ಪತ್ನಿಪೀಡಕ ದರ್ಶನನನ್ನು ತರಾಟೆಗೆ ತೆಗೆದುಕೊಂಡ ರಮೇಶ್‌

By Srinath

ramesh-aravind-criticises-darshan-beating-wife
ಯಾರಿಗೆ, ಯಾರ ಮೇಲೂ ಕೈ ಎತ್ತುವ ಅಧಿಕಾರ ಇಲ್ಲ. ಗಂಡಾಗಲೀ, ಹೆಣ್ಣಾಗಲೀ ಎಲ್ಲರೂ ಇದಕ್ಕೆ ಬದ್ಧರಾಗಿರಬೇಕು. ಕೈ ಎತ್ತುವುದು ನಮ್ಮ ಸಂಸ್ಕೃತಿ ಅಲ್ಲ ಮತ್ತು ಇದು ಉತ್ತಮ ಬೆಳವಣಿಗೆಯೂ ಅಲ್ಲ...

ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಜೈಲು ಸೇರಿರುವ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಮೇಶ್‌ ಅರವಿಂದ್‌ ಪ್ರತಿಕ್ರಿಯಿಸಿದ ರೀತಿ ಇದು. ನಗರದ ವಿಕ್ರಂ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 'ಉತ್ತಮ ಶಿಕ್ಷಕರು' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ದರ್ಶನ್‌ ಉತ್ತಮ ನಟ. ಅದಕ್ಕಿಂತ ಹೆಚ್ಚಾಗಿ ಒಬ್ಬ ಕಲಾವಿದ. ನಟನೆ, ನೃತ್ಯ, ಫೈಟಿಂಗ್‌ ಎಲ್ಲದರಲ್ಲೂ 'ಸೈ' ಎನ್ನಿಸಿಕೊಂಡವರು. ಅದರಲ್ಲಿ ಅನುಮಾನವೇ ಇಲ್ಲ. ಪ್ರತಿ ಹಂತದಲ್ಲೂ ಇಷ್ಟವಾಗುತ್ತಿದ್ದರು. ಆದರೆ ಪತ್ನಿ ಮೇಲೆ ಕೈ ಮಾಡಬಾರದಿತ್ತು. ಇದು ತಪ್ಪು. ಈ ವಿಚಾರ ನನಗೂ ಬೇಸರ ತಂದಿದೆ' ಎಂದು ಹೇಳಿದರು.

'ಸಾಮಾನ್ಯರಿಗಿಂತ ನಮ್ಮ ಜವಾಬ್ದಾರಿ ಸ್ವಲ್ಪ ಹೆಚ್ಚಿರುತ್ತದೆ. ಪ್ರತಿಯೊಬ್ಬರೂ ನಮ್ಮನ್ನು ನೋಡುತ್ತಿರುತ್ತಾರೆ, ಅನುಕರಿಸುತ್ತಾರೆ. ಈ ವಿಚಾರ ಸದಾ ನಮ್ಮ ಎಚ್ಚರದಲ್ಲಿರಬೇಕು. ನಾವು ತಪ್ಪಿದರೆ, ಅವರೂ ತಪ್ಪುತ್ತಾರೆ. ನಾವು ನಡೆಯುವ ಶೈಲಿ, ಉಡುಗೆ-ತೊಡುಗೆ, ಹೇರ್ ಸ್ಟೈಲ್‌ ಹೀಗೆ ಎಲ್ಲವನ್ನೂ ಅನುಕರಿಸುವ ಅಭಿಮಾನಿಗಳಿರುತ್ತಾರೆ. ಹೊಡೆದುದನ್ನೂ ಅನುಕರಿಸಿದರೇ?' ಎಂದು ಕಿವಿಮಾತು ಹೇಳಿದರು.

ಹಾಗಾಗಿ, ಪ್ರತಿ ಹಂತದಲ್ಲೂ ನಾವು ಎಚ್ಚರ ವಹಿಸಬೇಕಾಗುತ್ತದೆ. ದರ್ಶನ್‌ ಪ್ರಕರಣ ಕೆಟ್ಟ ಗಳಿಗೆಯಲ್ಲಿ ಆಗಿದೆ. ಬಹುಶಃ ಅವರಿಗೂ ಈಗ ಮನವರಿಕೆ ಆಗಿರುತ್ತದೆ. ಆದರೆ ಯಾರೇ ಆಗಲಿ, ಕೋಪ ಬಂದಾಗ ನಮ್ಮನ್ನು ನಾವು ನಿಗ್ರಹಿಸಿಕೊಳ್ಳುವ ಶಕ್ತಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅನಾಹುತ ಆಗುತ್ತದೆ. ನನ್ನ ವಿಚಾರಕ್ಕೆ ಬಂದರೆ, ನಾನು ಶಾಂತವಾಗಿರುವುದೇ ಹೆಚ್ಚು' ಎಂದು ನಗೆಯಾಡಿದರು.

More from Filmibeat

English summary
Veteran Kannada Actor Ramesh Aravind has come down heavily on Actor Darshan for beating his wife Vijaylakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X