ರಾಜಕೀಯದಲ್ಲೂ ಪೂಜಾ ಗಾಂಧಿ 'ಬೆನ್ನು'ಬಿದ್ದ ವಿವಾದ

ಪೂಜಾ ಜೆಡಿಎಸ್ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಹಿರಿಯ ನಟಿ ಮಾಳವಿಕಾ ಕೂಡ ಅಲ್ಲಿ ಸೇರಿಕೊಂಡಿದ್ದಾರೆ. ಈ ಬಗ್ಗೆ ಪೂಜಾ ಗಮನ ಸೆಳೆದಾಗ "ನನ್ನ ಸ್ಪರ್ಧೆ ಸಿನಿಮಾದಲ್ಲಿ ಮಾತ್ರ, ರಾಜಕೀಯದಲ್ಲಿ ಇಲ್ಲ. ನನಗೆ ಯಾರೂ ಅಡ್ಡ ಬರೋದಿಲ್ಲ. ಯಾರು ಎಲ್ಲಿ ಸೇರಿಕೊಂಡರೂ ಅದು ಅವರಿಷ್ಟ. ನನಗೂ ಅದಕ್ಕೂ ಸಂಬಂಧವಿಲ್ಲ, ನನ್ನ ದಾರಿ ನನಗೆ" ಎನ್ನುತ್ತಾರೆ.
ಜೆಡಿಎಸ್ ಸೇರಿದ ಮೇಲೆ ಪೂಜಾ ಗಾಂಧಿಗೆ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮನೆ ಕೊಟ್ಟಿದ್ದಾರೆ ಎಂಬ ವದಂತಿ ಹರಡಿತ್ತು. ಅದೀಗ ತಣ್ಣಗಾಗಿದೆ. ಅಷ್ಟರಲ್ಲೇ ಈ ಸುದ್ದಿ ಹಬ್ಬಿದೆ. ಪೂಜಾ ಗಾಂಧಿ ಈ ಸುದ್ದಿಗಳಿಗೆ " ನಾನು ಬೆತ್ತಲಾಗಿದ್ದೇನೆ, ನನಗೆ ಮನೆ ಕೊಟ್ಟಿದ್ದಾರೆ. ಇಂತಹ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳುವುದು, ಪ್ರತಿಭಟಿಸುವುದು ಇವೆಲ್ಲ ಮಾಡುವ ಬದಲು ಜನರು, ತಮಗೆ ನೀರಿಲ್ಲ, ಕರೆಂಟ್ ಇಲ್ಲ, ಗ್ಯಾಸ್ ಇಲ್ಲ ಎಂದು ಪ್ರತಿಭಟಿಸಲಿ, ಆಗ ಅದಕ್ಕೊಂದು ಅರ್ಥ ಇರುತ್ತದೆ" ಎಂದಿದ್ದಾರೆ. ಪೂಜಾ ಮಾತಿನಲ್ಲಿ ಪ್ರಬುದ್ಧತೆ ಕಾಣಿಸುತ್ತಿದೆ ಅಲ್ಲವೇ? (ಒನ್ ಇಂಡಿಯಾ ಕನ್ನಡ)
More from Filmibeat
English summary
There is Rumour spreading out that Actress Pooja Gandhi says Good Bye to Filmland. But, She Rejects this rumour.


Click it and Unblock the Notifications











