For Quick Alerts
  ALLOW NOTIFICATIONS  
  For Daily Alerts

  ಚಿರು ತಮ್ಮಡು ಫಾರಿನ್ ಪಿಲ್ಲ ಜೊತೆ ಡಿಂಗ್ ಡಾಂಗ್

  By Mahesh
  |

  ತೆಲುಗಿನ ಮೆಗಾ ಸ್ಟಾರ್ ಅಭಿಮಾನಿಗಳ ಪಾಲಿಗೆ ದೇವರೇ ಆದರೂ ಮನೆಯಲ್ಲಿ ಮಾತ್ರ ಸಂಸಾರ ನಿಭಾಯಿಸಲು ಅಸಮರ್ಥನಾಗಿರುವುದು ಜಗಜ್ಜಾಹೀರಾಗಿದೆ. ಪುತ್ರಿ ಶ್ರೀಜಾ ಫ್ಯಾಮಿಲಿ ವಾರ್ ನಂತರ ಸುಧಾರಿಸಿಕೊಂಡಿದ್ದ ಚಿರು, ಮ್ಲಿಲ್ಪುತ್ರ ರಾಮ್ ಚರಣ್ ತೇಜ ಮದುವೆ ಸಂಭ್ರಮಕ್ಕೆ ತಯಾರಾಗುತ್ತಿದ್ದಾರೆ.

  ಆದರೆ ಈಗ ತಮ್ಮ ಪವನ್ ಕಲ್ಯಾಣ್ ಅವರ ಸಂಸಾರ ನೌಕೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿರುವುದು ಚಿರಂಜೀವಿ ತಲೆಗೆ ಹೊಸ ಹುಳ ಹೊಕ್ಕಿದ್ದಂತೆ ಆಗಿದೆ.

  ಆಂಧ್ರದ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ಮಾಡುವುದನ್ನು ಮರತೇ ಬಿಟ್ಟ ಎನ್ನುವಷ್ಟರಲ್ಲಿ ಪಂಜಾ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಲು ತಯಾರಾಗುತ್ತಿದ್ದಾರೆ. ಆದರೆ, ಈ ಮಧ್ಯೆ ಪ್ರೀತಿಸಿ ಮದುವೆಯಾದ ಪತ್ನಿ ರೇಣು ಪವನ್ ನನ್ನು ಬಿಟ್ಟು ಹೊರ ನಡೆದಿದ್ದಾರೆ ಎನ್ನುತ್ತಿದೆ ಟಾಲಿವುಡ್ ಗಾಸಿಪ್ ಕಾಲಂಗಳು.

  ಪವನ್ ಜೊತೆ ಇರೋ ಫಾರಿನ್ ಪಿಲ್ಲ: ಪವನ್ ಪತ್ನಿ ರೇಣು ದೇಸಾಯಿ ತಮ್ಮ ಜೊತೆಗೆ ಮಕ್ಕಳಾದ ಅಖಿರನಂದನ್ ಹಾಗೂ ಆದ್ಯರನ್ನು ಕರೆದುಕೊಂಡು ಹೋಗಿದ್ದಾರಂತೆ.

  ಪವನ್ ನಂತರ ಫಾರಿನ್ ಸೆಕ್ಸಿ ಹುಡುಗಿಯನ್ನು ಬುಕ್ ಮಾಡಿಕೊಂಡು ಲಿವ್ ಇನ್ ಸಂಬಂಧದಲ್ಲಿ ಇದ್ದಾನಂತೆ. ತೀನ್ ಮಾರ್ ಚಿತ್ರಕ್ಕಾಗಿ ವಿದೇಶಕ್ಕೆ ಹಾರಿದ್ದ ಪವನ್ ಬರುವಾಗ ವಿದೇಶಿ ಹುಡುಗಿಯನ್ನು ಜೊತೆಗೆ ಕರೆ ತಂದಿದ್ದಾನಂತೆ.

  ಪವನ್ ಸಂಸಾರದ ಗುಟ್ಟು ಹಾದಿ ಬೀದಿಯಲ್ಲಿ ರಟ್ಟಾದ ನಂತರ ಚಿರಂಜೀವಿ ತಮ್ಮನನ್ನು ಕರೆದು ಬುದ್ಧಿ ಹೇಳಿದ್ದಾರಂತೆ. ಅದರೆ, ಪವನ್ ಮಾತ್ರ ತೀನ್ ಮಾರ್ ಚಿತ್ರ ಮೈಕಲ್ ವೇಲಾಯುಧಂ ಪಾತ್ರದಂತೆ ಫ್ಲರ್ಟ್ ಮಾಡುವ ಚಿತ್ತಚೋರನಾಗಿ ಮೆರೆಯುತ್ತಿದ್ದಾನೆ ಎಂದು ನಮ್ಮ ಟಾಲಿವುಡ್ ಬಾತ್ಮಿದಾರರು ಹೇಳುತ್ತಾರೆ.

  English summary
  Family problem in Mega Star Chiranjeevi's house is seems to be never ending daily soap. Chiranjeevi's brother Actor Pawan Kalyan has allegedly broken relationship with wife Renu and having live in relationship with a a foreigner.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X