»   » ನನ್ನ ಹೆಂಡತಿ ಐಶು ಗರ್ಭಿಣಿಯಲ್ಲ : ಅಭಿಷೇಕ್ ಬಚ್ಚನ್

ನನ್ನ ಹೆಂಡತಿ ಐಶು ಗರ್ಭಿಣಿಯಲ್ಲ : ಅಭಿಷೇಕ್ ಬಚ್ಚನ್

Posted By:
Subscribe to Filmibeat Kannada


ಸಿನಿಮಾ ಪತ್ರಕರ್ತರಿಗೆ ಸದಾ ನಟಿಯರ ಹೊಟ್ಟೆ ಮೇಲೆಯೇ ಕಣ್ಣು!

ಯಾರಿಂದೆ ಯಾರು ಸುತ್ತುತ್ತಿದ್ದಾರೆ, ಯಾವ ನಟಿ ಅಮ್ಮ ಆದಳು ಎಂದು ಪತ್ತೆ ಮಾಡಿ, ಸಂಶೋಧನೆ ಮಾಡಿ, ಊಹೆ ಮಾಡಿ ಪತ್ರಕರ್ತರು ಸುದ್ದಿ ಬರೆಯುತ್ತಾರೆ! ಈ ಕೆಲಸ ಸ್ಯಾಂಡಲ್ ವುಡ್ ನಲ್ಲಿ ಸ್ವಲ್ಪ ಕಡಿಮೆಯೇ. ಆದರೆ ಬಾಲಿವುಡ್ ನಲ್ಲಿ ನಿಜ ಯಾವುದೋ, ಸುಳ್ಳುಯಾವುದೋ ಒಂದೊಂದು ಸಲ ನಟ-ನಟಿಯರೇ ಗೊಂದಲಕ್ಕೆ ಬೀಳುತ್ತಾರೆ.

ಈಗ ವಿಷಯ ಏನಪ್ಪಾ ಅಂದ್ರೆ, ಮೊನ್ನೆಯಷ್ಟೇ ಮದುವೆಯಾದ ಐಶ್ವರ್ಯ ರೈ ಗರ್ಭಿಣಿ ಎಂದು ಕೆಲವು ಪತ್ರಿಕೆಗಳು ಬರೆದಿದ್ದವು. ಇದೆಲ್ಲ ಸುಳ್ಳು ನಾನು ಗರ್ಭಿಣಿಯಲ್ಲ ಎಂದು ಐಶ್ವರ್ಯ ರೈ, ನನ್ನ ಹೆಂಡತಿ ಈಗಲೇ ತಾಯಿಯಾಗುವುದಿಲ್ಲ ಎಂದು ಪತಿದೇವರು ಅಭಿಷೇಕ್ ಬಚ್ಚನ್ ಸ್ಪಷ್ಪವಾಗಿ ಹೇಳಿದ್ದಾರೆ.

ಪ್ರಸ್ತುತ ಹೈದರಾಬಾದ್ ನಲ್ಲಿರುವ 33 ವರ್ಷದ ಐಶ್ವರ್ಯ ರೈ, ಸರ್ಕಾರ್ ರಾಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ, ದಿ ಪಿಂಕ್ ಫ್ಯಾಂಥರ್-2 ಇಂಗ್ಲಿಷ್ ಚಿತ್ರದಲ್ಲಿ ಐಶ್ವರ್ಯ ರೈ ಅಭಿನಯಿಸಲಿದ್ದಾರೆ. ಪ್ರೆಂಚ್ ಪೊಲೀಸ್ ಪತ್ತೆಧಾರಿಣಿ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ.

ಐಶ್ ಬೇಬಿ ಗರ್ಭಿಣಿಯಾಗಿಲ್ಲ ಎಂಬುದನ್ನು ಕೇಳಿ ಕೆಲವರಿಗೆ ಖುಷಿಯಾಗಿದೆಯಂತೆ, ಕೆಲವರಿಗೆ ಬೇಸರವಾಗಿದೆಯಂತೆ ಎಂಬುದು ಶುದ್ಧ ಕುಹಕ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada