ನಿಮ್ಹತ್ರ ಇದ್ಯಾ ಆಧಾರ : ಸೂರಪ್ಪ ಬಾಬು ಪ್ರಶ್ನೆ

ನಿಖಿತಾ ಏನೂ ತಪ್ಪು ಮಾಡಿಲ್ಲ ಎನ್ನುವುದಾದರೆ ಬೆಂಗಳೂರಿಗೆ ಬಂದು ನಮ್ಮ ಸಂಘದ ಕಚೇರಿಯಲ್ಲಿ ಲಿಖಿತ ರೂಪದಲ್ಲಿ ಹೇಳಿಕೆ ನೀಡಲಿ ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಕಾರ್ಯದರ್ಶಿ ಸೂರಪ್ಪ ಬಾಬು ಖಾಸಗಿ ವಾಹಿನಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಸಾರ್, ವಿಜಯಲಕ್ಷ್ಮಿ ದೂರಿನ ಕಾಪಿ ನಿಮ್ಮ ಬಳಿ ಇದ್ಯಾ? ಅದು ಬಿಟ್ಟರೆ ನಿಮ್ಮ ಬಳಿ ಯಾವ ಆಧಾರ ಇದೆ? ದರ್ಶನ್ ಹಾಗೂ ನಿಖಿತಾ ಸಂಬಂಧದ ಬಗ್ಗೆ ಆರೋಪ ಸಾಬೀತುಪಡಿಸು ಪ್ರೂಫ್ ಇದ್ಯಾ? ಎಂದು ಖಾಸಗಿ ವಾಹಿನಿ ಸುದ್ದಿವಾಚಕ ಕೇಳಿದ ಪ್ರಶ್ನೆಗೆ ನಿರ್ಮಾಪಕ ಸೂರಪ್ಪ ಬಾಬು ತಬ್ಬಿಬ್ಬಾದರು.
ನಿಮ್ಮ ಬಳಿ ದಾಖಲೆ ಇದ್ಯಾ, ಆಧಾರ ಇದ್ಯಾ ಸುದ್ದಿ ಪ್ರಸಾರ ಮಾಡಿದ್ದೀರಲ್ಲ ಎಂದು ಸೂರಪ್ಪ ಬಾಬು ಮರುಪ್ರಶ್ನೆ ಎಸೆದರು.
ಇದಕ್ಕೂ ಮುನ್ನ ಮಾತನಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನಂ ನಾಯ್ಡು, ಅಯ್ಯೋ ಈ ರೀತಿ ಆಫೇರ್, ಕುಟುಂಬ ಜಗಳ ಸಿನಿಮಾ ಇಂಡಸ್ಟ್ರೀಯಲ್ಲಿ ಕಾಮನ್ ಎನ್ನುವ ಮೂಲಕ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು.
ಗೋಡೆ ಕುಸಿದು ಸಂಜನಾ ಸಿಂಗ್ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆಯ ಆರೋಪಿಯಾಗಿದ್ದ ನಿರ್ಮಾಪಕ ಕಮ್ ಕಂಟ್ರಾಕ್ಟರ್ ಮುನಿರತ್ನ ಹೇಳಿಕೆ ಇಡೀ ಚಿತ್ರರಂಗವೇ ಅನೈತಿಕತೆಯಲ್ಲಿದೆ ಎನ್ನುವಂತಿತ್ತು.


Click it and Unblock the Notifications











