»   » ಶುಕ್ರವಾರದಿಂದ ಹೊಸ ಸಿನಿಮಾ ಬಿಡುಗಡೆ

ಶುಕ್ರವಾರದಿಂದ ಹೊಸ ಸಿನಿಮಾ ಬಿಡುಗಡೆ

Subscribe to Filmibeat Kannada

ನಿರ್ಮಾಪಕರ ಹಾಗೂ ಪ್ರದರ್ಶಕರ ನಡುವಿನ ಟಂಗಾಟುಂಗಿಯಿಂದಾಗಿ ಕಳೆದೆರಡು ವಾರಗಳಿಂದ ಸ್ಥಗಿತಗೊಂಡಿದ್ದ ಹೊಸ ಚಿತ್ರಗಳ ಬಿಡುಗಡೆ ಸಮಸ್ಯೆ ಬಹುತೇಕ ಬಗೆಹರಿದಿರುವುದಾಗಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ಕುಮಾರ್‌ ಪಾಟೀಲ್‌ ಚಿತ್ರಲೋಕ ಡಾಟ್‌ ಕಾಂಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಬೆಂಗಳೂರು ಡಿಸಿ ಅಶ್ವಥ್‌ ಜೊತೆ ಸೋಮವಾರ (ಆ. 11) ಸಮಸ್ಯೆ ಕುರಿತು ಬಸಂತ್‌ಕುಮಾರ್‌ ಪಾಟೀಲ್‌ ಚರ್ಚಿಸಿದರು. ಡಿಸಿ ಕೊಟ್ಟಿರುವ ಭರವಸೆಯಂತೆ ಸ್ವಾತಂತ್ರ್ಯ ದಿನಾಚರಣೆಯ ದಿನದಿಂದ ಬಿಡುಗಡೆಯಾಗದೆ ಡಬ್ಬದಲೇ ಇರುವ ಚಿತ್ರಗಳಿಗೂ ಸ್ವಾತಂತ್ರ್ಯ ಸಿಗುತ್ತದೆ ಎಂದು ಪಾಟೀಲರು ಹೇಳಿದರು.

ಕೆಲವು ನಿರ್ಮಾಪಕರು ಪಟ್ಟು ಬಿಡದ ಕಾರಣ ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳ ಪ್ರದರ್ಶನ ನಡೆದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ರಮೇಶ್‌ ಹಾಗೂ ಚಿತ್ರೋದ್ಯಮದ ಕೆಲವು ಹಿರಿಯರು ನಿರ್ಮಾಪಕರು ಮತ್ತು ಪ್ರದರ್ಶಕರ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

ಇದನ್ನೂ ಓದಿ-
ನಿರ್ಮಾಪಕರ ಸಂಘ ಹೋಳು, ಹುಟ್ಟಿತು ದೇವೇಗೌಡ ಪುತ್ರನ ‘ವೇದಿಕೆ’


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada