ಅಣ್ಣಾಬಾಂಡ್ ಗೇ ವಿತರಕ ಪ್ರಸಾದ್ ಗುಡ್ ಬೈ !

ಇಡೀ ಚಿತ್ರವನ್ನು ಪ್ರಸಾದ್ ಖರೀದಿಸುವ ಮಾತಾಗಿ ಅಡ್ವಾನ್ಸ್ ಕೂಡ ಕೊಟ್ಟು ಮಾಧ್ಯಮಗಳ ಮುಂದೆ ದೊಡ್ಡ ಸುದ್ದಿ ಮಾಡಿಕೊಂಡಿದ್ದರು. ರಾಘಣ್ಣನ ಮಾತು ಕೇಳಿದ ನಂತರ ಪ್ರಸಾದ್, ಮಾಧ್ಯಮಗಳ ಜತೆ ಅಸಮಾಧಾನ ತೋಡಿಕೊಂಡಿದ್ದರು. ಆಗಲೇ "ನಾನು ಈ ಟೀಮಿನಲ್ಲಿ ಖಂಡಿತ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಅದರಂತೆ ಮಾಡಿ ಮುಂಗಡ ಹಣ ವಾಪಸ್ ಪಡೆದು, ಚಿತ್ರದಿಂದ ಹೊರಗೆ ಬಂದಿದ್ದಾರೆ.
ಅಣ್ಣಾ ಬಾಂಡ್ ಚಿತ್ರ ಬಿಡುಗಡೆಯಾದ ಮಾರನೇ ದಿನವೇ ಉಪೇಂದ್ರ ನಟನೆಯ 'ಕಠಾರಿ ವೀರ ಸುರಸುಂದರಾಂಗಿ' ಬಿಡುಗಡೆಯಾಗುತ್ತಿದೆ. ಆ ಚಿತ್ರದ ನಿರ್ಮಾಪಕ ಮುನಿರತ್ನ ಹಾಗೂ ಉಪೇಂದ್ರರದೇ ಇನ್ನೊಂದು ಚಿತ್ರ 'ಗಾಡ್ ಫಾದರ್ ಮಧ್ಯೆ ಬಿಡುಗಡೆಗೆ ಮಹಾಸಮರ ನಡೆದು ಕೊನೆಗೆ ಕಠಾರಿವೀರ ಬಿಡುಗಡೆ ಏಪ್ರಿಲ್ 27ಕ್ಕೆಏ ಪಕ್ಕಾ ಆಗಿದೆ. ಇದೇ ವೇಳೆ ಅಣ್ಣಾಬಾಂಡ್ ಟೀಮಿನಲ್ಲಿ ಈ ಘಟನೆ ನಡೆದಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Power Star Puneeth Rajkumar Movie Annabond's Rs. 16 Crore Deal breaked. Distributor Prasad Out from the Deal now.


Click it and Unblock the Notifications











