»   » ಪಾರ್ವತಮ್ಮ ಇಶಾರೆ- ರಾಜ್ಯದಲ್ಲೀಗ ಯಾವ ಚಿತ್ರವೂ ಓಡುತ್ತಿಲ್ಲ

ಪಾರ್ವತಮ್ಮ ಇಶಾರೆ- ರಾಜ್ಯದಲ್ಲೀಗ ಯಾವ ಚಿತ್ರವೂ ಓಡುತ್ತಿಲ್ಲ

Posted By:
Subscribe to Filmibeat Kannada

ಸೇವಾ ಶುಲ್ಕದಲ್ಲಿ ಅರ್ಧದಷ್ಟು ಹಣವನ್ನು ನಿರ್ಮಾಪಕರಿಗೆ ಕೊಡುವುದಾಗಿ ಒಪ್ಪಿ, ಆಮೇಲೆ ಪ್ರದರ್ಶಕರು ಆಡಿದ ಮಾತಿಗೆ ತಪ್ಪಿರುವ ಕಾರಣ ಇನ್ನು ನಾಲ್ಕು ದಿನ ಕರ್ನಾಟಕದ ಚಿತ್ರಮಂದಿರಗಳಲ್ಲಿ ಯಾವ ಚಿತ್ರವೂ ತೆರೆಕಾಣದು. ಇದು ನಿರ್ಮಾಪಕರ ಸಂಘ ಹೂಡಿರುವ ಬಂದ್‌.

ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಗುರುವಾರ (ಜು.10) ಸೇವಾ ಶುಲ್ಕ ಹಂಚಿಕೆ ವಿಷಯದಲ್ಲಿ ಒಂದು ಇತ್ಯರ್ಥಕ್ಕೆ ಬರಲು ಸಭೆ ನಡೆಯಿತು. ಆದರೆ ನಿರ್ಮಾಪಕರ ಪಟ್ಟಿಗೆ ಪ್ರದರ್ಶಕರು ಜಗ್ಗಲಿಲ್ಲ. ಸಭೆಯ ನಡುವೆಯೇ ತಮ್ಮ ನಿರ್ಮಾಣದ ‘ಅಭಿ’ ಚಿತ್ರದ ಪ್ರದರ್ಶನವನ್ನು ಶುಕ್ರವಾರದಿಂದಲೇ ನಿಲ್ಲಿಸುತ್ತೇನೆ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಗುಡುಗಿದರು. ‘ಶ್ರೀರಾಮ್‌’ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಕೂಡ ಪಾರ್ವತಮ್ಮನವರಿಗೆ ಬೆಂಬಲ ಸೂಚಿಸಿದರು. ಇತರೆ ಚಿತ್ರಗಳ ವಿತರಕರೂ ನಿರ್ಮಾಪಕರ ನಿರ್ಧಾರಕ್ಕೆ ಬೆಂಬಲವಾಗಿ ನಿಂತರು.

ಈ ಹಿಂದೆ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ, ನಿರ್ಮಾಪಕರಿಗೆ ಸೇವಾ ಶುಲ್ಕದ ಅರ್ಧದಷ್ಟು ಹಣವನ್ನು ಕೊಡಬೇಕೆಂದು ಪ್ರದರ್ಶಕರಿಗೆ ಕೇಳಿತ್ತು. ಪ್ರದರ್ಶಕರೂ ಇದಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಆಮೇಲೆ ಮಾತು ಮುರಿದ ಕಾರಣ ನಿರ್ಮಾಪಕರು ಕುಪಿತರಾಗಿದ್ದಾರೆ.

ರಾಕ್‌ಲೈನ್‌ ವೆಂಕಟೇಶ್‌, ರಾಮು, ಆರ್‌.ಎಸ್‌.ಗೌಡ, ಕೆ.ಮಂಜು, ಸಾರಾ ಗೋವಿಂದು, ಶೈಲೇಂದ್ರ, ರಾಜೇಂದ್ರಸಿಂಗ್‌ ಬಾಬು, ಜೋಸೈಮನ್‌, ಗಣೇಶ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಸೋಮವಾರದೊಳಗೆ ಚಿತ್ರ ಪ್ರದರ್ಶನ ನಿಲ್ಲಿಸಿ ನಡೆಸುತ್ತಿರುವ ಬಂದ್‌ಗೂ ಜಗ್ಗದಿದ್ದರೆ, ಅವತ್ತಿನಿಂದ ಚಿತ್ರೀಕರಣವನ್ನೂ ಸ್ಥಗಿತಗೊಳಿಸಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಪಾರ್ವತಮ್ಮ ರಾಜ್‌ಕುಮಾರ್‌ ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada