ಫಿಲಂ ಚೇಂಬರ್ ಲಕ್ಷ್ಮಣ ರೇಖೆ ದಾಟಿದ ಡೆಡ್ಲಿ

By Rajendra

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೀಚಿದ ಲಕ್ಷ್ಮಣರೇಖೆಯನ್ನು 'ಡೆಡ್ಲಿ 2' ದಾಟಿದೆ. ಮಲ್ಟಿಫೆಕ್ಸ್ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂದು ಫಿಲಂ ಚೇಂಬರ್ ಸುತ್ತೋಲೆ ಹೊರಡಿಸಿತ್ತು. 'ಡೆಡ್ಲಿ 2' ಚಿತ್ರ ನಿರ್ಮಾಪಕ ಮಂಜುನಾಥ ಗೌಡ ಈ ನಿಯಮವನ್ನು ಮುರಿದು ಚಿತ್ರವನ್ನು ಮಲ್ಟಿಫೆಕ್ಸ್ ಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಡೆಡ್ಲಿ 2 ಚಿತ್ರರಿಲಯನ್ಸ್ ಬಿಗ್ ಸಿನಿಮಾಸ್ ಮೂಲಕ ಮಲ್ಟಿಫೆಕ್ಸ್ ಗಳಲ್ಲಿ ಬಿಡುಗಡೆಯಾತ್ತಿದೆ. ಮೊದಲೆ ರಿಲಯನ್ಸ್ ಬಿಗ್ ಸಿನಿಮಾಸ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಷ್ಟಕ್ಕಷ್ಟೆ. ವಿಷಯ ಹೀಗಿದ್ದರೂ 'ಡೆಡ್ಲಿ 2' ಚಿತ್ರವನ್ನು ಬಿಗ್ ಸಿನಿಮಾಸ್ ಬಿಡುಗಡೆ ಮಾಡಿ ಮತ್ತೊಮ್ಮೆ ಫಿಲಂ ಚೇಂಬರ್ ಕೆಂಗಣ್ಣಿಗೆ ಗುರಿಯಾಗಿದೆ.

ಫಿಲಂ ಚೇಂಬರ್ ಕಟ್ಟಾಜ್ಞೆ ಕಾರಣ ಕಳೆದ ವಾರ 'ಮತ್ತೆ ಮುಂಗಾರು' ಹಾಗೂ 'ಚೆಲುವೆಯೇ ನಿನ್ನೇ ನೋಡಲು' ಚಿತ್ರಗಳು ಬಿಗ್ ಸಿನಿಮಾಸ್ ಮೂಲಕ ಬಿಡುಗಡೆ ಆಗಲಿಲ್ಲ. ಈಗ 'ಡೆಡ್ಲಿ 2' ಚಿತ್ರ ಫಿಲಂ ಚೇಂಬರ್ ಗೀಚಿದ್ದ ಲಕ್ಷ್ಮಣರೇಖೆಯನ್ನು ದಾಟಿದೆ. ಆದರೆ ಈ ಬಗ್ಗೆ ಫಿಲಂ ಚೇಂಬರ್ ಇನ್ನೂ ಮೌನ ಮುರಿದಿಲ್ಲ. ಚಿತ್ರ ಆಗಸ್ಟ್ 13ರಂದು ತೆರೆಗೆ ಅಪ್ಪಳಿಸುತ್ತಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ಮೈಸೂರಿನಲ್ಲಿ ಬಿಗ್ ಸಿನಿಮಾಸ್ ಎರಡು ಮಲ್ಟಿಫೆಕ್ಸ್ ಗಳನ್ನು ಹೊಂದಿದೆ. ಈ ಹಿಂದೆ ಕೆಎಫ್ ಸಿಸಿ ನಿಯಮಗಳನ್ನು ಗಾಳಿಗೆ ತೂರಿ ಬಿಗ್ ಸಿನಿಮಾಸ್ ಹಿಂದಿಯ 'ಕೈಟ್ಸ್' ಮತ್ತು 'ರಾವಣ್' ಚಿತ್ರಗಳನ್ನು 24 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X