ ವಾಸಿಸುತ್ತಿದ್ದೆ ಎಂದಿರುವ ಅವರು, ತಮ್ಮ ಮೇಲೆ ಸಿಗರೇಟ್‍ನಿಂದ ಸುಟ್ಟಿದ್ದಾನೆ. ಭಯದಿಂದ ಗೆಳತಿ ಮನೆಗೆ ಹೋದಾಗ ಅಲ್ಲೂ ಬಂದು ಜಗಳ ಮಾಡಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











