»   » ಎಲ್ಲಾ ಸ್ವಮೇಕ್‌ ಸಿನಿಮಾಕ್ಕೂ ಕುಮಾರಣ್ಣ ಸಬ್ಸಿಡಿ ನೀಡ್ತಾರಂತೆ!

ಎಲ್ಲಾ ಸ್ವಮೇಕ್‌ ಸಿನಿಮಾಕ್ಕೂ ಕುಮಾರಣ್ಣ ಸಬ್ಸಿಡಿ ನೀಡ್ತಾರಂತೆ!

Posted By:
Subscribe to Filmibeat Kannada


ಸುವರ್ಣ ಕರ್ನಾಟಕ ಮಹೋತ್ಸವದ ಕೊಡುಗೆಯಾಗಿ ಏಪ್ರಿಲ್‌ 1, 2005ರಿಂದ ಮಾರ್ಚ್‌31, 2006ರ ವರೆಗೂ ತೆರೆಕಂಡ ಎಲ್ಲಾ ಸ್ವಮೇಕ್‌ ಚಿತ್ರಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು : ರಿಮೇಕ್‌ ಕನ್ನಡ ಚಿತ್ರಗಳನ್ನು ಬಿಟ್ಟು ಉಳಿದ ಎಲ್ಲಾ ಸ್ವಮೇಕ್‌ ಚಿತ್ರಗಳಿಗೆ ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಗಳು ತಿಳಿಸಿವೆ.

ಸುವರ್ಣ ಕರ್ನಾಟಕ ಮಹೋತ್ಸವದ ಕೊಡುಗೆಯಾಗಿ ಏಪ್ರಿಲ್‌ 1, 2005ರಿಂದ ಮಾರ್ಚ್‌31, 2006ರ ವರೆಗೂ ತೆರೆಕಂಡ ಎಲ್ಲಾ ಸ್ವಮೇಕ್‌ ಚಿತ್ರಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ದೊಡ್ಡ ರಂಗೇಗೌಡ ನೇತೃತ್ವದ ಸಮಿತಿ ಅಯ್ಕೆ ಮಾಡಿದ 20 ಚಿತ್ರಗಳಿಗೆ ಸರ್ಕಾರ ತಲಾ 10 ಲಕ್ಷ ರೂ. ಸಬ್ಸಿಡಿ ಘೋಷಿಸಿದೆ. ಅಯ್ಕೆ ಸಮಿತಿ ಈಗಾಗಲೇ 2005 ನೇ ಸಾಲಿನ 20 ಚಿತ್ರಗಳನ್ನು ಅಯ್ಕೆ ಮಾಡಿ ಸರ್ಕಾರಕ್ಕೆ ಒಪ್ಪಿಸಿದೆ.

ವಾಣಿಜ್ಯ ಮಂಡಳಿ ಬೇಡಿಕೆ :

  • ಈಗ ಸಬ್ಸಿಡಿ ನೀಡಲಾಗುತ್ತಿರುವ 20 ಚಿತ್ರಗಳ ಸಂಖ್ಯೆಯನ್ನು 30ಕ್ಕೆ ಹೆಚ್ಚಿಸುವುದು.
  • ರೀಮೇಕ್‌ ಚಿತ್ರಗಳಿಗೂ ಶೇ.100 ಮನರಂಜನಾ ತೆರಿಗೆ ವಿನಾಯಿತಿ.
  • ಚಿಕ್ಕ ಸಿನಿಮಾಮಂದಿರ ನಿರ್ಮಾಣಕ್ಕೆ ಸಬ್ಸಿಡಿ ರೂಪದಲ್ಲಿ ಹಣ.
ಮುಂತಾದ ಬೇಡಿಕೆಗಳ ಪಟ್ಟಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸಿದ್ದಪಡಿಸಿದೆ.ಜ.16ರಂದು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಲ್ಲಿಸುವ ಸಾಧ್ಯತೆಯಿದೆ.

ಅದರೆ ನಿಯಮಿತವಾಗಿ ಬೇಡಿಕೆ ಸಲ್ಲಿಸುತ್ತಾ , ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತಿರುವ ಚಲನಚಿತ್ರ ಮಂಡಳಿಯ ಬೇಡಿಕೆಯ ಬಗ್ಗೆ ಸರ್ಕಾರಿ ಅಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಕೂಡ ಇದೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada