»   » ‘ಕ್ರೆೃಂಸ್ಟೋರಿ-ಕ್ರೆೃಂಡೈರಿ ನಿಲ್ಲಿಸಿ, ನಿಷೇಧಿಸಿ’

‘ಕ್ರೆೃಂಸ್ಟೋರಿ-ಕ್ರೆೃಂಡೈರಿ ನಿಲ್ಲಿಸಿ, ನಿಷೇಧಿಸಿ’

Subscribe to Filmibeat Kannada
  • ಪ್ರಕಾಶ್‌, ಮೈಸೂರು
‘ಮೊದಲು ಕ್ರೆೃಂ ಆಧಾರಿತ ಧಾರಾವಾಹಿಗಳನ್ನು ನಿಷೇಧಿಸಿ!’

ಹಾಗೆಂದವರು ಎಸ್‌.ಗುರುಸ್ವಾಮಿ, ರಾಜ್ಯ ಪೊಲೀಸ್‌ ಸಂಘದ ಉಪಾಧ್ಯಕ್ಷ . ಮೈಸೂರಿನಲ್ಲಿ ಜುಲೈ 8ರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುರುಸ್ವಾಮಿ ಅಪರಾಧ ಆಧಾರಿತ ಧಾರಾವಾಹಿಗಳ ಬಗ್ಗೆ ಕೆಂಡಾಮಂಡಲ ಕೋಪ ಪ್ರದರ್ಶಿಸಿದರು. ಈಟೀವಿಯಲ್ಲಿ ಪ್ರಸಾರವಾಗುವ ರವಿ ಬೆಳಗೆರೆ ನೇತೃತ್ವದ ‘ಕ್ರೆೃಂಡೈರಿ’ ಹಾಗೂ ಉದಯ ಟೀವಿಯಲ್ಲಿನ ಬಾಲಕೃಷ್ಣ ಕಾಕತ್ಕರ್‌ ಸಾರಥ್ಯದ ‘ಕ್ರೆೃಂಸ್ಟೋರಿ’ ಧಾರಾವಾಹಿಗಳನ್ನು ತಕ್ಷಣ ನಿಲ್ಲಿಸಬೇಕು, ನಿಷೇಧಿಸಬೇಕು ಎನ್ನುವುದು ಅವರ ಆಗ್ರಹ.

ಅಂದಹಾಗೆ, ಕ್ರೆೃಂ ಆಧಾರಿತ ಧಾರಾವಾಹಿಗಳು ಮಾಡಿದ ಪಾಪವಾದರೂ ಏನು ? ಗುರುಸ್ವಾಮಿ ಅವರ ಸಿಟ್ಟಿಗೆ ಮೂಲವಾದರೂ ಯಾವುದು ?

ಗುರುಸ್ವಾಮಿ ಹೇಳುತ್ತಾರೆ ಕೇಳಿ :

ಅಪರಾಧದ ಘಟನೆಗಳ ಬಗೆಗಿನ ಮಾಹಿತಿಗಳನ್ನು ಪೊಲೀಸರಿಂದಲೇ ಧಾರಾವಾಹಿ ತಂಡ ಪಡೆಯುತ್ತದೆ. ಆದರೆ ಆನಂತರದ ಕಥೆಯೇ ಬೇರೆ. ಘಟನೆಗಳಿಗೆ ಪೊಲೀಸರನ್ನೇ ಹೊಣೆ ಮಾಡಲಾಗಿರುತ್ತದೆ. ಪೊಲೀಸ್‌ ಇಲಾಖೆಯ ವಿರುದ್ಧ ಆರೋಪಗಳ ಸರಮಾಲೆಯನ್ನೇ ಹೊರಿಸಲಾಗಿರುತ್ತದೆ. ಪೊಲೀಸ್‌ ಇಲಾಖೆಯ ನೆರವು ಪಡೆವ ಕ್ರೆೃಂಡೈರಿ-ಸ್ಟೋರಿ ಧಾರಾವಾಹಿಗಳು, ಇಲಾಖೆಯನ್ನೇ ಅವಮಾನಿಸುತ್ತವೆ.

ಇಷ್ಟೇ ಅಲ್ಲ . ಯುವಜನತೆಯ ಮೇಲೆ ಈ ಧಾರಾವಾಹಿಗಳು ಋಣಾತ್ಮಕ ಪರಿಣಾಮ ಬೀರುತ್ತವೆ. ಅಪರಾಧಗಳ ಬಗ್ಗೆ ಸಮಾಜಘಾತಕರಿಗೆ ಹೊಸ ಐಡಿಯಾಗಳನ್ನು ನೀಡಿ, ದುಷ್ಕೃತ್ಯಗಳಿಗೆ ಪ್ರಚೋದಿಸುತ್ತವೆ. ಈ ಟ್ರೆಂಡ್‌ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಿದೆ ಎಂದು ಗುರುಸ್ವಾಮಿ ಆರೋಪಿಸಿದರು.

ಗುರುಸ್ವಾಮಿ ಹೇಳೋದು ಇಷ್ಟೇ- ಈ ಧಾರಾವಾಹಿಗಳ ನೋಡಿ ಉದ್ಧಾರವಾದವರಿಲ್ಲ ! ಆದರೆ ತಮಾಷೆ ನೋಡಿ- ಕ್ರೆೃಂಡೈರಿ ಹಾಗೂ ಕ್ರೆೃಂ ಸ್ಟೋರಿ ಟಿಆರ್‌ಪಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನರ ಅಭಿರುಚಿ ಎತ್ತ ಸಾಗುತ್ತಿದೆ ನೋಡಿದಿರಾ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada