»   » ಸುಮನಾ ಕಿತ್ತೂರು ಸಖತ್ ಬೇಜಾರಾಗಿದ್ದಾರೆ

ಸುಮನಾ ಕಿತ್ತೂರು ಸಖತ್ ಬೇಜಾರಾಗಿದ್ದಾರೆ

Posted By:
Subscribe to Filmibeat Kannada

*ಜಯಂತಿ 

Director Sumana Kittur
ಬಹುತೇಕ ಪತ್ರಿಕೆಗಳ ವಿಮರ್ಶಕರು 'ಸ್ಲಂಬಾಲ' ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವು ವಿಮರ್ಶಕ ಮಹಾಶಯರು ಮಾತ್ರ ಸುಮನಾ ಸಿನಿಮಾದ ಬಗ್ಗೆ ಕೊಂಕು ನುಡಿದಿದ್ದಾರೆ.

ಇಂಥ ಕಾರಣಕ್ಕೆ ಚಿತ್ರ ಸರಿಯಾಗಿಲ್ಲ ಎಂದು ಹೇಳಿದ್ದರೆ ಸುಮನಾಗೆ ಬೇಸರ ಆಗುತ್ತಿರಲಿಲ್ಲವೇನೋ? ತರುಣಿಯೊಬ್ಬಳು ಚಿತ್ರ ನಿರ್ದೇಸಿದ್ದಾಳೆ ಎನ್ನುವುದನ್ನು ಅರಗಿಸಿಕೊಳ್ಳಲಾಗದ ಕಾರಣಕ್ಕೆ ಅಪಸ್ವರಗಳು ಕೇಳಿಸುತ್ತಿವೆ. ಒಂದು ವಿಮರ್ಶೆಯಲ್ಲಂತೂ ಸುಮನಾಗೆ ನಿರ್ದೇಶನದ ಅಆಇಈ ಗೊತ್ತಿಲ್ಲ ಎಂದು ಜರೆಯಲಾಗಿದೆಯಂತೆ. ಇಂಥ ಕೊಂಕುಗಳ ಬಗ್ಗೆ ಸುಮನಾ ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ನೋವು ತೋಡಿಕೊಳ್ಳುತ್ತಿದ್ದಾರೆ.

ಚಿತ್ರಕಥೆಗೆ ಸುಮನಾ ಬದ್ಧರಾಗಿದ್ದಾರೆ. ಅಗ್ನಿ ಶ್ರೀಧರ್ ಹಾಕಿಕೊಟ್ಟ ಲಕ್ಷ್ಮಣರೇಖೆಯಿಂದ ಇಂಚಷ್ಟೂ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವುದು ಮತ್ತೊಂದು ಆರೋಪ. 'ಆರೋಪದಲ್ಲಿ ಹುರುಳಿಲ್ಲ. ಚಿತ್ರಕಥೆಯಾಚೆಗೆ ನಿರ್ಣಯ ಕೈಗೊಳ್ಳಲಿಕ್ಕೆ ನನಗೆ ಸ್ವಾತಂತ್ರ್ಯವಿತ್ತು. ಹಲವೆಡೆಗಳಲ್ಲಿ ಚಿತ್ರಕಥೆ ಮೀರಿ ದೃಶ್ಯಗಳನ್ನು ಸಂಯೋಜಿಸಿದ್ದಿದೆ. ಇದ್ಯಾವುದೂ ಕೊಂಕಿಗರ ಕಣ್ಣಿಗೆಬೀಳುತ್ತಿಲ್ಲ' ಎನ್ನುವುದು ಯುವ ನಿರ್ದೇಶಕಿಯ ಬೇಜಾರು.

ಈ ನಡುವೆ ಸುಮನಾ ಅವರಿಗೆ ನಿರ್ದೇಶನದ ಮತ್ತಷ್ಟು ಅವಕಾಶಗಳು ಬಂದಿವೆಯಂತೆ. ಅವರು ಒಂದೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಹಿಂದಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎನ್ನುವ ಗುಸುಗುಸೂ ಇದೆ. ಸದ್ಯಕ್ಕೆ ಸುಮನಾ ಯಾವುದನ್ನೂ ದೃಢೀಕರಿಸುತ್ತಿಲ್ಲ. ಬದಲಿಗೆ ನಗುತ್ತಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada