ಹೋಟೆಲ್‌ನಲ್ಲಿ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದ ರಿಚಾ

By Rajendra

ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಬ್ಯೂಟಿ ಕ್ವೀನ್ ರಿಚಾ ಗಂಗೋಪಾಧ್ಯಾಯ. ಈಕೆ ಈಗಾಗಲೆ ತೆಲುಗು, ತಮಿಳಿನ ಬೆರಳೆಣಿಕೆಯ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಪಡ್ಡೆ ಹುಡುಗರ ಹೃದಯದಲ್ಲೂ ಒಂಚೂರು ಸ್ಥಾನ ಸಂಪಾದಿಸಿಕೊಂಡಿದ್ದಾರೆ.

ಇತ್ತೀಚೆಗೆ ಈಕೆ ಚೆನ್ನೈನ ಹೋಟೆಲ್ ಒಂದರಲ್ಲಿ ಸಿಂಗಲ್ ಬೆಡ್‌ ರೂಂ ಬಾಡಿಗೆಗೆ ತೆಗೆದುಕೊಂಡಿದ್ದರು. ಅಲ್ಲಿಗೆ ಆಕೆಯ ಬಾಯ್ ಫ್ರೆಂಡ್ ಸುಧಾಕರ್ ಬಂದಿದ್ದಾನೆ. ರಾಯರು ಬಂದಾಗ ಸಮಯ ರಾತ್ರಿಯಾಗಿತ್ತು. ಆತನೇನೋ ಸೀದಾ ರಿಚಾ ರೂಮಿಗೆ ಹೋಗಲು ಯತ್ನಿಸಿದ್ದಾನೆ.

ಅಷ್ಟರಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಆತನನ್ನು ಅಡ್ಡಹಾಕಿ ಈ ಸರಿಹೊತ್ತಿನಲ್ಲಿ ಆಕೆಯ ರೂಮಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಕ್ಲಿಯರ್ ಆಗಿ ಹೇಳಿ ಕಳುಹಿಸಿದೆ. ಆದರೆ ಈ ವಿಷಯ ತಿಳಿದುಕೊಂಡ ರಿಚಾ ರಿಸೆಪ್ಷನ್ ಮೇಲೆ ಎಗರಾಡಿದ್ದಾರೆ. ನನ್ನ ಲ್ಯಾಪ್ ಟಾಪ್ ಹಾಳಾಗಿದ್ದ ಕಾರಣ ಆತ ರಿಪೇರಿ ಮಾಡಲು ಬಂದಿದ್ದ ಎಂದು ರಿಚಾ ಅಲವತ್ತುಕೊಂಡಿದ್ದಾಳೆ.

ನಮ್ಮಲ್ಲೇ ಹಾರ್ಡ್ ವೇರ್ ಇಂಜಿನಿಯರ್ ಇದ್ದರು. ಅವರಿಗೆ ಕರೆ ಮಾಡಿದಿದ್ದರೆ ಸಾಕಾಗಿತ್ತು ಎಂದು ಹೋಟೆಲ್ ಮ್ಯಾನೇಜ್‌ಮೆಂಟ್ ಅದೂ ಇದೂ ಹೇಳಿ ರಿಚಾರನ್ನು ಸಾಗಹಾಕಿದೆ. ಆದರೆ ಅಷ್ಟರಲ್ಲಾಗಲೆ ಈ ಸುದ್ದಿ ಮಾಧ್ಯಮಗಳ ಕಿವಿಗೆ ಬಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇಷ್ಟಕ್ಕೂ ಸುಧಾಕರ್ ಯಾರೆಂದರೆ ಈತ ಫ್ಯಾಷನ್ ಫೋಟೋಗ್ರಾಫರ್. ರಿಚಾ ಅಭಿನಯಿಸಿದ ತಮಿಳು ಚಿತ್ರವೊಂದರಲ್ಲಿ ಲವರ್ ಪಾತ್ರದಲ್ಲಿ ಅಭಿನಯಿಸಿದ್ದ. ಅಲ್ಲಿಂದ ಅವರಿಬ್ಬರ ನಡುವೆ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇದ್ದು ಮೊನ್ನೆ ಐಸ್ ಪೈಸ್ ಆಡಲು ಹೋದಾಗ ಸಿಕ್ಕಿಬಿದ್ದಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

More from Filmibeat

English summary
Indian film actress, model and former beauty queen Richa Gangopadhyay was caught red handed in Chennai. Indeed, that was in the issue of her boy friend Sudhakar. After appearing in commercials, she made her film debut in the 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X