ಪೊಲೀಸ್ ಬಲೆಗೆ ಮೀಟರ್ ಬಡ್ಡಿ ನಿರ್ಮಾಪಕ ಎಸ್ ಶಂಕರ್

By Rajendra

Kannada film producer arrested
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಕನ್ನಡಚಲನಚಿತ್ರ ನಿರ್ಮಾಪಕ ಎಸ್ ಶಂಕರ್ (54) ಬೆಂಗಳೂರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಂಕರ್ ಅವರಿಂದ ಪೊಲೀಸರು ಖಾಲಿ ಛಾಪಾ ಕಾಗದಗಳು, ಬ್ಲ್ಯಾಂಕ್ ಚೆಕ್‌ಗಳು, ಪ್ರಾಮಿಸರಿ ನೋಟ್‌ಗಳು ಸೇರಿದಂತೆ 75ಕ್ಕೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಂಪಗಿರಾಮನಗರದ ದೇವಾಂಗ ಹಾಸ್ಟೆಲ್ ರಸ್ತೆಯ ನಿವಾಸಿಯಾದ ಶಂಕರ್ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಸಣ್ಣಪುಟ್ಟ ಉದ್ಯಮಿಗಳು, ವ್ಯಾಪಾರಿಗಳು, ನಿರ್ಮಾಪಕರು, ಚಿತ್ರ ವಿತರಕರಿಗೆ ಸಾಲ ನೀಡುತ್ತಿದ್ದ. ಆದರೆ ಬಡ್ಡಿ ಮಾತ್ರ ಶೇ.10 ರಿಂದ 25ರತನಕ ಪಡೆಯುತ್ತಿದ್ದ.

ಬಡ್ಡಿ ಕೊಡುವುದು ಒಂದೆರಡು ದಿನ ತಡವಾದರೆ ಬಡ್ಡಿ ಮೇಲೆ ಚಕ್ರಬಡ್ಡಿ, ಮೀಟರ್ ಬಡ್ಡಿ ಹಾಕುತ್ತಿದ್ದ. ಅರ್ಜೆಂಟಾಗಿ ಈತನ ಬಳಿ ಸಾಲ ತೆಗೆದುಕೊಂಡವರು ಅದನ್ನು ಸಮಯಕ್ಕೆ ಕೊಡಲಾಗದೆ ಅತ್ತ ಏರುತ್ತಿರುವ ಮೀಟರ್ ಬಡ್ಡಿಯನ್ನು ಕಟ್ಟಲಾಗದೆ ಪರಿತಪಿಸುತ್ತಿದ್ದರು.

ಈತನಿಂದ ಅನ್ಯಾಯಕ್ಕೊಳಗಾದವರ ಗೋಳು ಸಿಸಿಬಿ ಪೊಲೀಸರ ಕಿವಿಗೆ ಬಿದ್ದಿದೆ. ಈಗ ಆತ ಪೊಲೀಸರ ಅತಿಥಿ. ಪೊಲೀಸರ ಪ್ರಕಾರ, ಶಂಕರ್ ಸರಿಸುಮಾರು ಎರಡು ಕೋಟಿ ವ್ಯವಹಾರ ನಡೆಸುತ್ತಿದ್ದರು. ಅಂದಹಾಗೆ ಈತ 'ಮತ್ತೆ ಹಾಡಿತು ಕೋಗಿಲೆ', 'ಬಂಗಾರದ ಕಳಸ', 'ದೀಪಾವಳಿ' ಹಾಗೂ 'ಜನನಿ ಜನ್ಮಭೂಮಿ' ಚಿತ್ರಗಳನ್ನು ನಿರ್ಮಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
The Central Crime Branch have arrested a Kannada film producer, for allegedly harassing other producers and distributors, by charging exorbitant interest rates. The accused had produced Kannada movies Matthe Hadithu Kogile, Bangarada Kalasa, Deepavali and Janani Janmabhumi and other films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X