»   » ಅಪರಿಚಿತರಿಂದ ಬೆಂಗಳೂರಲ್ಲಿ ‘ಧೂಮ್‌’ ಹಿಂದಿಚಿತ್ರದ ರೀಲ್‌ ಕಳುವು

ಅಪರಿಚಿತರಿಂದ ಬೆಂಗಳೂರಲ್ಲಿ ‘ಧೂಮ್‌’ ಹಿಂದಿಚಿತ್ರದ ರೀಲ್‌ ಕಳುವು

Subscribe to Filmibeat Kannada

ಬೆಂಗಳೂರು : ಒಂದು ಚಿತ್ರಮಂದಿರದಿಂದ ಇನ್ನೊಂದು ಚಿತ್ರಮಂದಿರಕ್ಕೆ ‘ಧೂಮ್‌’ ಹಿಂದಿಚಿತ್ರದ ರೀಲನ್ನು ಕೊಂಡೊಯ್ಯುತ್ತಿದ್ದವರ ಮೇಲೆ ದಾಳಿ ನಡೆಸಿರುವ ಅಪರಿಚಿತರು, ಚಿತ್ರದ ರೀಲ್‌ ಕಿತ್ತುಕೊಂಡು ಹೋಗಿದ್ದಾರೆ.

ಅಕ್ಟೋಬರ್‌ 10ರ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು , ‘ಧೂಮ್‌’ ಚಿತ್ರದ ರೀಲನ್ನು ಊರ್ವಶಿ ಚಿತ್ರಮಂದಿರದಿಂದ ಸ್ವಾಗತ್‌ ಚಿತ್ರಮಂದಿರಕ್ಕೆ ಕೊಂಡೊಯ್ಯಲಾಗುತ್ತಿತ್ತು . ಚಿತ್ರದ ರೀಲ್‌ ಸಾಗಿಸುತ್ತಿದ್ದ ಚಿತ್ರಮಂದಿರದ ಇಬ್ಬರು ನೌಕರರ ಮೇಲೆ ಮೋಟರ್‌ಸೈಕಲ್‌ನಲ್ಲಿ ಧಾವಿಸಿದ ಅಪರಿಚಿತರು ದಾಳಿ ನಡೆಸಿ ರೀಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ.

‘ಧೂಮ್‌’ ಚಿತ್ರದ ರೀಲ್‌ ಕಳುವಿನ ಬಗ್ಗೆ ಕಲಾಸಿಪಾಳ್ಯಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಊರ್ವಶಿ ಹಾಗೂ ಸ್ವಾಗತ್‌ ಚಿತ್ರಮಂದಿರಗಳು ಸ್ವಲ್ಪ ಸಮಯದ ಅಂತರದಲ್ಲಿ ರೀಲ್‌ಗಳನ್ನು ಬದಲಾಯಿಸಿಕೊಂಡು ಒಂದೇ ಚಿತ್ರ ಪ್ರದರ್ಶಿಸುವುದು ರೂಢಿ.

ರಾಜ್ಯದಲ್ಲಿ ಕನ್ನಡೇತರ ಚಿತ್ರಗಳು ತೆರೆಕಂಡ ಏಳುವಾರಗಳ ನಂತರ ಬಿಡುಗಡೆಯಾಗಬೇಕು ಎನ್ನುವ ನಿಯಮ ಉಲ್ಲಂಘಿಸಿ ಕಳೆದ ್ಫಶುಕ್ರವಾರ (ಅ.8) ಬಿಡುಗಡೆಯಾಗಿರುವ ್ಫಎರಡು ಚಿತ್ರಗಳಲ್ಲಿ ‘ಧೂಮ್‌’ ಒಂದಾಗಿದೆ. ನಿಯಮ ಉಲ್ಲಂಘಿಸಿರುವ ಇನ್ನೊಂದು ಚಿತ್ರ, ಐಶ್ವರ್ಯಾ ರೈ ಅಭಿನಯದ ಬ್ರೆೃಡ್‌ ಅಂಡ್‌ ಪ್ರಿಜುಡೀಸ್‌.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada