»   » ಅಭಿನಯ್‌- ಕಾವೇರಿ ಚಿತ್ರಮಂದಿರಗಳ ಮೇಲೆ ‘ಧೂಂ’ ಧಾಂ ದಾಳಿ !

ಅಭಿನಯ್‌- ಕಾವೇರಿ ಚಿತ್ರಮಂದಿರಗಳ ಮೇಲೆ ‘ಧೂಂ’ ಧಾಂ ದಾಳಿ !

Subscribe to Filmibeat Kannada

ಬೆಂಗಳೂರು : ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ನಗರದ ಕಾವೇರಿ, ಅಭಿನಯ್‌ ಚಿತ್ರಮಂದಿರಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರ ದಾಳಿ ಮಾಡಿದೆ. ಚಿತ್ರಮಂದಿರದ ಕಿಟಕಿ, ಬಾಗಿಲುಗಳಿಗೆ ಕಲ್ಲು ಹೊಡೆದು, ಪರದೆಯನ್ನು ಹರಿದು ಪ್ರತಿಭಟಿಸಿದ್ದಾರೆ.

ಚಿತ್ರಮಂದಿರಕ್ಕೆ ಪೋಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರೂ ಸಹಾ, ಪ್ರೇಕ್ಷಕರಂತೆ ಒಳ ಸೇರಿದ್ದ ವೇದಿಕೆಯ ಸದಸ್ಯರು ಚಿತ್ರ ಆರಂಭವಾಗುತ್ತಿದ್ದಂತೆ ಕನ್ನಡಪರ ಘೋಷಣೆಗಳ ಕೂಗುತ್ತಾ ಗದ್ದಲ ಆರಂಭಿಸಿದರು. ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಗೆ ಓಡಿದರು. ಪ್ರತಿಭಟನೆ ಹಿಂಸಾರೂಪ ತಾಳಿತು. ಗಲಭೆಯ ಹಿನ್ನೆಲೆ ಪೋಲೀಸರು 40 ಜನರನ್ನು ಬಂಧಿಸಿದ್ದಾರೆ

ಚಿತ್ರಮಂದಿರದ ಸಿಬ್ಬಂದಿಯ ಹಲ್ಲೆಗೆ ತುತ್ತಾಗಿ ವೇದಿಕೆಯ ಸದಸ್ಯರಿಗೆ ತೀವ್ರ ಗಾಯಗಳಾಗಿದ್ದು, ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ನಾರಾಯಣ ಗೌಡ ತಿಳಿಸಿದ್ದಾರೆ.

ಪರಭಾಷಾ ಚಿತ್ರಗಳ ವಿವಾದ ದಿನೇ ದಿನೇ ಹಿಂಸಾರೂಪಕ್ಕೆ ತಿರುಗುತ್ತಿದೆ. ಏಳು ವಾರಗಳ ನಿರ್ಬಂಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಕಾರಣ ಸರಕಾರ ಕೈಕಟ್ಟಿ ಕುಳಿತಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada