ಎರಡನೇ ಮಗು ನಿರೀಕ್ಷೆಯಲ್ಲಿ ಟ್ವಿಂಕಲ್, ಅಕ್ಷಯ್

By Rajendra

ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಎರಡನೇ ಮಗುವಿನ ನೀಕ್ಷೆಯಲ್ಲಿದ್ದಾರೆ. ಈಗ ಆಕೆ ಗರ್ಭಿಣಿ. ಮೊದಲ ಮಗುವಾಗಿ ತುಂಬ ಗ್ಯಾಪ್‌ನ ಬಳಿಕ ಟ್ವಿಂಕಲ್ ಖನ್ನಾ ಈಗ ಎರಡನೇ ಕಿಲಾಡಿಗೆ ತಾಯಿಯಾಗುತ್ತಿರುವುದು ವಿಶೇಷ. ಈಗಾಗಲೆ ಅಕ್ಷಯ್ ಹಾಗೂ ಟ್ವಿಂಕಲ್ ದಂಪತಿಗಳಿಗೆ ಒಂಭತ್ತು ವರ್ಷದ ಮಗ ಆರವ್ ಇದ್ದಾನೆ.

ಟ್ವಿಂಕಲ್ ಖನ್ನಾ ಗರ್ಭಿಣಿ ಎಂಬ ಸುದ್ದಿ ಇನ್ನೂ ಖಚಿತವಾಗಿಲ್ಲದಿದ್ದರೂ ಬಾಲಿವುಡ್‌ನಲ್ಲಿ ಈ ಬಗ್ಗೆ ಈಗಾಗಲೆ ಗುಲ್ಲೆದ್ದಿದೆ. ಇತ್ತೀಚೆಗೆ ಈಕೆ ಸುಸಾನೆ ರೋಷನ್ ಅವರ ಹೊಸ ಶೋ ರೂಂ ಉದ್ಘಾಟನೆಗೆ ಹೋಗಿದ್ದರು. ಕಾರ್ಯಕ್ರಮದಲ್ಲಿ ಈಕೆಯ ಹೊಟ್ಟೆ ಸ್ವಲ್ಪ ಮುಂದಕ್ಕೆ ಬಂದನ್ನು ನೋಡಿದ ಬಾಲಿವುಡ್ ಮಂದಿ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಎಂದು ಹಾಡಿಕೊಂಡು ತಿರುಗಾಡುತ್ತಿದ್ದಾರೆ.

ಈ ಹಿಂದೊಮ್ಮೆ ಅಕ್ಷಯ್ ಹಾಗೂ ಟ್ವಿಂಕಲ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಹಬ್ಬಿತ್ತು. ತಕ್ಷಣ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್ ಸುದ್ದಿಯನ್ನು ತಳ್ಳಿಹಾಕಿದ್ದರು. ಈಗವರು ತಮ್ಮ ಪತ್ನಿ ಗರ್ಭಿಣಿಯೋ ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಿದರೆ ಬಾಲಿವುಡ್‌ನಲ್ಲಿ ಹಬ್ಬಿರುವ ಕಾಳ್ಗಿಚ್ಚನ್ನು ತಕ್ಷಣ ನಂದಿಸಬಹುದು. (ಏಜೆನ್ಸೀಸ್)

More from Filmibeat

English summary
Speculation is rife that Twinkle Khanna is pregnant with her second child. If the news is true that Akshay and Twinkle might be over the moon to become parents for the second time. They have a nine year old son Aarav.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X