ವಾಣಿಜ್ಯ ಮಂಡಳಿಯೂ ದಪ್ಪಚರ್ಮವೂ

By *ಜಯಂತಿ

ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತದೇ ಮೆಳ್ಳೆಗಣ್ಣ ವ್ಯಕ್ತಿಯ ಕಡೆ ಅಗಲಗಣ್ಣಿನಿಂದ ನೋಡಿದೆ. ವಿತರಕ ವಿಜಯಕುಮಾರ್ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡ್ದಿದಾರೆ ಎಂಬಲ್ಲಿಗೆ ಇತಿಹಾಸದ ಪುನರಾವರ್ತನೆಯಾಗಿದೆ.

ಕಳೆದ ಸಲದ ಚುನಾವಣೆಗೆ ಮೊದಲು ಇದೇ ವಿಜಯಕುಮಾರ್ 'ಜಲ್ಸಾ" ತೆಲುಗು ಚಿತ್ರವನ್ನು ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ ತೆರೆಕಾಣಿಸಿದ್ದರು. ಆಗಲೂ ಅವರನ್ನು ಪದಾಧಿಕಾರಿ ಕುರ್ಚಿಯಿಂದ ಕೆಳಗೆ ಇಳಿಸಲಾಗಿತ್ತು. ಆದರೆ, ಕೆಲವೇ ತಿಂಗಳ ನಂತರ ನಡೆದ ಮಂಡಳಿಯ ಚುನಾವಣೆಯಲ್ಲಿ ಗೆದ್ದು ಬಂದು ನಾಚಿಕೆಯೇ ಇಲ್ಲದೆ ನಕ್ಕಿದ್ದರು.

ಸುದ್ದಿಗೋಷ್ಠಿಯಲ್ಲಿ ಜಯಮಾಲಾ ಅವರ ಜೊತೆ ಲಕ್ಷ್ಮಣನಂತೆ ನಿಂತಿದ್ದ ವಿಜಯ್‌ಕುಮಾರ್ ಅವರನ್ನು ನೋಡಿ ಪತ್ರಕರ್ತರು ಅವಾಕ್ಕಾಗಿದ್ದರು. "ಇಂಥವರನ್ನು ಕಟ್ಟಿಕೊಂಡು ಹೇಗೆ ಕೆಲಸ ಮಾಡುತ್ತೀರಿ" ಎಂದು ನೇರವಾಗಿಯೇ ಅಧ್ಯಕ್ಷಿಣಿಯನ್ನು ಪ್ರಶ್ನಿಸಿದ್ದರು. "ಇನ್ನುಮುಂದೆ ಇಂಥದ್ದೆಲ್ಲ ನಡೆಯೊಲ್ಲ. ಪ್ರಾಮಿಸ್" ಎಂದಿದ್ದರು ಜಯಮಾಲಾ. ವಿಜಯ್‌ಕುಮಾರ್ ಕೂಡ "ಹೌದು ಹೌದು" ಎಂದಿದ್ದರು. ನಾಯಿಬಾಲ ಹಾಗೇ ಇದೆ ಎನ್ನುವುದು ಮಗಧೀರ ಪ್ರಕರಣದಿಂದ ಸಾಬೀತಾಗಿದೆ.

ಅಚಿದಹಾಗೆ, ವಾಣಿಜ್ಯ ಮಂಡಳಿಯಲ್ಲಿರುವುದು ಮೂರು ವಿಂಗು- ನಿರ್ಮಾಪಕರು, ನಿರ್ದೇಶಕರು, ವಿತರಕರು ಹಾಗೂ ಪ್ರದರ್ಶಕರು. ಈ ಪೈಕಿ ಕೊನೆ ವಿಂಗಿನವರ ಹಾವಳಿ ಮೊದಲಿನಿಂದಲೂ ಜಾಸ್ತಿ. ಸಹಜವಾಗಿಯೇ ಮಂಡಳಿಯ ಪದಾಧಿಕಾರಿಗಳಲ್ಲಿ ಅವರಿಗೆ ಪಾಲು ಕೊಡಲೇಬೇಕು. ಯಾರಿಗೆ ಧನಶಕ್ತಿ, ಪ್ರಭಾವ, ಗೆಳೆಯರ ಬಳಗ ದೊಡ್ಡದಿರುತ್ತದೋ ಅಂಥವರು ಆರಿಸಿಬರುತ್ತಾರೆ. ಈ ಎಲ್ಲಾ ಗುಣ ಲಕ್ಷಣಗಳೂ ವಿಜಯಕುಮಾರ್‌ಗೆ ಇವೆ.

ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮುಳ್ಳಿನ ಮೇಲೆ ಸದಾ ತಾವು ಕೂತಿರುವುದು ಎಂದು ಕೆಲವು ತಿಂಗಳಿನಿಂದ ಹೇಳುತ್ತಲೇ ಬಂದಿದ್ದಾರೆ. ಮಂಡಳಿಯ ಪದಾಧಿಕಾರಿಗಳು ಮಾಡುವ ತರಲೆಗಳ ವಿಷಚಿiದಲ್ಲಿ ತಿಪ್ಪೆ ಸಾರಿಸಿ ಸಾರಿಸಿ ಅವರಿಗೂ ಸಾಕಾಗಿದೆ. ಹಾಗಂತ ಆಪ್ತೇಷ್ಟರಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಮತ್ತೆ ವಿಜಯ ಮಂಡಳಿ!
ತಿಂಗಳುಗಳ ಲೆಕ್ಕಾಚಾರದಲ್ಲಿ ನೋಡಿದರೆ, ಜಯಮಾಲಾ ಅಂಡ್ ಕಂಪನಿಯ ಅಧಿಕಾರವಧಿ ಈಗಾಗಲೇ ಮುಗಿದಿದೆ. ಇಷ್ಟು ಹೊತ್ತಿಗೆ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ವಾರ್ಷಿಕ ಸಾಮಾನ್ಯ ಸಭೆ ಮಾಡಿದ ನಂತರವೇ ಅದು ನಡೆಯುವುದು. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಕೆಲಸಗಳಲ್ಲೇ ಕೆಲವು ತಿಂಗಳು ತೊಡಗಿಕೊಂಡ ಜಯಮಾಲ ಆಮೇಲಾಮೇಲೆ ತರಲೆಗಳನ್ನು ನೋಡತೊಡಗಿದ್ದು. ನವೆಂಬರ್-ಡಿಸೆಂಬರ್ ಹೊತ್ತಿಗೆ ಇನ್ನೊಂದು ಚುನಾವಣೆ. ಈಗ ಪದಚ್ಯುತರಾಗಿರುವ ವಿಜಯಕುಮಾರ್ ಮತ್ತೆ ಅದೇ ಚುನಾವಣೆಗೆ ನಿಂತರೂ ಆಶ್ಚರ್ಯವಿಲ್ಲ.

ಮಂಡಳಿ ಇಂಥ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಹಿಂದೆ ಅಧ್ಯಕ್ಷರಾಗಿದ್ದ ಎಚ್.ಡಿ.ಗಂಗರಾಜು, ರಜನೀಕಾಂತ್ ಸಿನಿಮಾ ಬಂತೆಂದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ದಪ್ಪ ನಾಲಗೆಯಿಂದ ಏನೇನೋ ಸಮಜಾಯಿಷಿ ಕೊಡುತ್ತಿದ್ದರು.

ಹಣ, ಪ್ರತಿಷ್ಠೆ, ವ್ಯಾಪಾರ, ಲೆಕ್ಕಾಚಾರ ಇವಿಷ್ಟೇ ತನ್ನ ಆದ್ಯತೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಎಲ್ಲಿಯವರೆಗೆ ಭಾವಿಸಿರುತ್ತದೋ, ಅಲ್ಲಿಯವರೆಗೆ ವಿಜಯಕುಮಾರ್ ತರಹದ ಇನ್ನಷ್ಟು ಮರಿಗಳು ಅಲ್ಲಿ ಜನ್ಮತಳೆಯುವುದರಲ್ಲಿ ಅನುಮಾನವೇ ಇಲ್ಲ. ಸರ್ಕಾರದ ಹಂಗಿಲ್ಲದ ಸ್ವತಂತ್ರ ಸಂಸ್ಥೆಯೊಂದು ನಾಡು-ನುಡಿಯ ವಿಷಯದಲ್ಲಿ ಎಷ್ಟೆಲ್ಲಾ ಉಡಾಫೆಯಾಗಿ ಇರುತ್ತದೆ ಎಂಬುದಕ್ಕೆ ವಾಣಿಜ್ಯ ಮಂಡಳಿ ಬೆಸ್ಟ್ ಎಕ್ಸಾಂಪಲ್!

ವಿಪರ್ಯಾಸ ನೋಡಿ. ಕನ್ನಡ ನಿರ್ಮಾಪಕರಿಗೆ ಪರಭಾಷಾ ಚಿತ್ರಗಳಿಂದ ಅನ್ಯಾಯವಾಗುತ್ತಿದೆ ಎಂದು ನಿರ್ಮಾಪಕರು ಗೋಳಾಡುತ್ತಿದ್ದಾರೆ. ಇವರುಗಳ ಮುಂಚೂಣಿಯಲ್ಲಿ ನಿಂತಿರುವುದು ಕೆ.ಸಿ.ಎನ್.ಚಂದ್ರಶೇಖರ್. ಕೆಲ ದಿನಗಳ ಹಿಂದಷ್ಟೇ ಇವರು "ಶ್ವೇತನಾಗ" ಚಿತ್ರದ ಡಬ್ಬಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಆರೋಪಿಯ ಸ್ಥಾನದಲ್ಲಿ ನಿಂತಿದ್ದರು. ನೈತಿಕತೆ ಹೊತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದೂ ಹೇಳಿದ್ದರು. ಇವತ್ತು ಚಂದ್ರು ಕನ್ನಡ ಚಿತ್ರಗಳ ಉಳಿವಿನ ಮಾತಾಡುತ್ತಿದ್ದಾರೆ! ತಮಾಷೆಯಾಗಿದೆ ಅಲ್ಲವೇ?

ಅಂದು ಶಿವಾಜಿ, ಇವತ್ತು ಮಗಧೀರ, ನಾಳೆ ಕಂದಸ್ವಾಮಿ(ತೆಲುಗಿನಲ್ಲಿ ಮಲ್ಲನ್ನ). ಕನ್ನಡ ನಿರ್ಮಾಪಕರು ಚೀರಾಡುತ್ತಲೇ ಇರುತ್ತಾರೆ, ಹಂಚಿಕೆದಾರರು ಕಣ್ಣಾಮುಚ್ಚಾಲೆ ಆಡುತ್ತಲೇ ಇರುತ್ತಾರೆ. ಕಣ್ಣೀರು ಒರೆಸುವ ನಾಟಕವನ್ನು ವಾಣಿಜ್ಯ ಮಂಡಳಿ ಆಡುತ್ತಲೇ ಇರುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X