ಗಣೇಶ್ ತಮ್ಮ ಮಹೇಶ್ ನಾಪತ್ತೆಯಾಗಿದ್ದಾರೆಯೇ?

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮಹೇಶ್ ನಾಪತ್ತೆಯಾಗಿದ್ದಾರೆ. ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಎಂಟು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ವನಜಾಳೊಂದಿಗೆ ನಾಳೆ, ಮಾರ್ಚ್ 2, 2012ರಂದು ನಿಗದಿಯಾಗಿದ್ದ ಮದುವೆಯನ್ನು ತಪ್ಪಿಸಿಕೊಂಡು, ಹೊಸ ಹುಡುಗಿ ಸೌಮ್ಯಳೊಂದಿಗೆ ಮದುವೆ ಮಾಡಿಕೊಂಡು ನಾಪತ್ತೆಯಾಗಿದ್ದಾರೆಂಬ ಸುದ್ದಿ ನಿನ್ನೆಯಿಂದ ಕೇಳಿಬರುತ್ತಿದೆ.

ಮಹೇಶ್ ಅಪ್ಪ-ಅಮ್ಮ ಕೂಡ ನಾಪತ್ತೆಯಾಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಅವರು ನಾಪತ್ತೆಯಾಗಿಲ್ಲ, ಬದಲಿಗೆ ಶಿರಡಿಗೆ ಹೋಗಿದ್ದಾರೆ, ಇನ್ನೊಂದು ದಿನದಲ್ಲಿ ವಾಪಸ್ಸಾಗಲಿದ್ದಾರೆ ಎಂಬ ಮಾಹಿತಿ ಕೂಡ ಬಂದಿದೆ. ಮದುವೆಯಾಗಿ ಬರಲು ಅಪ್ಪ-ಅಮ್ಮನೊಂದಿಗೇ ಮಹೇಶ್ ಕೂಡ ಶಿರಡಿಗೆ ಹೋಗಿದ್ದಾರೆ ಎಂಬ ವರದಿ ಕೂಡ ಜಾರಿಯಲ್ಲಿದೆ.

ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಹಾರ ಬದಲಾವಣೆ ಮೂಲಕ ಸರಳ ವಿವಾಹ ಮಾಡಿಕೊಂಡು ಎಲ್ಲಿಗೋ ಹೋಗಿದ್ದಾರಂತೆ ಮಹೇಶ್ ಮತ್ತು ಸೌಮ್ಯ. ಅದೇ ದೇವಸ್ಥಾನದಲ್ಲಿ ನಾಳೆ ಪ್ರೀತಿಸಿದ ಹುಡುಗಿ ಸೌಮ್ಯಳೊಂದಿಗೆ ನಿಶ್ಚಯವಾಗಿದ್ದ ಮದುವೆ ಮಹೇಶ್ ಗೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಹೀಗಾಗಿದೆಯೆಂಬ ವದಂತಿ ಹಬ್ಬಿದೆ.

ಗಣೇಶ್ ತಮ್ಮ ಮಹೇಶ್ ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ಅಲೆಮಾರಿ' ಚಿತ್ರದಲ್ಲಿ ನಟಿಸಬೇಕಾಗಿತ್ತು. ಗಜೇಂದ್ರ ಎನ್ನುವವರು ಅದನ್ನು ನಿರ್ಮಾಣ ಮಾಡಬೇಕಾಗಿತ್ತು. ಮುಹೂರ್ತದ ನಂತರ ಅದೇನೇನೋ ಬೆಳವಣಿಗೆಗಳಾಗಿ ಮಹೇಶ್ ಆ ಚಿತ್ರದಿಂದ ಹೊರಬಂದರು. ಆ ಚಿತ್ರ ಲೂಸ್ ಮಾದ ಯೋಗೇಶ್ ಪಾಲಾಗಿದೆ. ಒಟ್ಟಿನಲ್ಲಿ ಗಣೇಶ್ ತಮ್ಮ ಮಹೇಶ್ ಕಥೆ ಏನಾಗಿದೆ ಎಂಬ ಸತ್ಯ ಸಂಗತಿ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
There is News spredding, Golden Star Ganesh brother Mahesh got married and abscanded.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X