ಮುರಿದುಬಿದ್ದ ರು 16 ಕೋಟಿ ಅಣ್ಣಾಬಾಂಡ್ ಡೀಲ್

ಅಣ್ಣಾಬಾಂಡ್ ಆಡಿಯೋ ಬಿಡುಗಡೆ ವೇಳೆ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮಾತು ಕೇಳಿದ ಎಲ್ಲರಿಗೂ ಮುಂದೆ ನಡೆಯಬಹುದಾದ ಘಟನೆಯ ಸ್ಟಷ್ಟ ಚಿತ್ರಣ ದೊರೆತಿತ್ತು. ಕಾರಣ, 'ಅಣ್ಣಾಬಾಂಡ್' ಚಿತ್ರವನ್ನು ಪ್ರಸಾದ್ ಜೊತೆ ಪಾಲುದಾರಿಕೆಯಲ್ಲಿ ತಾವು ಬಿಡುಗಡೆ ಮಾಡುವುದಾಗಿ ಅಂದು ಅವರು ಮಾಧ್ಯಮದ ಮುಂದೆ ಘೋಷಿಸಿದ್ದರು. ಆಗಲೇ ಪ್ರಸಾದ್ ಕಂಗಾಲಾಗಿದ್ದರು.
ಇತ್ತೀಚಿಗೆ ಬೇಕಾಬಿಟ್ಟಿ ರೇಟು ಕೊಟ್ಟು ಕನ್ನಡ ಚಿತ್ರಗಳನ್ನು ಖರೀದಿ ಮಾಡಿ ಬಿಡುಗಡೆ ಮಾಡುತ್ತಿರುವ ಪ್ರಸಾದ್ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿತ್ತು. ಕಾರಣ, ಬರೋಬ್ಬರಿ 16 ಕೋಟಿ ಡೀಲ್. ಇದುವರೆಗೆ ಯಾವ ಕನ್ನಡ ಚಿತ್ರವೂ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರಲಿಲ್ಲ. ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಿದ ನಂತರ 'ಅಣ್ಣಾ ಬಾಂಡ್' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಾ ಬಂತು. ಮುಂದಿನ ಪುಟ ನೋಡಿ...
English summary
Power Star Puneeth Rajkumar Movie Annabond's Rs. 16 Crore Deal washed-out. Distributor Prasad Out from the Deal now.


Click it and Unblock the Notifications