For Quick Alerts
  ALLOW NOTIFICATIONS  
  For Daily Alerts

  ಶ್ರಿಯಾ ಸರನ್‌ ಮತ್ತು ಪ್ರೊಡ್ಯೂಸರ್ ನಡುವೆ ಕಿರಿಕ್

  By Rajendra
  |

  ಕಲಾವಿದರ ಪಾಲಿಗೆ ಚಿತ್ರ ನಿರ್ಮಾಪಕ ಅನ್ನದಾತ ಇದ್ದಂತೆ. ಇವರಿಬ್ಬರ ನಡುವಿನ ಸಂಬಂಧ ಕೆಲವೊಮ್ಮೆ ಬಿಗಡಾಯಿಸುವುದೂ ಉಂಟು. ಅದೇ ರೀತಿಯ ಪರಿಸ್ಥಿತಿ ದಕ್ಷಿಣದ ತಾರೆ ಶ್ರಿಯಾ ಸರನ್ ಎದುರಾಗಿದೆ. ನಿರ್ಮಾಪಕರೊಬ್ಬರು ಆಕೆಗೆ ಕೊಡಬೇಕಾಗಿದ್ದ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

  ತಮಿಳಿನ 'ಪೋಕಿರಿ ರಾಜಾ' ಎಂಬ ಚಿತ್ರ ಮಲಯಾಳಂಗೆ ಡಬ್ ಆಗಿದೆ. ಬೇರೆ ಭಾಷೆಯಗೆ ಈ ಚಿತ್ರ ಡಬ್ ಆದರೆ ಹೆಚ್ಚುವರಿ ಸಂಭಾವನೆ ನೀಡಬೇಕು ಎಂದು ಮಾತುಕತೆಯಾಗಿತ್ತಂತೆ. ಇದಕ್ಕೆ ನಿರ್ಮಾಪಕರು ಒಪ್ಪಿದ್ದರಂತೆ. ಇಬ್ಬರೂ ಪರಸ್ಪರ ಒಪ್ಪಿ ಒಪ್ಪಂದ ಒಂದಕ್ಕೆ ಸಹಿ ಹಾಕಿದ್ದಾರೆ. ಈಗ ಮಲಯಾಳಂಗೆ 'ಪೋಕಿರಿ ರಾಜಾ' ಡಬ್ ಆಗಿದೆ. ಒಪ್ಪಂದ ಪ್ರಕಾರ ಶ್ರೀಯಾಗೆ ಹೆಚ್ಚುವರಿ ಸಂಭಾವನೆ ಸಲ್ಲಬೇಕು.

  ಆದರೆ ಮಲಯಾಳಂ ಡಬ್ಬಿಂಗ್ ರೈಟ್ಸ್ ಪಡೆದಿರುವ ಪಾಂಡ್ಯನ್ ಎಂಬ ನಿರ್ಮಾಪಕರು ವಿಚಿತ್ರ ಪರಿಸ್ಥಿತಿ ಎದುರಿಸುವಂತಾಗಿದೆ. "ತಾವು ಶ್ರಿಯಾ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಆಕೆ ಮೂಲ ಚಿತ್ರದ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಹಾಗಾಗಿ ಶ್ರಿಯಾಗೆ ಅವರೇ ಸಂಭಾವನೆ ಕೊಡಬೇಕು" ಎಂದಿದ್ದಾರೆ.

  ಆದರೆ ಶ್ರಿಯಾ ಮಾತ್ರ ನಿರ್ಮಾಪಕ ಪಾಂಡ್ಯನ್ ವಿರುದ್ಧ ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ. ಮಲಯಾಳಂನ 'ರಾಜಾ ಪೋಕಿರಿ ರಾಜಾ' ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ಗುಡುಗಿದ್ದಾರೆ. ನಿರ್ಮಾಪಕ ಪಾಂಡ್ಯನ್ ಮಾತ್ರ ಕಕ್ಕಾಬಿಕ್ಕಿಯಾಗಿ ಆಕಾಶ ನೋಡುವಂತಾಗಿದೆ. (ಏಜೆನ್ಸೀಸ್)

  English summary
  South Indian actress Shriya Saran has filed a complaint with the South Indian Film Artistes Association that a producer had failed to pay her for her debut movie Raja Pokkiri Raja

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X