ಆರಕ್ಷಣ್ ಎಫೆಕ್ಟ್; ಅಮಿತಾಬ್‌ ಮನೆಗೆ ಬಿಗಿ ಭದ್ರತೆ

By Rajendra

ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮುಂಬೈನ ಎರಡು ಬಂಗಲೆಗಳಿಗೆ ಗುರುವಾರ (ಆ.11) ಮುಂಬೈ ಪೊಲೀಸರು ಇದ್ದಕ್ಕಿದ್ದಂತೆ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಅಮಿತಾಬ್ ಅಭಿನಯ 'ಆರಕ್ಷಣ್' ಚಿತ್ರಕ್ಕೆ ವಿವಾದ ಎದುರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಜೀವ ಬೆದರಿಕೆ ಇದೆ. ಹಾಗಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪ್ರಸ್ತುತ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗದಲ್ಲಿನ ಮೀಸಲಾತಿಗೆ ಸಂಬಂಧಿಸಿದಂತೆ ಚಿತ್ರದಲ್ಲಿ ಅನೇಕ ಅಂಶಗಳಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರ ಕರ್ನಾಟಕ ಸೇರಿದಂತೆ ದೇಶದಾದ್ಯಂತೆ ಆಗಸ್ಟ್ 12ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅಮಿತಾಬ್ ಅವರ ಬಂಗಲೆಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಮುಂಬೈನ ಜುಹು ಪ್ರದೇಶದಲ್ಲಿರುವ ಅಮಿತಾಬ್‌ರ ಜಲ್ಸಾ ಹಾಗೂ ಪ್ರತೀಕ್ಷಾ ಬಂಗಲೆಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಚಿತ್ರಕ್ಕೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಈಗ ಚಿತ್ರದ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಆಗಸ್ಟ್ 12ರಂದು ಚಿತ್ರ ತೆರೆಕಾಣುತ್ತಿದೆ.

ಚಿತ್ರದಲ್ಲಿನ ಕೆಲವೊಂದು ಡೈಲಾಗ್‌ಗಳು ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂಬ ಉದ್ದೇಶದಿಂದ 'ಆರಕ್ಷಣ್' ಚಿತ್ರವನ್ನು ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಸೈಫ್ ಆಲಿ ಖಾನ್ ಹಾಗೂ ದೀಪಿಕಾ ಪಡುಕೋಣೆ ತಾರಾಗಣದ ಚಿತ್ರವನ್ನು ಪ್ರಕಾಶ್ ಝಾ ನಿರ್ಮಿಸಿದ್ದಾರೆ.

ಕರ್ನಾಟಕದಲ್ಲಿ ಆರಕ್ಷಣ್ ಚಿತ್ರಕ್ಕೆ ಸಾಸಿವೆ ಕಾಳಿನಷ್ಟು ವಿರೋಧ ವ್ಯಕ್ತವಾಗಿಲ್ಲ. ಹಾಗಾಗಿ ಈ ಚಿತ್ರ ನಮ್ಮ ರಾಜ್ಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗಿಲ್ಲ. ಬೆಂಗಳೂರಿನ ಊರ್ವಶಿ, ಐನಾಕ್ಸ್, ಫನ್ ಸಿನಿಮಾಸ್, ಕಾವೇರಿ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

'ಆರಕ್ಷಣ್' ಚಿತ್ರದಲ್ಲಿ ವಿವಾದಾತ್ಮಕ ಅಂಶಗಳಿದ್ದು, ಕಾನೂನು ಸುವವ್ಯಸ್ಥೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಮಾಯಾವತಿ ಸರ್ಕಾರ ಚಿತ್ರದ ಮೇಲೆ ಎರಡು ತಿಂಗಳುಗಳ ಕಾಲ ಉತ್ತರ ಪ್ರದೇಶದಲ್ಲಿ ನಿಷೇಧ ಹೇರಿದೆ. (ಏಜೆನ್ಸೀಸ್)

More from Filmibeat

English summary
Security has been beefed up at around two bungalows of Amitabh Bachchan on Aug 11 over the controversy on his upcoming movie - Aarakshan. It seems that Big B has been confronted with security threat after the controversy over his upcoming movie 'Aarakshan' has been intensified just ahead of its scheduled release date which is Friday, Aug 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X