»   » ಸಿನಿಮಾ ಸಬ್ಸಿಡಿ ಕಮಿಟಿಯ ಲಂಚಾವತಾರ

ಸಿನಿಮಾ ಸಬ್ಸಿಡಿ ಕಮಿಟಿಯ ಲಂಚಾವತಾರ

Posted By:
Subscribe to Filmibeat Kannada

ಸಬ್ಸಿಡಿ ಕಮಿಟಿ ಇಪ್ಪತ್ತು ಕನ್ನಡ ಚಿತ್ರಗಳಿಗೆ ಸರ್ಕಾರದ 10 ಲಕ್ಷ ರುಪಾಯಿ ಸಹಾಯ ಧನ ಕೊಡುವಂತೆ ಮಾಡಿರುವ ಶಿಫಾರಸ್ಸಿನಲ್ಲಿ ಟೇಬಲ್‌ ಕೆಳಗಿನ ವ್ಯವಹಾರ ನಡೆದಿದೆ ಎಂದು ಜಗ್ಗೇಶ್‌ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣೇಶನ ಮುಂದೆ ಹೇಳಿದರು.

ಇತ್ತೀಚೆಗೆ ಜನಾರ್ದನ ಹೊಟೇಲಿನಲ್ಲಿ ಒಬ್ಬಾತ ಜಗ್ಗೇಶ್‌ ಅವರನ್ನು ಭೇಟಿ ಮಾಡಿ, ಸಬ್ಸಿಡಿ ಕಮಿಟಿಯ ಕಾರ್ಯವೈಖರಿಯನ್ನು ವರ್ಣಿಸಿದ್ದಾನೆ. ಆ ವ್ಯಕ್ತಿ ಕೂಡ ಸಬ್ಸಿಡಿ ಕೊಡಿಸುವ ಒಬ್ಬ ಏಜೆಂಟು. ಇಂತಹ ಏಜೆಂಟರ ದೊಡ್ಡ ಪಟಾಲಮ್ಮೇ ಇರುವುದನ್ನು ಜಗ್ಗೇಶ್‌ ಆತನಿಂದ ಬಾಯಿ ಬಿಡಿಸಿದ್ದಾರೆ. ಒಂದು ಚಿತ್ರಕ್ಕೆ 2 ಲಕ್ಷ ರುಪಾಯಿ ಲಂಚ ಕೊಟ್ಟರೆ 10 ಲಕ್ಷ ರುಪಾಯಿ ಸಹಾಯ ಧನ ಸುಲಭವಾಗಿ ಸಿಕ್ಕುತ್ತದೆ ಅನ್ನೋದು ಗೊತ್ತಾದದ್ದೇ ತಡ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಾರ್ಯಕರ್ತರೂ ಆಗಿರುವ ಜಗ್ಗೇಶ್‌ ನೇರವಾಗಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ. ಸಬ್ಸಿಡಿ ಮಂಜೂರು ಮಾಡಿರುವ ಪಟ್ಟಿಯನ್ನು ತಡೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಜಗ್ಗೇಶ್‌ ಪ್ರಕಾರ ಸಹಾಯ ಧನ ಮಂಜೂರಾಗಿರುವ ಚಿತ್ರಗಳ ಪೈಕಿ ಕನಿಷ್ಠ 6 ಚಿತ್ರಗಳು ವಶೀಲಿಬಾಜಿ ನಡೆಸಿವೆ !

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada