ರಾಹುಲ್‌ನನ್ನು ಮದ್ವೆಯಾಗ್ತಾಳಂತೆ ಬಾಬ್ಬಿ ಡಾರ್ಲಿಂಗ್
ಈ ಚಿತ್ರ ನೋಡಿದರೆ ನಿಮಗೂ ಒಂದು ಸಣ್ಣ ಅನುಮಾನ ಹಾಗೆ ಸುಮ್ಮನೆ ಬರಬಹುದು. ಚಿತ್ರದಲ್ಲಿರುವುದು ಗಂಡೋ ಅಥವಾ ಹೆಣ್ಣೋ? ನಿಮ್ಮ ಊಹೆ ಫಿಫ್ಟಿ ಪರ್ಸೆಂಟ್ ಕರೆಕ್ಟ್. ಇನ್ನು ಫಿಫ್ಟಿ ಪರ್ಸೆಂಟ್ ರಾಂಗ್. ಯಾಕೆಂದರೆ ಈಕೆ ಮೊದಲು ಹುಡುಗನಾಗಿದ್ದನು ಈಗ ಹುಡುಗಿಯಾಗಿದ್ದಾಳೆ!
ಈಕೆಗೆ ನಿಸರ್ಗ ಕರುಣಿಸಿದ್ದು ಪುರುಷ ಜನ್ಮ. ಹೆಸರು ಪಂಕಜ್ ಶರ್ಮ. ಬಳಿಕ ಏನಾಯಿತೋ ಏನೋ ಗೊತ್ತಿಲ್ಲ. ಲಿಂಗ ಬದಲಾವಣೆ ಮಾಡಿಸಿಕೊಂಡು ಹೆಣ್ಣಾಗಿ ಮರುಜನ್ಮ ಪಡೆದ. ಹೆಸರನ್ನು ಬಾಬ್ಬಿ ಡಾರ್ಲಿಂಗ್ ಎಂದು ಬದಲಾಯಿಸಿಕೊಂಡ. ಈಗ ಆಹಾ ನನ್ನ ಮದ್ವೆಯಂತೆ ಎಂದು ಕುಣಿಯುತ್ತಿದ್ದಾಳೆ.
ಈತ ಹೆಣ್ಣಾಗಿ ಪರಿವರ್ತನೆಯಾಗುತ್ತಿದ್ದಂತೆ ಮೊದಲು ಕಣ್ಣು ಬಿದ್ದದ್ದು ನಮ್ಮ ಮುನಾಫ್ ಪಟೇಲ್ ಮೇಲೆ. ಮುನಾಫ್‌ಗೂ ನನಗೂ ಏನೇನೋ ನಡೆದಿದೆ ಎಂದು ಹೇಳಿಕೊಂಡಿದ್ದಳು. ಈಗ ಇದ್ದಕ್ಕಿದ್ದಂತೆ ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಮೇಲೆ ಈಕೆಯ ಕಣ್ಣು ಬಿದ್ದಿದೆ.
"ನಾನು ರಾಹುಲ್ ಗಾಂಧಿಯ ದೊಡ್ಡ ಅಭಿಮಾನಿ. ಮುಜೆ ಓ ಬಹುತ್ ಪಸಂದ್ ಹೈ. ಆತನನ್ನು ಮದುವೆಯಾಗುವುದೇ ನನ್ನ ಕನಸು. ಮುಜೆ ಉನ್ಸೆ ಏಕ್ ಬಾರ್ ಮಿಲ್ನಾ ಹೈ. ನಾನು ಎಷ್ಟು ಪ್ರೀತಿಸುತ್ತೀನಿ ಎಂದು ಬಿಡಿಸಿ ಹೇಳುತ್ತೇನೆ" ಎಂದಿದ್ದಾಳೆ(ನೆ) ಬಾಬ್ಬಿ ಡಾರ್ಲಿಂಗ್. ಇದಕ್ಕೆ ರಾಹುಲ್ ಏನನ್ನುತ್ತಾರೋ ಏನೋ. (ಏಜೆನ್ಸೀಸ್)


Click it and Unblock the Notifications











