ಮುರಿದು ಬಿದ್ದ ಮೂರು ವಾರದ ಒಪ್ಪಂದ- ರಾಜ್‌ಕುಮಾರ್‌ ಅಖಾಡಕ್ಕೆ

By Staff

ಬೆಂಗಳೂರು : ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಬಗೆಗಿನ ಮೂರು ವಾರದ ನಿರ್ಬಂಧವನ್ನು ಪ್ರದರ್ಶಕರು ಮುರಿಯುವ ಸೂಚನೆ ನೀಡಿದ್ದು, ಶುಕ್ರವಾರ(ನ.12) ಹೊಸ ಪರಭಾಷಾ ಚಿತ್ರಗಳ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ವೀರ್‌ ಝರಾ, ಮನ್ಮಥನ್‌, ಚಿಟ್ಟಿ, ಮತ್ತಿತರ ಹೊಸ ಚಿತ್ರಗಳ ಜಾಹೀರಾತುಗಳ ಪ್ರದರ್ಶಿಸುವ ಮೂಲಕ ಚಿತ್ರೋದ್ಯಮದ ಸಮರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಒಪ್ಪಂದವನ್ನು ಉಲ್ಲಂಘನೆ ಮಾಡುತ್ತಿರುವ ಬೆನ್ನಲ್ಲಿ ಪ್ರದರ್ಶಕರ ವಿರುದ್ಧ ಕನ್ನಡ ಚಿತ್ರೋದ್ಯಮ ನ.12 ರಂದು ಡಾ.ರಾಜ್‌ಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದೆ.

ಕನ್ನಡ ಚಿತ್ರೋದ್ಯಮದ ಪರವಾಗಿರಾಜ್ಯ ರೈತ ಸಂಘ, ದಲಿತ ಸಂಘಟನೆಗಳು, ಕರುನಾಡ ಸೇನೆ ಮತ್ತಿತರ ಸಂಘಟನೆಗಳು ಸಹಾ ದನಿಸೇರಿಸಿವೆ. ಆಂದು ರಾಜ್ಯದ ವಿವಿಧ ಮೂಲೆಗಳಿಂದ 5 ಲಕ್ಷ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿ, ಪರಭಾಷಾ ಚಿತ್ರಗಳ ಪ್ರದರ್ಶನವನ್ನು ವಿರೋಧಿಸಲಿದ್ದಾರೆ. ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರದ ಮುಂದೆ ಮಾನವ ಸರಪಳಿ ನಿರ್ಮಿಸಿ, ಅಹಿಂಸಾರೂಪದ ಹೋರಾಟ ನಡೆಸುವರೆಂದು ಮೂಲಗಳು ತಿಳಿಸಿವೆ.

ಚಿತ್ರೋದ್ಯಮದಲ್ಲಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಂಗಳ ವಾರ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಸಭೆ ನಡೆಸಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಿದರು. ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವುದು ಹಾಗೂ ಕವಿ-ಕಲಾವಿದರ ಬೆಂಬಲ ಕೋರಲು ಸಭೆ ನಿರ್ಧರಿಸಿದೆ.

ಅಸಹಾಯಕತೆ : ಕರ್ನಾಟಕ ಪ್ರದರ್ಶಕರ ಮಹಾಮಂಡಲ ಒಪ್ಪಂದಕ್ಕೆ ಬದ್ಧವಾಗಿದೆ. ಮಹಾಮಂಡಲ ವ್ಯಾಪ್ತಿಯಲ್ಲಿ ಹೊಸ ಪರಭಾಷಾ ಚಿತ್ರಗಳ ಪ್ರದರ್ಶನ ನಡೆಯುವುದಿಲ್ಲ. ಬೆಂಗಳೂರಿನ ಪ್ರದರ್ಶಕರು ಮಹಾಮಂಡಲದ ಸದಸ್ಯತ್ವ ಹೊಂದಿಲ್ಲ ಎಂದು ಅಧ್ಯಕ್ಷ ಮಹಾ ಮಂಡಲದ ಅಧ್ಯಕ್ಷ ಓದುಗೌಡರ್‌ ತಿಳಿಸಿದ್ದಾರೆ.

ಪರಭಾಷಾ ಚಿತ್ರಗಳ ನಿರ್ಬಂಧವನ್ನು ಪ್ರಶ್ನಿಸಿ ಹೈಕೋರ್ಟ್‌ ಮತ್ತು ಸುಪ್ರಿಂ ಕೋರ್ಟ್‌ ಸರಕಾರಕ್ಕೆ ನೋಟೀಸ್‌ ಜಾರಿ ಮಾಡಿದೆ. ಧರ್ಮಸಿಂಗ್‌ ಸರಕಾರ ಧರ್ಮಸಂಕಟದಲ್ಲಿ ಸಿಲುಕಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X