»   » ಕಳಚಿದ ಅಮೀರ್‌ ಖಾನ್‌ ದಂಪತಿಗಳ ಬೆಸುಗೆ

ಕಳಚಿದ ಅಮೀರ್‌ ಖಾನ್‌ ದಂಪತಿಗಳ ಬೆಸುಗೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಲಗಾನ್‌ ನಂತರ ಸಿನಿಮಾ ಲೋಕದಲ್ಲಿ ತಣ್ಣಗಿದ್ದು, ಲಲನೆಯರಿಗೆ ಬಾವಿಯಿಂದ ಕೋಕಾಕೋಲಾ ತೆಗೆದುಕೊಡುತ್ತಲೇ ಸುದ್ದಿಯಲ್ಲಿರುವ ಅಮೀರ್‌ ಖಾನ್‌ ವಿವಾಹ ಸಂಬಂಧ ಹಳಸಿದೆ. ಅಮೀರ್‌ ಹಾಗೂ ಇವರ ಹೆಂಡತಿ ರೀನಾ ದತ್ತ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೊರೆಹೋಗಿದ್ದಾರೆ.

ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣ ಒಟ್ಟಾಗಿ ಸಂಸಾರ ನಡೆಸಲಾಗದೆಂಬ ತೀರ್ಮಾನಕ್ಕೆ ಬಂದಿರುವ ಅಮೀರ್‌ ದಂಪತಿಗಳು 2001ನೇ ಇಸವಿ ಅಕ್ಟೋಬರ್‌ನಿಂದಲೂ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ಜುನೈದ್‌ (9) ಹಾಗೂ ಐರಾ (4) ಎಂಬ ಇಬ್ಬರೂ ಮಕ್ಕಳು ಇನ್ನು ಮುಂದೆ ತಾಯಿ ರೀನಾ ಜೊತೆಯಲ್ಲಿರುತ್ತಾರೆ.

ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಅಮೀರ್‌ ಮಕ್ಕಳ ಜೊತೆ ಕಾಲ ಕಳೆಯಬಹುದು. ಅಲ್ಲದೆ ಹದಿನೈದು ದಿನಗಳಿಗೊಮ್ಮೆ ಮಕ್ಕಳ ಜೊತೆ ವಾರಾಂತ್ಯ ಕಳೆಯುವ ಹಕ್ಕೂ ಅಮೀರ್‌ಗಿದೆ. ಶುಕ್ರವಾರ ಸಂಜೆ 7 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆವರೆಗೆ ಈ ವಾರಾಂತ್ಯ ಸೀಮಿತ. ವಿಚ್ಛೇದನಕ್ಕಾಗಿ ಹಾಕಿರುವ ಅರ್ಜಿಯ ಪ್ರಕಾರ, ಅಮೀರ್‌ ಹಾಗೂ ರೀನಾ ಬೇಸಗೆ ಹಾಗೂ ಕ್ರಿಸ್‌ಮಸ್‌ ರಜೆಯನ್ನು ಮಕ್ಕಳ ಜೊತೆ ಒಟ್ಟಾಗಿ ಕಳೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada