»   » ‘ದರಿದ್ರಲಕ್ಷ್ಮಿಯರು’ ಹೆಸರು ಬದಲಿಸಲು ವಾರದ ಗಡುವು

‘ದರಿದ್ರಲಕ್ಷ್ಮಿಯರು’ ಹೆಸರು ಬದಲಿಸಲು ವಾರದ ಗಡುವು

Subscribe to Filmibeat Kannada

‘ದರಿದ್ರ ಲಕ್ಷ್ಮಿಯರು’ ಧಾರಾವಾಹಿಯ ಹೆಸರನ್ನು ಇನ್ನೊಂದು ವಾರದಲ್ಲಿ ಬದಲಿಸದಿದ್ದಲ್ಲಿ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ ಉದಯ ಟೀವಿ ಕಚೇರಿಯ ಮುಂದೆ ಭಾರೀ ಪ್ರತಿಭಟನೆ ನಡೆಸುವುದಾಗಿ ವಿಶ್ವ ಕನ್ನಡಿಗರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ.ಎಸ್‌.ಪ್ರಕಾಶ್‌ ಎಚ್ಚರಿಕೆ ನೀಡಿದ್ದಾರೆ.

ಮಾತೃ ಸ್ವರೂಪಿಯಾದ ಲಕ್ಷ್ಮಿಯನ್ನು ದರಿದ್ರ ಎನ್ನುವುದನ್ನು ಯಾರೂ ಒಪ್ಪುವುದಿಲ್ಲ . ಲಕ್ಷ್ಮಿ ಎನ್ನುವ ಪದದ ಪವಿತ್ರತೆಯನ್ನು ನಿರ್ದೇಶಕ ಫಣಿ ರಾಮಚಂದ್ರ ತಿರುಚುತ್ತಿದ್ದಾರೆ. ಫಣಿ ರಾಮಚಂದ್ರ ಅವರ ಈ ನಡವಳಿಕೆಯನ್ನು ಸ್ವಾಭಿಮಾನಿ ಕನ್ನಡಿಗರು ಇಷ್ಟಪಡುವುದಿಲ್ಲ ಎಂದು ಪ್ರಕಾಶ್‌ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರೇಕ್ಷಕರ ಆಗ್ರಹಕ್ಕೆ ಸ್ಪಂದಿಸಿ ಇನ್ನೊಂದು ವಾರದಲ್ಲಿ ‘ದರಿದ್ರ ಲಕ್ಷ್ಮಿಯರು’ ಎನ್ನುವ ಟೈಟಲ್‌ ಬದಲಿಸಬೇಕು. ಬದಲಿಸದೇ ಇದ್ದಲ್ಲಿ ವಿಶ್ವ ಕನ್ನಡಿಗರ ವೇದಿಕೆ ಉದಯ ಟೀವಿ ಕಚೇರಿಯ ಎದುರು ಬೃಹತ್‌ ಪ್ರತಿಭಟನೆ ನಡೆಸುತ್ತದೆ.

ಪ್ರೇಕ್ಷಕರು ಬಯಸಿದಲ್ಲಿ ಧಾರಾವಾಹಿಯ ಟೈಟಲ್‌ ಬದಲಿಸಲಾಗುವುದು ಎಂದು ಈ ಮುನ್ನ ಸಂದರ್ಶನವೊಂದರಲ್ಲಿ ಫಣಿ ರಾಮಚಂದ್ರ ತಿಳಿಸಿದ್ದರು. ಭಾಗ್ಯ ಲಕ್ಷ್ಮಿ ಅಥವಾ ಪುಣ್ಯಲಕ್ಷ್ಮಿ ಎಂದು ಹೆಸರು ಬದಲಿಸುವುದು ಒಳ್ಳೆಯದು ಎಂದು ಪ್ರಕಾಶ್‌ ಸಲಹೆ ನೀಡಿದ್ದಾರೆ. ಉದಯ ಟೀವಿ ತಮ್ಮ ಮನವಿಗೆ ಸ್ಪಂದಿಸುತ್ತದೆನ್ನುವ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ನಾಯಕ ನಟ ವಿಷ್ಣು ವರ್ಧನ್‌ ಅವರು ದರಿದ್ರ ಲಕ್ಷ್ಮಿಯರು ಧಾರಾವಾಹಿಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಧಾರಾವಾಹಿಯ ನಿರ್ದೇಶಕ ಫಣಿ ರಾಮಚಂದ್ರ ಅವರಿಗೆ ಪೊರಕೆಯಲ್ಲಿ ಹೊಡೆಯಿರಿ ಎಂದು ಕರೆ ನೀಡಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಜಯಮಾಲಿನಿ ಜತೆ ಕುಣಿದ ವಿಷ್ಣುಗೆ ರೋಷ ಯಾಕೋ?
ವಿಷ್ಣು ಹೇಳಿದ್ದು ಸರಿ, ಇಲ್ಲಾರೀ ಅದು ಚೂರು ಅತಿ !
ಫಣಿಗೆ ಹೆಂಗಸರೆಲ್ಲ ಪೊರಕೇಲಿ ಹೊಡೀಬೇಕು- ವಿಷ್ಣುವರ್ಧನ್‌
ಫಣಿ ರಾಮಚಂದ್ರ ಮೇಲೆ ಹೆಂಗಸರ ಫಣಿ !

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada