ಮುಂಬೈ ಯುವ ಲಾಯರ್ ಜೊತೆ ನಮಿತಾ ಲವ್ವಿ ಡವ್ವಿ
ಚೆಂಡು ಮಲ್ಲಿಗೆ ನಮಿತಾಗೆ ಹೊಸ ಬಾಯ್‌ಫ್ರೆಂಡ್ ಸಿಕ್ಕಿದ್ದಾನೆ. ಸದ್ಯಕ್ಕೆ ನಮಿತಾ ಕೈಯಲ್ಲಿ ಹೇಳಿಕೊಳ್ಳುವಂತಹ ಪಾತ್ರಗಳು, ಹಾಡುಗಳು, ಡೈಲಾಗ್ಸ್ ಯಾವುದೂ ಇಲ್ಲ. ಹಾಗಾಗಿ ಇತ್ತೀಚೆಗೆ ನಮಿತಾ ಸೈಡ್ ಬಿಜಿನೆಸ್‌ಗೆ ಇಳಿದಿದ್ದನ್ನು ನೀವು ಓದೇ ಇರುತ್ತೀರಿ. ಹೊಸ ಬಾಯ್‌ಫ್ರೆಂಡ್ ಜೊತೆ ನಮಿತಾ ಐಸ್‌ಪೈಸ್ ಆಡುತ್ತಿರುವ ಸುದ್ದಿ ಇದೀಗ ತಾನೆ ಬಂದಿದೆ.
ನಮಿತಾಗೆ ಫೋಟೋಗ್ರಾಫರ್ ಒಬ್ಬರ ಜೊತೆ ಲಿವ್ ಇನ್ ರಿಲೇಷನ್‌ಷಿಪ್ ಇದೆ ಎಂಬ ಸುದ್ದಿ ಇದೆ. ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಸಹ ಜೀವನ ನಡೆಸುತ್ತಿದ್ದಾರೆ. ಆದರೆ ಇಬ್ಬರ ನಡುವಿನ ಸಂಬಂಧ ಈಗ ಮುರಿದುಬಿದ್ದಿದ್ದು, ನಮಿತಾ ಹೊಸ ಬಾಯ್‌ಫ್ರೆಂಡ್‌ನನ್ನು ಹುಡುಕಿಕೊಂಡಿದ್ದಾರೆ ಎನ್ನುತ್ತವೆ ಬಾಲಿವುಡ್ ಮೂಲಗಳು.
ನಮಿತಾಳ ಹೊಸ ಬಾಯ್‌ಫ್ರೆಂಡ್ ವೃತ್ತಿಯಲ್ಲಿ ಲಾಯರ್. ಮುಂಬೈ ಮೂಲದ ಈತ ನಮಿತಾಗೆ ಫ್ಲಾಟ್ ಒಂದನ್ನು ಕೊಳ್ಳಲು ಸಹಕರಿಸಿದ್ದ. ರು.10 ಕೋಟಿ ಬೆಲೆ ಬಾಳುವ ಫ್ಲಾಟನ್ನು ನಮಿತಾಗೆ ಕೊಡಿಸಿದ್ದು ಈಗ ಇವರಿಬ್ಬರ ನಡುವೆ "ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ ಇನ್ನೇನು ಕೆಲಸ ನಂಗೂ ನಿಂಗೂ..." ಎಂಬ ಹಾಡು ಶುರುವಾಗಿದೆಯಂತೆ. (ಏಜೆನ್ಸೀಸ್)


Click it and Unblock the Notifications











