»   » ತಮಿಳಿನಲ್ಲಿ ರಮ್ಯಾ ನಟನೆ ನಿಷೇಧಕ್ಕೆ ಆಗ್ರಹ

ತಮಿಳಿನಲ್ಲಿ ರಮ್ಯಾ ನಟನೆ ನಿಷೇಧಕ್ಕೆ ಆಗ್ರಹ

Subscribe to Filmibeat Kannada

ಕನ್ನಡದ ನಟಿ ರಮ್ಯಾ ಅಲಿಯಾಸ್ ದಿವ್ಯಾಗೆ ತಮಿಳು ಚಿತ್ರಗಳಲ್ಲಿ ನಟಿಸಲು ಅನುಮತಿ ಕೊಡಬಾರದು ಎಂದು ತಮಿಳುನಾಡಿನ ರಾಜಕಾರಣಿಗಳ ಬೆಂಬಲಿತ ಹಿಂದು ಮಕ್ಕಲ್ ಕಚ್ಚಿ(ಹಿಂದೂ ಜನರ ಪಕ್ಷ)ಯು ನಟರ ಸಂಘದ ಅಧ್ಯಕ್ಷ ನಟ ಶರತ್ ಕುಮಾರ್ ಅವರನ್ನು ಆಗ್ರಹಿಸಿದೆ.

ಹೊಗೇನಕಲ್ ಹಗೆ ಮತ್ತೆ ತಮಿಳುನಾಡಿನಲ್ಲಿ ಹೊಗೆಯಾಡುತ್ತಿದ್ದು ಅದರ ಪರಿಣಾಮ ತಮಿಳಿನಲ್ಲಿ ನಟಿಸುತ್ತಿರುವ ಕನ್ನಡ ಮೂಲದ ನಟ, ನಟಿಯರ ಮೇಲಾಗುತ್ತಿದೆ. ರಾಜಕೀಯ ಹಗೆಯನ್ನು ಚಿತ್ರರಂಗದಲ್ಲಿ ಬೆರೆಸಬೇಡಿ ಎಂದು ಎರಡೂ ರಾಜ್ಯದ ಹಿರಿಯ ನಟರು ಮನವಿ ಮಾಡಿದ್ದು ಯಾರ ಕಿವಿಗೂ ಬಿದ್ದಿಲ್ಲ.

ತಮಿಳುನಾಡಿನ ಚಿತ್ರರಂಗ ಕರೆ ನೀಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳದ ನಟ, ನಟಿಯರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಟರುಗಳ ಸಂಘ ಈ ಮುಂಚೆ ತಿಳಿಸಿತ್ತು ಅದರಂತೆ, ದಿವ್ಯಾಳ ಮೇಲೆ ಕ್ರಮ ಜರುಗಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಹಿಂದು ಸಂಘಟನೆ ಪಕ್ಷದ ಕಾರ್ಯದರ್ಶಿ ಕಣ್ಣನ್ ಹೇಳಿದ್ದಾರೆ.

ಇಲ್ಲಿ ನಡೆದ ಉಪವಾಸಕ್ಕೆ ದೂರದಿಂದ ಬಂದ ರಜನಿ ಬೆಂಬಲ ನೀಡಿದರು. ಅನೇಕ ಕಿರಿಯ ನಟ ನಟಿಯರು ಪಾಲ್ಗೊಂಡಿದ್ದರು. ಆದರೆ ದಿವ್ಯಾ ಉಪವಾಸದಲ್ಲಿ ಪಾಲ್ಗೊಳ್ಳದೇ ತಪ್ಪು ಮಾಡಿದ್ದಾರೆ. ಅದಲ್ಲದೆ, ಕನ್ನಡ ಚಲನಚಿತ್ರ ಒಕ್ಕೂಟ ಕರೆ ನೀಡಿದ್ದ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ತಮಿಳು ಚಿತ್ರರಂಗವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಒಂದು ವೇಳೆ ನಟರುಗಳ ಸಂಘದ ಅಧ್ಯಕ್ಷ ಶರತ್ ಕುಮಾರ್ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಪಕ್ಷವಂತೂ ತಮಿಳುನಾಡಿನಲ್ಲಿ ದಿವ್ಯಾ ನಟಿಸಿದ ಯಾವುದೇ ಚಿತ್ರ ಪ್ರದರ್ಶನಗೊಳ್ಳಲು ಬಿಡುವುದಿಲ್ಲ ಎಂದು ಹಿಂದು ಸಂಘಟನೆಗಳು ಗುಡುಗಿವೆ.

ರಮ್ಯಾ ಹಾಗೂ ಸೂರ್ಯ ಅಭಿನಯದ 'ವರ್ಣಂ ಆಯಿರಂ' ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ರಮ್ಯಾ ಇತ್ತೀಚೆಗೆ ಧನುಷ್ ಜತೆ ನಟಿಸಿದ 'ಪೊಲ್ಲದವನ್ ' ಚಿತ್ರ ಯಶಸ್ವಿಯಾಗಿತ್ತು. ಸಿಲಂಬರಸನ್ ಜತೆ ನಟಿಸಿದ 'ಕುತ್ತು' ಚಿತ್ರದ ಯಶಸ್ಸಿನ ನಂತರ ತಮಿಳಿನಲ್ಲಿ ರಮ್ಯಾರನ್ನು 'ಕುತ್ತು ರಮ್ಯಾ'ಎಂದೇ ಕರೆಯಲಾಗುತ್ತಿತ್ತು. ತೀರಾ ಇತ್ತೀಚೆಗೆ ರಮ್ಯಾ ತಮ್ಮ ಹೆಸರನ್ನು ದಿವ್ಯಾ (ಅವರ ಮೂಲನಾಮ ದಿವ್ಯ ಸ್ಪಂದನ) ಎಂದು ಬದಲಿಸಿದ್ದರು. ರಮ್ಯಾ ಬಿಟ್ಟು ಉಳಿದ ಕಲಾವಿದ ಮೇಲೆ ನಿಷೇಧಕ್ಕೆ ಯಾವುದೇ ಪ್ರಸ್ತಾಪ ಬಂದಿಲ್ಲವಾದರೂ, ಕ್ರಮೇಣವಾಗಿ ಉಪವಾಸದಿನದಂದು ಭಾಗವಹಿಸದ ಕನ್ನಡ ಮೂಲದ ನಟ, ನಟಿಯರ ಮೇಲೆ ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ.

ಕನ್ನಡಿಗರಿಗೆದುರು ಕ್ಷಮೆ ಕೇಳೇ ಇಲ್ಲ : ರಜನಿಕಾಂತ್
ತಮಿಳಿನತ್ತ ಗುಳೆ ಹೊರಟ ಓಂ ಪ್ರಕಾಶ್ ರಾವ್
ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ತಮಿಳರಿಂದ ವಿರೋಧ
'ರೈ'ಟ್ ಹೇಳಲು ಪ್ರಕಾಶ್‌ಗೆ ತೆಲುಗು ಚಿತ್ರರಂಗ ತಾಕೀತು
ಬೆಂಗಳೂರಿನಲ್ಲಿ ತಮಿಳು ಚಿತ್ರಪ್ರದರ್ಶನಗಳ ಹೊಗೆ
ತಮಿಳುನಾಡಿನಲ್ಲಿ ಕನ್ನಡ ಚಾನೆಲ್‌ ಪ್ರಸಾರ ಬಂದ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada