ಏನ್ ಗುರು ವಿಷ್ಣುವರ್ಧನ ರೀಮೇಕಾ ಸ್ವಮೇಕಾ?

By * ಉದಯರವಿ

ಸುದೀಪ್ ಅಭಿನಯ 'ವಿಷ್ಣುವರ್ಧನ' ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈ ಚಿತ್ರದ ಕತೆ ಒರಿಜಿನಲ್ಲಾ ಅಥವಾ ರೀಮೇಕಾ ಎಂಬ ಅನುಮಾನ ಚಿತ್ರಪ್ರೇಮಿಗಳೂ ಸೇರಿದಂತೆ ಪತ್ರಕರ್ತರನ್ನೂ ಕಾಡುತ್ತಿತ್ತು. ಈ ಬಗ್ಗೆ ಚಿತ್ರ ನಿರ್ಮಾಪಕ ದ್ವಾರಕೀಶ್ ಆಗಲಿ ನಟ ಸುದೀಪ್ ಆಗಲಿ ಎಲ್ಲೂ ತುಟಿಪಿಟಕ್ ಎಂದಿರಲಿಲ್ಲ.

ಆದರೆ 'ವಿಷ್ಣುವರ್ಧನ' ಚಿತ್ರದ ಕತೆಗೂ ತೆಲುಗಿನ 'ನಿನ್ನ ನೇಡು ರೇಪು' ಚಿತ್ರಕ್ಕೂ ಸಾಕಷ್ಟು ಸಾಮ್ಯತೆಗಳು ಇವೆ. ತೆಲುಗು ಚಿತ್ರದಲ್ಲಿ ರವಿಕೃಷ್ಣ, ತಮನ್ನಾ ಹಾಗೂ ರೇಖಾ ವೇದವ್ಯಾಸ್ ಅಭಿನಯಿಸಿದ್ದರು. ಈ ಚಿತ್ರ 2008ರಲ್ಲಿ ತೆರೆಕಂಡಿತ್ತು. ಬಾಕ್ಸಾಫೀಸಲ್ಲಿ ಅಂತಹ ಸದ್ದು ಮಾಡದಿದ್ದರೂ ತಕ್ಕಮಟ್ಟಿಗೆ ಗುರುತಿಸಿಕೊಂಡಿತ್ತು.

ವಿಚಿತ್ರ ಎಂದರೆ ಈ ತೆಲುಗು ಚಿತ್ರಕ್ಕೆ ಮಲಯಾಳಂನ ಚಿತ್ರವೊಂದು ಸ್ಫೂರ್ತಿಯಾಗಿತ್ತು. 'ವಿಷ್ಣುವರ್ಧನ' ಹಾಗೂ 'ನಿನ್ನ ನೇಡು ರೇಪು' ಚಿತ್ರಗಳಲ್ಲೂ ಮೊಬೈಲ್ ಮುಖ್ಯಪಾತ್ರ ನಿರ್ವಹಿಸುತ್ತದೆ. ಎರಡೂ ಚಿತ್ರಗಳಲ್ಲಿ ನಾಯಕ ನಟನಿಗೆ ಡಾನ್ ಒಬ್ಬನ ಮೊಬೈಲ್ ಸಿಗುತ್ತದೆ. 'ವಿಷ್ಣುವರ್ಧನ' ಚಿತ್ರದಲ್ಲಿ ಒಂಚೂರು ಬದಲಾವಣೆಗಳಿದ್ದರೂ 'ನಿನ್ನ ನೇಡು ರೇಪು' ಚಿತ್ರದ ದಟ್ಟ ಛಾಯೆ ಕಾಣುತ್ತದೆ.

ಈ ಚಿತ್ರದ ಮುಹೂರ್ತಕ್ಕೆ ದ್ವಾರಕೀಶ್ ಪತ್ರಕರ್ತರನ್ನು ಆಹ್ವಾನಿಸಿರಲಿಲ್ಲ. ಕಾರಣ ರೀಮೇಕ್ ಪ್ರಶ್ನೆಗಳು ತೂರಿಬಂದರೆ ಅವನ್ನು ಎದುರಿಸುವ ಉಸಾಬರಿಯೇ ಬೇಡ ಎಂದು ಅವರು ಹಿಂದೆ ಸರಿದಿದ್ದರು. ಒಟ್ಟಾರೆಯಾಗಿ ದ್ವಾರಕೀಶ್ ಎಂದರೆ ಕನ್ನಡ ಚಿತ್ರಗಳ ರೀಮೇಕ್ ರಾಜ. ಅಂತಹವರು ಒರಿಜಿನಲ್ ಕತೆ ಮಾಡುತ್ತಾರೆ ಎಂದರೆ ಪಾಪ ಪ್ರೇಕ್ಷಕರು ನಂಬುತ್ತಾರೇನೋ, ಆದರೆ ಸಿನಿಮಾ ಪತ್ರಕರ್ತರಿಗೆ ಇನ್ನೂ ನಂಬಿಕೆ ಬಂದಿಲ್ಲ.

More from Filmibeat

English summary
Sudeep lead Kannada movie Vishnuvardhana gets good response from audience. But is this movie remake or original? 'Vishnuvardhana’ is having major shades of Telugu film ‘Ninne Nedu Repu’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X