»   » ಯಾಹೂ! ಕನ್ನಡ ಚಿತ್ರರಂಗ ಗ್ರಹಣ ಸಡಿಲಗೊಂಡು ಬಂದಿದೆ ‘ಪ್ರಾಣ’

ಯಾಹೂ! ಕನ್ನಡ ಚಿತ್ರರಂಗ ಗ್ರಹಣ ಸಡಿಲಗೊಂಡು ಬಂದಿದೆ ‘ಪ್ರಾಣ’

Subscribe to Filmibeat Kannada

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಹಿಡಿದಿದ್ದ ಗ್ರಹಣ ಕಡೆಗೂ ಸಡಿಲವಾಗುವ ನಿರೀಕ್ಷೆಗಳು ಮೂಡಿವೆ. ಕನ್ನಡದ ಹೊಸ ಚಿತ್ರಗಳಾದ ‘ಪ್ರಾಣ’ ಹಾಗೂ ‘ಯಾಹೂ’ ಶುಕ್ರವಾರ ಯಾವುದೇ ಆತಂಕವಿಲ್ಲದೇ ತೆರೆಕಾಣುತ್ತಿವೆ.

ಪರಭಾಷಾ ಚಿತ್ರಗಳನ್ನು ಏಳು ವಾರಗಳ ನಂತರ ರಾಜ್ಯದಲ್ಲಿ ಬಿಡುಗಡೆ ಮಾಡುವ ಸರಕಾರದ ನೀತಿ ವಿರೋಧಿಸಿ, ಕಳೆದ ಎರಡುವಾರಗಳಿಂದ ಚಿತ್ರಮಂದಿರಗಳ ಮಾಲೀಕರು ನಡೆಸುತ್ತಿದ್ದ ಮುಷ್ಕರ ಸಡಿಲಗೊಂಡಿದೆ. ಹೊಸ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕ ಚಿತ್ರಮಂದಿರ ಮಾಲೀಕರ ಸಂಘದ ಅಧ್ಯಕ್ಷ ಕುಮಾರ ಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ.

ನಗರದ ರೆಕ್ಸ್‌, ಸಿಂಪೋನಿ, ಮಲ್ಟಿಪ್ಲೇಕ್ಸ್‌ ಚಿತ್ರಮಂದಿರಗಳು ಶುಕ್ರವಾರದಿಂದ ಮುಷ್ಕರ ನಿಲ್ಲಿಸಿ, ಹಳೆಯ ಇಂಗ್ಲೀಷ್‌ ಚಿತ್ರಗಳನ್ನು ಪ್ರದರ್ಶಿಸಲಿವೆ.

ಈ ನಿರ್ಧಾರ ಬೆಂಗಳೂರಿಗೆ ಮಾತ್ರ ಅನ್ವಯಿಸುತ್ತದೆ. ಹೊಸ ಕನ್ನಡ ಚಿತ್ರಗಳ ಬಿಡುಗಡೆಗೆ ಉತ್ತರ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲವೆಂದು ಚಿತ್ರ ಪ್ರದರ್ಶಕರ ಮಹಾ ಮಂಡಲದ ಅಧ್ಯಕ್ಷ ಓದು ಗೌಡ ತಿಳಿಸಿದ್ದಾರೆ.

ಸಂಧಾನದ ಸಭೆ: ಕನ್ನಡ ಚಿತ್ರರಂಗದ ಬಿಕ್ಕಟ್ಟು ನಿವಾರಣೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಪಾಂಡೆ ಅಧ್ಯಕ್ಷತೆಯಲ್ಲಿ ಶನಿವಾರ ಉನ್ನತ ಸಮಿತಿ ಸಭೆ ನಡೆಯುವ ಸೂಚನೆಗಳಿವೆ.

ಹೊಸ ಪರಭಾಷಾ ಚಿತ್ರಗಳನ್ನು ರಾಜ್ಯದಲ್ಲಿ ಶುಕ್ರವಾರ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದ ಚಿತ್ರಮಂದಿರಗಳು, ಉನ್ನತ ಸಮಿತಿ ಸಭೆಯ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ. ಶನಿವಾರ ಚಿತ್ರರಂಗಕ್ಕೆ ಹಿಡಿದಿದ್ದ ಶನಿ ತೊಲಗುವುದೇ ಕಾದು ನೋಡ ಬೇಕು.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada