»   » ಸಿಹಿ ದಿನೇಶ್ ಬಾಬುಗೆ ಕಹಿ ಚಂದ್ರುಗೆ

ಸಿಹಿ ದಿನೇಶ್ ಬಾಬುಗೆ ಕಹಿ ಚಂದ್ರುಗೆ

Posted By:
Subscribe to Filmibeat Kannada
ಕೊನೆಗೂ ಡಾ.ವಿಷ್ಣುವರ್ಧನ್ ಅವರ 199ನೇ ಚಿತ್ರಕ್ಕೆ ನಿರ್ದೇಶಕರ ಜೊತೆಗೆ ಕತೆಯೂ ಬದಲಾಗಿದೆ. ಸಿಹಿಕಹಿ ಚಂದ್ರು ನಿರ್ದೇಶಿಸ ಬೇಕಾಗಿದ್ದ 'ನಾನೇ ಬೇರೆ ನನ್ ಸ್ಟೈಲೇ ಬೇರೆ' ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಲಿದ್ದಾರೆ. ಹೊಸ ಕತೆಯನ್ನು ದಿನೇಶ್ ಬಾಬು ಅವರೆ ಹೆಣೆದಿದ್ದಾರೆ. ಸಿಹಿಕಹಿ ಚಂದ್ರು ಮೇಲೆ ನಂಬಿಕೆ ಬರಲಿಲ್ಲವೊ ಏನೋ ಕೆ.ಮಂಜು ಕೊನೆ ಗಳಿಗೆಯಲ್ಲಿ ಅವರಿಗೆ ಕೋಕ್ ನೀಡಿದ್ದಾರೆ.

ನಾನೇ ಬೇರೆ ನನ್ ಸ್ಟೈಲೆ ಬೇರೆ ಎಂದು ವಿಷ್ಣು ಹೊಡೆದ ಡೈಲಾಗ್ 'ಸಾಹಸ ಸಿಂಹ' ಚಿತ್ರದಲ್ಲಿ ಬಹಳ ಜನಪ್ರಿಯವಾಗಿತ್ತು. ಈಗದು ಚಿತ್ರದ ಶೀರ್ಷಿಕೆಯಾಗಿದೆ. ಕಳೆದ ಮಂಗಳವಾರವಷ್ಟೆ ಬನಶಂಕರಿಯ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ಮುಗಿಸಿಕೊಂಡಿತ್ತು. ಕೃಷ್ಣ ಡೆವಲಪರ್ ಮಾಲೀಕ ಕೃಷ್ಣಮೂರ್ತಿ ಕ್ಯಾಮೆರಾ ಚಾಲೂ ಮಾಡಿದರೆ ಪಿವಿಎಲ್ ವೆಂಕಟರಾಮಿ ರೆಡ್ಡಿ ಕ್ಲಾಪ್ ಮಾಡಿದ್ದರು.

ದಿನೇಶ್ ಬಾಬು ಅವರು ನಾನೇ ಬೇರೆ...ಚಿತ್ರಕ್ಕೆ ನಿರ್ದೇಶನದ ಜೊತೆಗೆ ಕತೆ, ಚಿತ್ರಕತೆ, ಸಂಭಾಷಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮೈತ್ರೇಯಿ, ಚಿತ್ರಾ ಶೆಣೈ, ಅವಿನಾಶ್, ರಮೇಶ್ ಭಟ್, ಶೋಭಾರಾಜ್, ರಾಜೇಶ್, ನೀನಾಸಂ ಅಶ್ವಥ್ ಮುಂತಾದವರನ್ನು ಒಳಗೊಂಡ ಚಿತ್ರಕ್ಕೆ ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಇದೆ. ಸಾಹಸ ಪಳನಿ ರಾಜ್ ಅವರದ್ದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada