For Quick Alerts
  ALLOW NOTIFICATIONS  
  For Daily Alerts

  ಶೋ ನಿಲ್ಲಿಸಬೇಡಿ, ಬಸಂತ್‌ಕುಮಾರ್‌ಗೆ ‘ಪಿಪಿಪಿ’ ನಿರ್ಮಾಪಕರ ಪತ್ರ

  By Staff
  |

  ಇವರಿಗೆ ,

  ಬಸಂತ್‌ಕುಮಾರ್‌ ಪಾಟೀಲ್‌
  ಅಧ್ಯಕ್ಷರು
  ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ
  ಬೆಂಗಳೂರು

  ವಿಷಯ : ಪ್ರೀತಿ ಪ್ರೇಮ ಪ್ರಣಯ ಸೇರಿದಂತೆ ಕನ್ನಡ ಚಿತ್ರಗಳ ಪ್ರದರ್ಶನದ ಬಗ್ಗೆ

  ಮಾನ್ಯರೇ,

  ನಿರ್ಮಾಪಕರು ಮತ್ತು ಚಿತ್ರಮಂದಿರದವರ ಬಗೆಹರಿಯದ ವ್ಯಾಜ್ಯದಿಂದ ಇಡೀ ಚಿತ್ರೋದ್ಯಮಕ್ಕೆ ಏಟು ಬೀಳುತ್ತಿದೆ. ಆಕಾಶವೇ ಕಳಚಿ ಬಿದ್ದಂತಹ ಸಮಸ್ಯೆ ಇದಲ್ಲ. ಇಂತಹ ಸಮಸ್ಯೆ ಬಗೆಹರಿಸುವ ಸಲುವಾಗಿ ಚಿತ್ರಗಳನ್ನೇ ಪ್ರದರ್ಶಿಸದಿರುವುದು ತರವಲ್ಲ. ಹಾಗೆ ಮಾಡದೆಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಅದು ಬಿಟ್ಟು, ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಿರುವ ಚಿತ್ರಗಳ ಪ್ರದರ್ಶನ ನಿಲ್ಲುಸುವುದು ಸರಿಯಿಲ್ಲ. ಮೊದಲೇ ಸಾಕಷ್ಟು ಕಷ್ಟದಲ್ಲಿರುವ ಚಿತ್ರೋದ್ಯಮ ಸಿನಿಮಾ ಪ್ರದರ್ಶನಗಳಿಲ್ಲದೆ ಇನ್ನಷ್ಟು ಸೊರಗಿ ಹೋಗುತ್ತದೆ. ಹಾಗಾಗದಂತೆ ನೀವು ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಕ್ರಮ ಕೈಗೊಳ್ಳಬೇಕು. ಚಿತ್ರ ಪ್ರದರ್ಶನ ಸಾಂಗವಾಗಿ ನಡೆಯುವಂತೆ ಮಾಡಬೇಕು ಎಂಬುದು ನಮ್ಮ ಮನವಿ.

  ತಮ್ಮ ವಿಶ್ವಾಸಿಗಳು
  ಮನೋಮೂರ್ತಿ
  ರಾಮ್‌ಪ್ರಸಾದ್‌
  ಸೋಮಶೇಖರ್‌ ಹಾಗೂ
  ಡಾ.ರೇಣುಕಾ ರಾಮಪ್ಪ (ಪ್ರೀತಿ ಪ್ರೇಮ ಪ್ರಣಯ ನಿರ್ಮಾಪಕರು),
  ಇಂಡೋ ಹಾಲಿವುಡ್‌ ಫಿಲ್ಮ್ಸ್‌
  ಪಿ.ಓ.ಬಾಕ್ಸ್‌ 14095
  ಫ್ರೀಮಾಂಟ್‌, ಕ್ಯಾಲಿಫೋರ್ನಿಯಾ, 94539,
  ಅಮೆರಿಕ
  +001 510 651 2361

  ಇದನ್ನೂ ಓದಿ-
  ಪ್ರೀತಿ ಪ್ರೇಮ ಪ್ರಣಯ ಚಿತ್ರ ವಿಮರ್ಶೆ

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X