»   » ಒಂದು ದುರದೃಷ್ಟಕರ ಪ್ರೇಮ ಕತೆ

ಒಂದು ದುರದೃಷ್ಟಕರ ಪ್ರೇಮ ಕತೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಸಲ್ಮಾನ್‌ ಖಾನ್‌ ತನ್ನ ಪ್ರಸಿದ್ಧಿಯನ್ನೆಲ್ಲಾ ಮಣ್ಣು ಮಾಡಿಕೊಂಡದ್ದು ಗೊತ್ತಲ್ಲಾ... ಒಂದು ಲವ್‌ ಆ್ಯಕ್ಸಿಡೆಂಟು ಇನ್ನೊಂದು ರಿಯಲ್‌ ಆ್ಯಕ್ಸಿಡೆಂಟು. ಬರೀ ಯಡವಟ್ಟುಗಳನ್ನೇ ಮಾಡಿಕೊಂಡು ಸಲ್ಮಾನ್‌ ಕೋರ್ಟು ಕಚೇರಿ ಅಲೆಯುತ್ತಿದ್ದರೆ ಈತನ ಮಾಜಿ ಪ್ರೇಯಸಿ ಐಶ್ವರ್ಯಾ ಅಷ್ಟೈಶ್ವರ್ಯದಿಂದ ಹೋದಲ್ಲೆಲ್ಲಾ ವಿಜೃಂಭಿಸುತ್ತಿದ್ದಾಳೆ.

ಟೀವಿಯಲ್ಲಿ ಜೈಲು ಮತ್ತು ಬಿಡುಗಡೆಯ ಮಾತುಗಳೊಂದಿಗೇ ಕಾಣಿಸಿಕೊಳ್ಳುತ್ತಿದ್ದ ಖಾನ್‌ ಭಯ್ಯಾ ಈಗ ಮತ್ತೆ ಹೊಸ ಸಿನೆಮಾದ ಕಾರಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾನೆ. ಆತನ ಹೊಸ ಚಿತ್ರ ತೇರೇ ನಾಮ್‌ !

ಸಲ್ಮಾನ್‌-ಐಶ್‌ ಅಫೇರ್‌ ಬಗ್ಗೆ ಕುತೂಹಲವಿದ್ದವರೆಲ್ಲಾ ಈ ಚಿತ್ರದ ಟ್ಯಾಗ್‌ಲೈನ್‌ ಗಮನಿಸಬೇಕು- . ('Unfortunately A True Love Story'). ಈ ದುರದೃಷ್ಟಕರ ಪ್ರೇಮ ಕತೆಯ ಚಿತ್ರದಲ್ಲಿ ಪುರುಷನೊಬ್ಬನ ಅಳಲನ್ನು ಸಲ್ಮಾನ್‌ ಖಾನ್‌ ಪಾತ್ರ ಬಿಂಬಿಸುತ್ತದೆ.

ಐಶ್ವರ್ಯ ರೈ ಮತ್ತು ಸಲ್ಮಾನ್‌ ಖಾನ್‌ ನಡುವೆ ನಿಜವಾಗಿಯೂ ಏನು ನಡೆಯಿತು ಎನ್ನುವುದಕ್ಕೆ ಉತ್ತರ ತೇರೇ ನಾಮ್‌ ಸಿನಿಮಾದಲ್ಲಿ ಇರುವುದಂತೆ. ಅಂದಹಾಗೆ, ಸಲ್ಮಾನ್‌ ಪರವಾದ ದೃಷ್ಟಿಕೋನದೊಂದಿಗೆ ತೇರೇ ನಾಮ್‌ ಚಿತ್ರದ ಕತೆ ಮೂಡಿ ಬರಲಿದೆ ಎನ್ನುವ ಸುದ್ದಿ ಬಾಲಿವುಡ್‌ ತುಂಬಾ ಹಬ್ಬಿದೆ.

ಆದರೆ, ತೇರೇನಾಮ್‌ ಚಿತ್ರ ನಿರ್ದೇಶಕ ಸತೀಶ್‌ ಕೌಶಿಕ್‌ ಹೇಳುವುದೇ ಬೇರೆ. ಸಲ್ಮಾನ್‌- ಐಶ್ವರ್ಯ ಪ್ರಕರಣಕ್ಕೂ ತೇರೇ ನಾಮ್‌ ಸಿನಿಮಾಗೂ ಯಾವ ಸಂಬಂಧವೂ ಇಲ್ಲ . ಇದೊಂದು ನೊಂದ ಪ್ರೇಮಿಯ ಸಿನಿಮಾ ಅಷ್ಟೇ ಎಂದು ಕೌಶಿಕ್‌ ಸ್ಪಷ್ಟ ದನಿಯಲ್ಲಿ ಹೇಳುತ್ತಾರೆ.

ಸಿನೆಮಾದ ಪ್ರಥಮಾರ್ಧದಲ್ಲಿ ಸಲ್ಮಾನ್‌ ಹ್ಯಾಪಿ-ಗೋ-ಲಕ್ಕಿ ಹುಡುಗ. ಉಳಿದ ಭಾಗದಲ್ಲಿ ಪ್ರೇಮಕ್ಕಾಗಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವ ದುರಂತ ಪ್ರೇಮಿಯ ಪಾತ್ರ ಎನ್ನುವ ಕೌಶಿಕ್‌ ಕೊನೆಯದಾಗಿ ಹೇಳುವುದು- ತೇರೇ ನಾಮ್‌ ಚಿತ್ರದ ಕತೆಗೆ ತಮಿಳಿನ ‘ಸೇತು’ ಚಿತ್ರ ಸ್ಫೂರ್ತಿ. ‘ಸೇತು’ ಅಂದರೆ ಅದೇರೀ ಸುದೀಪ್‌ ಅಭಿನಯದ ‘ಹುಚ್ಚ ’!

ಇದೆಲ್ಲಾ ಸರಿ. ಸಲ್ಮಾನ್‌ ನಟಿಸುತ್ತಿರುವ ಈ ಚಿತ್ರಕ್ಕೆ Unfortunately A True Love Story ಎನ್ನುವ ಟ್ಯಾಗ್‌ ಲೈನ್‌ ಕೊಟ್ಟಿರುವುದಾದರೂ ಏಕೆ ಅನ್ನುವ ಪ್ರಶ್ನೆಗೂ ನಿರ್ದೇಶಕ ಕೌಶಿಕ್‌ರಲ್ಲಿ - ಅದು ಆಕಸ್ಮಿಕ ಎನ್ನುವ ಸಿದ್ಧ ಉತ್ತರವಿದೆ. ಅದೇನೇ ಇರಲಿ, ಚಿತ್ರಕತೆಯಾಂದಿಗೆ ತಳುಕು ಹಾಕಿಕೊಂಡಿರುವ ಐಶ್‌- ಸಲ್ಮಾನ್‌ ಪ್ರೇಮಭಗ್ನ ಪ್ರಕರಣದ ಗುಸುಗುಸು ಗುಲ್ಲು ಗಲ್ಲಾಪೆಟ್ಟಿಗೆಗೆ ಅನುಕೂಲಕರವಾಗಿ ಪರಿಣಮಿಸುವುದಂತೂ ನಿಜ.

ಯಶಸ್ಸಿಗೆ ನೂರೆಂಟು ದಾರಿಗಳು !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada