ನಿಷೇಧದ ವಿರುದ್ಧ ತಿರುಗಿಬಿದ್ದ ನೊಂದ ಜೀವಿ ನಿಖಿತಾ

By Mahesh

Next »

« Previous

ನಾನು ದರ್ಶನ್ ಒಳ್ಳೆ ಫ್ರೆಂಡ್ ಅಷ್ಟೇ. ಇಬ್ಬರ ಮಧ್ಯೆ ಏನೋ ಅಫೇರ್ ಇದೆ ಎಂದು ಆರೋಪ ಮಾಡುವವರು ಮೊದಲಿಗೆ ಫ್ರೂಫ್ ಕೊಡಲಿ. ಆರೋಪ ಸಾಬೀತಾದರೆ ನಾನು ತಕ್ಷಣ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ನಟಿ ನಿಖಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮಿಬ್ಬರ ನಡುವೆ ಯಾವುದೇ ಅನೈತಿಕ ಸಂಬಂಧ ಇಲ್ಲ ಎಂದು ಈ ಮುಂಚೆ ಕೂಡಾ ಹೇಳಿದ್ದೇನೆ, ವಿಜಯಲಕ್ಷ್ಮಿಗೆ ಕೂಡಾ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮೂವರು ಒಳ್ಳೆ ಫ್ರೆಂಡ್ ಅಷ್ಟೆ. ಗಂಡ ಹೆಂಡತಿ ಜಗಳದ ಮಧ್ಯೆ ನನ್ನನು ಏಕೆ ಎಳೆದು ತರುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನಾಳೆ ದಿನ ಗಂಡ ಹೆಂಡತಿ ಒಂದಾಗುತ್ತಾರೆ. ನನ್ನ ಮಾನ ಹಾಳಾಗಿದ್ದು ಸರಿ ಹೋಗುತ್ತಾ?

ನಿರ್ಮಾಪಕರ ಸಂಘದ ನಿರ್ಧಾರ ಕೇಳಿ ಶಾಕ್ ಆಗಿದೆ, ಬಾಂಬೆ ಹೀರೋಯಿನ್, ಅವಿವಾಹಿತೆ, ಅಸಹಾಯಕಿ ಎಂದು ಏನು ಬೇಕಾದರೆ ನಿರ್ಣಯ ಹೇಗೆ ತೆಗೆದುಕೊಳ್ಳುತ್ತಾರೆ. ಒಂದು ನೋಟಿಸ್ ಕೊಟ್ಟಿಲ್ಲ. ವಿಚಾರಣೆ ಆಗಿಲ್ಲ. ಆರೋಪ ಬಂದ ಕೂಡಲೇ ಏಕಾಏಕಿ ನಿರ್ಧಾರ ಕೈಗೊಂಡಿದ್ದು ಬೇಸರ ತರಿಸಿದೆ.

ನನ್ನನ್ನು ಟಾರ್ಗೆಟ್ ಮಾಡಲಾಗಿದೆ: ನಂಗೆ ಕನ್ನಡ ಎಂದ್ರೆ ಇಷ್ಟ. ನಾನು ತುಂಬಾ ತುಂಬಾ ಅಪ್ ಸೇಟ್ ಆಗಿದ್ದೀನಿ. ತೆಲುಗು, ತಮಿಳು, ಮಲೆಯಾಳಂ ನಲ್ಲಿ ನಟಿಸಿದ್ದರೂ ಕನ್ನಡ ಚಿತ್ರರಂಗ ನನಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಇಲ್ಲೇ ಏನಾದರೂ ಸಾಧನೆ ಮಾಡಬೇಕು ಎಂದು ಬಂದವಳು ಯಾರ ಮನೆ ಒಡೆಯುವುದು ನನ್ನ ಕೆಲಸವಲ್ಲ ಎಂದು ನಟಿ ನಿಖಿತಾ ತುಕ್ರಾಲ್ ನೊಂದು ಪ್ರತಿಕ್ರಿಯಿಸಿದ್ದಾರೆ.

ತಂದೆ ಕಳೆದುಕೊಂಡ ನೋವಿನಲ್ಲಿರುವ ನನ್ಗೆ ಯಾಕೆ ಈ ರೀತಿ ನೋವು ನೀಡುತ್ತಿದ್ದಾರೆ. ನನ್ನ ಜೊತೆ ಸಂಬಂಧ ಇದೆ ಅಂತಾ ದರ್ಶನ್ ಹೇಳಿದ್ದಾರಾ? ವಿಜಯಲಕ್ಷ್ಮಿ ಹೇಳಿದ್ದಾರಾ? ಎಂದು ನಿಖಿತಾ ಪ್ರಶ್ನಿಸಿದ್ದಾರೆ.

ಮುಂಬೈಯಲ್ಲಿ ಗಣೇಶ ಮೂರ್ತಿಯ ಉತ್ತರ ಪೂಜೆಯಲ್ಲಿ ನಿರತರಾಗಿರುವ ನಿಖಿತಾ ಅವರು, ಬೆಂಗಳೂರಿಗೆ ಬರುವ ಬಗ್ಗೆ ಅಥವಾ ದರ್ಶನ್ ಗೆ ಬಂದಿರುವ ದುಃಸ್ಥಿತಿಯ ಬಗ್ಗೆ ಯಾವುದೇ ಉತ್ತರ ನೀಡಲಿಲ್ಲ. ಅನಾವಶ್ಯಕವಾಗಿ ನನ್ನನ್ನು ವಿಲನ್ ನಂತೆ ನಿಮಾರ್ಪಕರ ಸಂಘ ಬಿಂಬಿಸುವುದನ್ನು ಬಿಟ್ಟರೆ ಒಳ್ಳೆಯದು, ಮಾಧ್ಯಮಗಳು ನನಗೆ ಈ ವಿಷಯದಲ್ಲಿ ಹೆಲ್ಪ್ ಮಾಡಬೇಕು ಎಂದಷ್ಟೇ ಹೇಳಿದರು.

Next »

« Previous

More from Filmibeat

English summary
Actress Nikitha has slammed KFPA decision of banning her from KFI for three years. Nikitha said give me proof about affair with Actor Darshan then will walkout from Kannada film industry.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X