»   » ವಿವಾದದಲ್ಲಿ ಸೂರ್ಯ ತಮಿಳು ಚಿತ್ರ 7ಅಮ್ ಅರಿವು

ವಿವಾದದಲ್ಲಿ ಸೂರ್ಯ ತಮಿಳು ಚಿತ್ರ 7ಅಮ್ ಅರಿವು

Posted By:
Subscribe to Filmibeat Kannada
Surya
ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸೂರ್ಯ ನಟನೆಯ '7 ಅಮ್ ಅರಿವು' ಚಿತ್ರಕ್ಕೆ ವಿವಾದದ ಗ್ರಹಚಾರವೊಂದು ಬಡಿದಿದೆ. ಚಿತ್ರದಲ್ಲಿ ಅಳವಡಿಸಲಾಗಿರುವ ಅಂಶಗಳು ಬೌದ್ಧ ಧರ್ಮದ ತತ್ವಗಳಿಗೆ ವಿರುದ್ಧವಾಗಿವೆ ಎಂದು ಆ ಧರ್ಮದ ಗುರುವೊಬ್ಬರು ಸಿಟ್ಟಾಗಿದ್ದಾರೆ.

ಚೀನಾಕ್ಕೆ ವಲಸೆ ಹೋಗಿರುವ ಪಲ್ಲವ ರಾಜಕುಮಾರ, ಶಾವೋಲಿನ್ ಮಾಸ್ಟರ್ ಒಬ್ಬರು ಈ ವಿಷಯವಾಗಿ ಭಿನ್ನಾಬಿಪ್ರಾಯ ವ್ಯಕ್ಕತಪಡಿಸಿದ್ದಾರೆ. ಹಾಗೇ, ಬೌದ್ಧ ಗುರು ಬಾಬು ಟಿ ರಾಘು ಹೇಳುವಂತೆ "7 ಅಮ್ ಅರಿವು ಚಿತ್ರದಲ್ಲಿ ಬೌದ್ಧ ಧರ್ಮದ ತತ್ವಗಳನ್ನು ತಿರುಚಲಾಗಿದೆ. ಮೂಲ ತತ್ವಗಳಿಗೆ ಅದು ಬದ್ಧವಾಗಿರದೇ ಅದಕ್ಕೆ ಅವಮಾನ ಮಾಡಲಾಗಿದೆ" ಎಂದಿದ್ದಾರೆ.

"ಈ ಸಿನಿಮಾದಲ್ಲಿ ಕಂಚಿಪುರಮ್ ನಿಂದ ತಾರುಣ್ಯಾವಸ್ಥೆಯಲ್ಲಿ ತೆರಳುವ ಬೌದ್ಧ ಭಿಕ್ಷುವಿಗೆ ಸಿಕ್ಸ್ ಪ್ಯಾಕ್ ಕೂಡ ಇದೆ. ಆದರೆ ಮೂಲದಲ್ಲಿ ತೆರಳಿರುವ ಭಿಕ್ಷು ನೂರೈವತ್ತು ವರ್ಷದವನಾಗಿದ್ದ. ಜನರಿಗೆ ಇದು ಕೆಟ್ಟ ಸಂದೇಶ ರವಾನಿಸುವಂತಿದೆ" ಎನ್ನಲಾಗಿದೆ. ಆದರೆ 'ಸಿನಿಮಾ'ವನ್ನು 'ಸಿನಿಮಾ ಆಗಿ' ನೋಡಬಲ್ಲ ಜನರು ಆ ಪಾತ್ರದಲ್ಲಿನ 'ಸ್ಟಾರ್ ಸೂರ್ಯ' ಅಭಿನಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
The depiction of Bodhi Dharman has sparked a controversy. The Buddhist groups in Tamil Nadu claims that the facts provided in the recently released by Surya starer film is inaccurate.
 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada