ರಣಬೀರ್‌ಗೆ ದೀಪಿಕಾ ಕಾಂಡೋಮ್ ಉಡುಗೊರೆ
ಗುಳಿಕೆನ್ನಿ ಸುಂದರಿ ದೀಪಿಕಾ ಪಡುಕೋಣೆ ಹೊಸ ಸೆಕ್ಸ್ ಬಾಂಬ್ ಸಿಡಿಸಿದ್ದಾರೆ. ತನ್ನ ಮಾಜಿ ಪ್ರಿಯತಮ ರಣಬೀರ್‌ಗೆ ಕಾಂಡೋಮ್ ಪಾಕೆಟ್ಟನ್ನು ಉಡುಗೊರೆಯಾಗಿ ನೀಡುವುದಾಗಿ ದೀಪಿಕಾ ಡಂಗುರ ಸಾರಿದ್ದಾರೆ. ದೀಪಿಕಾ ಸಿಡಿಸಿರುವ ಹೊಸ ಸೆಕ್ಸ್ ಬಾಂಬ್ ಬಾಲಿವುಡ್ ವಲಯದಲ್ಲಿ ಕಂಪನ ಸೃಷ್ಟಿಸಿದೆ.
ಸ್ಟಾರ್ ವರ್ಲ್ಡ್‌ನಲ್ಲಿ ಪ್ರಸಾರವಾಗುತ್ತಿರುವ 'ಕಾಫಿ ವಿತ್ ಕರಣ್' ಎಂಬ ಹರಟೆ ಕಾರ್ಯಕ್ರಮದಲ್ಲಿ(ಟಾಕ್ ಶೋ) ದೀಪಿಕಾ ಮಾತನಾಡುತ್ತಾ ಹೀಗೆಂದಿದ್ದಾರೆ. ಸಿನಿಮಾ ತಾರೆಗಳೊಂದಿಗೆ ಬಾಲಿವುಡ್ ನಟ ಕರಣ್ ಜೋಹಾರ್ ನಡೆಸಿಕೊಡುವ ಕಾರ್ಯಕ್ರಮ ಇದಾಗಿದೆ. ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ದೀಪಿಕಾರನ್ನು ಕರಣ್ ಮಾತಿಗೆಳೆದಿದ್ದರು.
"ಒಂದು ವೇಳೆ ರಣಬೀರ್‌ಗೆ ಉಡುಗೊರೆ ಕೊಡುವ ಅವಕಾಶ ಸಿಕ್ಕಿದರೆ ಏನನ್ನು ಕೊಡುತ್ತೀರಿ" ಎಂದು ಕರಣ್ ಕೇಳಿದ್ದರು. ಆಗ ದೀಪಿಕಾ ಕಾಂಡೋಮ್ ಪಾಕೆಟ್ ಒಂದನ್ನು ಕೊಡುವುದಾಗಿ ಹೇಳಿ ಕುಟುಕಿದ್ದಾರೆ. ಸರಿ ಕತ್ರಿನಾ ಕೈಫ್ ಬಗ್ಗೆ ನಿಮ್ಮ ಅಭಿಪ್ರಾಯ ಎಂದಾಗ, ಆಕೆಯ ಪಾಸ್ ಪೋರ್ಟ್ ನೋಡಬೇಕೆಂದಿದ್ದೇನೆ ಎಂದು ಚುಟುಕು ಉತ್ತರ ನೀಡಿದ್ದಾರೆ.
ಸದ್ಯಕ್ಕೆ ಗಾಸಿಪ್ ಕಾಲಂಗಳಲ್ಲಿ ಕತ್ರಿನಾ ಜೊತೆ ರಣಬೀರ್ ಹೆಸರು ಕೇಳಿಬರುತ್ತಿದೆ. ಇದನ್ನು ಉದ್ದೇಶವಾಗಿಟ್ಟುಕೊಂಡೇ ಕರಣ್ ಪ್ರಶ್ನೆ ಕೇಳಿದ್ದ. ಬಹುಶಃ ಕತ್ರಿನಾರ ವಯಸ್ಸು ತಿಳಿಯುವ ತವಕ ಇರಬೇಕು ದೀಪಿಕಾಗೆ ಎನ್ನುತ್ತಿದ್ದಾರೆ ಸಿನಿಕರು. ಹೋಗಲಿ ಬಿಡಿ ಸಿದ್ದಾರ್ಥ್ ಮಲ್ಯಗೆ ನೀವೇನು ಉಡುಗೊರೆ ಕೊಡುತ್ತೀರಿ ಎಂದು ಕೇಳಲಿಲ್ಲವಲ್ಲ.


Click it and Unblock the Notifications











