»   » ಇಲ್ಲಿ ನಿಜವಾದ ನಿರ್ಮಾಪಕರಿಲ್ಲ!

ಇಲ್ಲಿ ನಿಜವಾದ ನಿರ್ಮಾಪಕರಿಲ್ಲ!

Subscribe to Filmibeat Kannada


‘ಡಬ್ಬಿಗ್‌ ಮಾಡ್ತೀವಿ ಅನ್ನೋದಕ್ಕಿಂತ ನಾಚಿಕೆ ಬೇಕಾ?’ ಎನ್ನುವ ಪಾರ್ವತಮ್ಮ ರಾಜ್‌ಕುಮಾರ್‌, ಕನ್ನಡ ನಿರ್ಮಾಪಕರನ್ನು ತಮಗೆ ತೋಚಿದಂತೆ ಬೈದಿದ್ದಾರೆ.

ಹೀರೋಗಳಿಗೆ ದುಡ್ಡು ಕೊಡೋರು ಯಾರು? ನೀವು ತಾನೆ? ನೀವೇ ಕೊಟ್ಟು ಅಭ್ಯಾಸ ಮಾಡಿದ್ದೀರಿ. ಅವರೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದರಾ? ಅಷ್ಟು ಕೊಡೋಕೆ ಆಗಲ್ಲಾ ಅಂದ್ರೆ ಹೊಸ ಹೀರೋಗಳನ್ನು ಹಾಕಿಕೊಂಡು ಸಿನಿಮಾ ಮಾಡಿ. ಅವರನ್ನೇಕೆ ದೂರುತ್ತೀರಿ?

-ಹಾಗಂತ ನೇರವಾಗಿ ಮಾತನಾಡಿದರು ಪಾರ್ವತಮ್ಮ ರಾಜ್‌ಕುಮಾರ್‌.

ಸಿನೆಮಾ ಗೆಲ್ಲೋದು ಸೋಲೋದು ಹಿಂದಿನಿಂದಲೂ ಇದೆ. ನಿರ್ಮಾಪಕ ಅದಕ್ಕೆಲ್ಲ ರೆಡಿಯಾಗಿರಬೇಕು. ನಮ್ಮ ನಿರ್ಮಾಪಕರೆಲ್ಲರೂ ಅಂಥವರೇ. ಕೋಟಿ ಸಂಪಾದಿಸೋದು, ಕೋಟಿಕಳಕೊಳ್ಳೋದೂ ಈ ಉದ್ಯಮದಲ್ಲಿ ಸಹಜ. ಬಂದಾಗ ನೀವು ಯಾರಿಗಾದರೂ ಕರೆದು ಕೊಟ್ಟಿದ್ದೀರಾ? ಇಲ್ಲ ತಾನೆ? ಈಗ ಕಳಕೊಂಡಾಗ ಬಾಯಿಬಡ್ಕೊಂಡ್ರೆ ಏನು ಬಂತು?

ಇಲ್ಲಿ ನಿಜವಾದ ನಿರ್ಮಾಪಕರಿಲ್ಲ. ರಿಯಲ್‌ ಎಸ್ಟೇಟಿನವರೂ, ಫೈನಾನ್ಸ್ಯಿಯರ್ಸೂ ಸಿನಿಮಾ ಮಾಡೋಕೆ ಶುರು ಮಾಡಿದ್ದಾರೆ. ಸಿನಿಮಾವನ್ನೇ ನಂಬಿರೋರು ಯಾರೂ ಇಂಥ ಮಾತಾಡೋಲ್ಲ. ಡಬ್ಬಿಗ್‌ ಮಾಡ್ತೀವಿ ಅನ್ನೋದಕ್ಕಿಂತ ನಾಚಿಕೆ ಬೇಕಾ? ಡಬ್ಬಿಗ್‌ ಸಿನಿಮಾನ ಜನ ನೋಡ್ತಾರೆ ಅಂದ್ಕೊಂಡಿದ್ದಾರೆ ಅವರು. ಕೂತು ಒಳ್ಳೆಯ ಕತೆ ಮಾಡಿಸೋ ವ್ಯವಧಾನ ಇಲ್ಲದವರೆಲ್ಲ ಸಿನೆಮಾ ಮಾಡೋಕೆ ಬಂದ್ರೆ ಹೀಗೇ ಆಗೋದು.

ರೀಮೇಕ್‌ ಮಾಡಿದ ತಕ್ಷಣ ಸಿನೆಮಾ ಗೆಲ್ಲತ್ತೆ ಅಂದ್ಕೊಂಡಿದ್ದಾರೆ ಅವರು. ಹೀರೋಗಳಿಗೆ ದುಡ್ಡು ಕೊಟ್ಟರೆ ಸಾಕು ಅಂದ್ಕೊಂಡಿದ್ದಾರೆ. ಚಿತ್ರರಂಗದಲ್ಲಿ ಎಲ್ಲರೂ ಮುಖ್ಯ. ಒಬ್ಬ ಲೈಟ್‌ ಬಾಯ್‌ಗೆ ಕೂಡ ಪೇಮೆಂಟ್‌ ಸರಿಯಾಗಿ ಹೋಗಬೇಕು. ಯಾರು ಕೊಡ್ತಾರೆ ಹೇಳಿ ನೋಡೋಣ ? ಅಂತ ಅವರು ಸವಾಲು ಹಾಕುತ್ತಾರೆ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada